ಕುಂಬಳೆ:ಲಾಕ್ ಡೌನ್ ಅವಧಿಯಲ್ಲಿ ಕಾಸರಗೋಡು ಜಿಲ್ಲೆಗೆ ಇತರ ರಾಜ್ಯಗಳಿಂದ ಅಕ್ರವಾಗಿ ಮದ್ಯ ಮತ್ತು ಮಾದಕದ್ರವ್ಯ ಸಾಗಣೆ ತಡೆಯುವ ನಿಟ್ಟಿನಲ್ಲಿ ಅಬಕಾರಿ ಇಲಾಖೆಯ ನೇತೃತ್ವದಲ್ಲಿ ವಿವಿಧೆಡೆ ಚುರುಕಿನ ತಪಾಸಣೆ ನಡೆಯುತ್ತಿದೆ. ಇದರ ಅಂಗವಾಗಿ 2.1 ಕಿಲೋ ಗಾಂಜಾ, 28.08 ಲೀ. ಕರ್ನಾಟಕ ನಿರ್ಮಿತ ಮದ್ಯ, 35 ಲೀ. ಹುಳಿರಸ ಪತ್ತೆಮಾಡಿ ವಶಪಡಿಸಲಾಗಿದೆ.
ಕುಂಬಳೆ ಕೊಯಿಪ್ಪಾಡಿ ಗ್ರಾಮದ ಪೆರುವಾಡ್ ಕಡಪ್ಪುರಂ ರಸ್ತೆಯ ರೈಲ್ವೇ ಅಂಡರ್ ಆಸುಪಾಸಿನಲ್ಲಿ 2.1 ಕಿಲೋ ಗಾಂಜಾ ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಕಣ್ಣೂರು ಕಕ್ಕಾಡ್ ನಿವಾಸಿ ಮಹಮ್ಮದ್ ಅಶ್ರಫ್ (32), ಮೇಲ್ಪರಂಬ ಕಳನಾಡ್ ನಿವಾಸಿ ಅಶ್ರಫ್ ಎಂಬವರ ವಿರುದ್ಧ ಕೇಸು ದಾಖಲಾಗಿದೆ. ಬೇಳ ಗ್ರಾಮದ ಮಜೀರ್ ಪಳ್ಳದಲ್ಲಿ ಬೈಕೊಂದರಲ್ಲಿ ಅಕ್ರಮ ಸಾಗಾಟ ನಡೆಸುತ್ತಿದ್ದ 15.12 ಲೀ. ಕರ್ನಾಟಕ ನಿರ್ಮಿತ ಮದ್ಯ ಪತ್ತೆಯಾಗಿದೆ. ಹರ್ಷ ರಾಜ್ ಎಂಬಾತನ ವಿರುದ್ಧ ಕೇಸು ದಾಖಲಾಗಿದೆ. ಅಜಾನೂರು ಗ್ರಾಮದರಾವಣೀಶ್ವರಂ ನಲ್ಲಿ 12.96 ಲೀ. ಕರ್ನಾಟಕನಿರ್ಮಿತ ಮದ್ಯ ಪತ್ತೆಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಎಂ.ಶಶಿ, ಸರೋಜಿನಿ ಎಂಬವರ ವಿರುದ್ಧ ಕೇಸು ದಾಖಲಾಗಿದೆ. ಕಳ್ಳಾರ್ ಗ್ರಾಮದ ಕುಡುಂಬೂರ್ ಎಂಬಲ್ಲಿ 35 ಲೀಟರ್ ಹುಳಿರಸ ಪತ್ತೆಯಾಗಿದೆ.

