ತಿರುವನಂತಪುರ: ಕರೋನಾ ಮಹಾಮಾರಿಯ ಬಿಕ್ಕಟ್ಟನ್ನು ಎದುರಿಸುತ್ತಿರುವ ದೇಶದಲ್ಲಿ ಇಂದು ಕಾಂಗ್ರೆಸ್ಸ್ ಸಹಿತ ಇತರ ಪಕ್ಷಗಳ ರಾಜಕೀಯ ತಂತ್ರಗಾರಿಕೆ, ಟೀಕೆಗಳಿಗೆ ಮಹಾಮಾರಿಯ ವಿರುದ್ದ ಸಮರ್ಥ ನಡೆಯ ಮೂಲಕ ನಿರುತ್ತರವಾಗುವ ಕ್ರಮಗಳಿಂದ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಕಾರ್ಯವೆಸಗುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಹೆಳಿದರು. ಬಿಜೆಪಿ ದೇಶದ ಹಿತಾಸಕ್ತಿಗೆ ಪ್ರಮುಖ ಆದ್ಯತೆ ನೀಡಿದ್ದಾರೆ ಇತರ ಪಕ್ಷಗಳು ಅವರ ಪಕ್ಷದ ಹಿತಾಸಕ್ತಿ ಮತ್ತು ನಾಯಕರ ಹಿತಾಸಕ್ತಿಗೆ ಆದ್ಯತೆ ನೀಡುತ್ತಿರುವುದನ್ನು ಕಾಣುತ್ತೇವೆ. ಕಾರ್ಗಿಲ್ ಯುದ್ಧ ನಡೆದಾಗ ಸಂಸತ್ ಸಮ್ಮೇಳನ ಕರೆಯಲು ಹೇಳಿದ್ದರು ಎಂದು ಅವರು ತಿಳಿಸಿದರು.
ನರೇಂದ್ರ ಮೋದಿಯವರ ನೇತೃತ್ವದ ಎನ್ ಡಿ ಎ ಸರ್ಕಾರ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ಒಂದನೇ ವರ್ಷಾಚರಣೆಯ ಭಾಗವಾಗಿ ರಾಷ್ಟ್ರದ ಎಲ್ಲಾ ರಾಜ್ಯಗಳ ಬಿಜೆಪಿ ಪದಾಧಿಕಾರಿಗಳೊಂದಿಗೆ ನಡೆಸುವ ಬೃಹತ್ ವರ್ಚುವಲ್ ವಿಡಿಯೋ ಕಾನ್ಪರೆನ್ಸ್ ಅಂಗವಾವಾಗಿ ಮಂಗಳವಾರ ಸಂಜೆ ಕೇರಳ ರಾಜ್ಯ ಬಿಜೆಪಿ ಪದಾಧಿಕಾರಿ, ಕಾರ್ಯಕರ್ತರೊಂದಿಗೆ ಅವರ ಸಂವಾದ ನಡೆಸಿದರು.
ಕೊರೊನಾ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕರೆದ ಸಭೆಯಲ್ಲಿ ಕಾಂಗ್ರಸ್ಸ್ ಭಾಗವಹಿಸಿಲ್ಲ. ದೇಶವೇ ಕೊರೋನ ಕಡೆ ಮುಖ ಮಾಡುತ್ತಿರುವಾಗ ವಿರೋಧಿಗಳು ರಾಜಕೀಯ ಸಾಧನೆ ಮಾಡುತ್ತಿರುವುದು ಹೇಯಕರ ಎಂದು ಹೇಳಿದರು.
ಕೊರೊನಾ ವ್ಯಾಪಕತೆಯನ್ನು ತಡೆಯಲು ಮೋದಿಯವರ ನಡೆ ಸಮರ್ಥವಾಗಿ ಯಶಸ್ವಿಯಾಗಿದೆ. ಲಾಕ್ ಡೌನ್ ಯಾಕಾಗಿ ಎಂದು ಕೇಳಿದ ಪಕ್ಷಗಳು ಕೊರೊನಾದ ಭೀಕರತೆಯನ್ನು ಅರ್ಥ ಮಾಡದಿರುವುದು ಅವರ ಜನಪರ ಕಾಳಜಿಯ ದ್ಯೋತಕ ಎಂದು ನಡ್ಡಾ ತಿಳಿಸಿದರು. ಆದರೆ ಅದೇ ಪಕ್ಷಾಡಳಿತವಿರುವ ರಾಜ್ಯಗಳು ಲಾಕ್ ಡೌನ್ ವಿಸ್ತರಣೆಗೆ ದುಂಬಾಲು ಬಿದ್ದದ್ದವು. ಮತ್ತೆ ಇದೀಗ ಲಾಕ್ ಡೌನ್ ವಿನಾಯಿತಿ ಏಕೆ ಎಂದು ಕೇಳುತ್ತಿದ್ದಾರೆ.
ಕಳೆದ ಆರು ದಶಕಗಳಲ್ಲಿ ರಾಷ್ಟ್ರವನ್ನು ತಳಮಟ್ಟಕ್ಕೊಯ್ದ ಪರಿಸ್ಥಿತಿಯಿಂದ ಕಳೆದ ಆರು ವರ್ಷಗಳಲ್ಲಿ ಮತ್ತೆ ಮೇಲ್ಮಟ್ಟಕ್ಕೆ ತರಲು ಮೋದಿ ಯಶಸ್ವಿಯಾಗಿದ್ದಾರೆ. ಕಾಂಗ್ರೆಸ್ಸ್ ಅಧಿಕಾರದಲ್ಲಿರುವ ಯಾವ ರಾಜ್ಯಗಳಲ್ಲೂ ಇಂದಿನ ವಿಷಯ ಸ್ಥಿತಿಯ ಹಿನ್ನೆಲೆಯಲ್ಲಿ ಇಂಧನ ಬೆಲೆಯನ್ನು ಕಡಿಮೆಗೊಳಿಸಿಲ್ಲ.ಪ್ರಸ್ತುತ ಕಾಂಗ್ರೆಸ್ಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಇಂಧನ ಬೆಲೆ ಇಳಿಸುವಂತೆ ಒತ್ತಾಯಿಸಿ ಪ್ರಧಾನಿಗೆ ಪತ್ರಬರೆದಿರುವರು. ಆದರೆ ಅವರು ತಮ್ಮ ಸ್ವ ಪಕ್ಷಾಡಳಿತಗಳಿರುವ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಈ ಪತ್ರ ಬರೆಯಬೇಕಿತ್ತು ಎಂದರು.
ಕೇರಳದಲ್ಲಿ ದಶಕಗಳಿಂದ ಆಡಳಿತ ನಡೆಸುತ್ತಿರುವ ಎಡ-ಬಲ ರಂಗಗಳು ದುರಾಡಳಿತಗಳಿಂದ ಜನರನ್ನು ಸಂಕಷ್ಟಕ್ಕೆ ತಳ್ಳುತ್ತಿದೆ. ಕೇಂದ್ರ ಸರ್ಕಾರದ ಯೋಜನೆಗಳನ್ನು ತಮ್ಮ ಆಡಳಿತದ ಯೋಜನೆಯೆಂದು ಬಿಂಬಿಸಿ ಹೆಸರು ಬದಲಾಯಿಸಿ ಜಾರಿಗೊಳಿಸುವ ಕುತಂತ್ರಗಳನ್ನು ನಡೆಸುತ್ತಿದೆ. ಜನಸಾಮಾನ್ಯರಿಗೆ ರೂ.5 ಲಕ್ಷದ ವರೆಗೆ ಧನ ಸಹಾಯ ನೀಡುವ ಆಯುಷ್ಮಾನ್ ಭಾರತ್ ಯೋಜನೆಯನ್ನು ಕೇರಳದಲ್ಲಿ ಜಾರಿಯಾಗದಂತೆ ಹೆಣಗಾಡಲು ಕೇರಳ ಸರ್ಕಾರ ಪ್ರಯತ್ನಿಸಿತ್ತು. ಅಭಿವೃದ್ದಿ ವಿರೋಧಿ ರಾಜಕೀಯ ಪಕ್ಷಗಳು ಕೇರಳದ ಆಡಳಿತ ನಡೆಸಲು ಹೆಣಗುತ್ತಿರುವುದು ಎಂದು ಜೆ.ಪಿ.ನಡ್ಡಾ ತಿಳಿಸಿದರು.
ಕೊರೊನಾ ಲಾಕ್ ಡೌನ್ ಸಂಕಟದಲ್ಲಿ ಬಿಜೆಪಿ ಕಾರ್ಯಕರ್ತರು ಜನಸಾಮಾನ್ಯರ ನೆರವಿಗಾಗಿ ಸ್ತುತ್ಯರ್ಹವಾದ ಕೊಡುಗೆಗಳನ್ನು-ಸೇವೆಗಳನ್ನು ನೀಡಿದೆ. 19 ಕೋಟಿಗೂ ಮಿಕ್ಕಿದ ಜನರಿಗೆ ಆಹಾರ ಒದಗಿಸುವಲ್ಲಿ ಸಾಫಲ್ಯತೆ ಕಂಡಿದೆ. 5 ಕೋಟಿ ಕುಟುಂಬಗಳಿಗೆ ಅತ್ಯಗತ್ಯ ವಸ್ತುಗಳನ್ನೂ ಒದಗಿಸಿದೆ. 5 ಕೋಟಿ ಮಾಸ್ಕ್ ಗಳನ್ನು ಉಚಿತವಾಗಿ ವಿತರಿಸಿದೆ ಎಂದರು.
ಸ್ವಾವಲಂಬಿ ಭಾರತ ನಿರ್ಮಾಣವು ಪ್ರಧಾನಿ ನರೇಂದ್ರ ಮೋದಿಯವರ ಲಕ್ಷ್ಯವಾಗಿದೆ. ಸ್ಥಳೀಯ ವಸ್ತುಗಳಿಗೆ ಅಂತರಾಷ್ಟ್ರೀಯ ಮಾರುಕಟ್ಟೆ ಒದಗಿಸುವ ಕನಸುಗಳೊಂದಿಗೆ ಆತ್ಮ ನಿರ್ಭರ ಭಾರತ ಯೋಜನೆ ರೂಪಿಸಲಾಗಿದೆ. ಇದು ನಿರಂತರ ಪರಿಶ್ರಮದ ಮೂಲಕ ಸಾಧ್ಯವಾಗುವುದೆಂದು ಜೆ.ಪಿ.ನಡ್ಡಾ ಭರವಸೆಯ ಮಾತುಗಳನ್ನಾಡಿದರು.
ರಾಜ್ಯಾದ್ಯಂತ ಎಲ್ಲಾ ಜಿಲ್ಲೆ, ಮಂಡಲ, ಗ್ರಾಮ ಮಟ್ಟಗಳಲ್ಲಿ ಜೆ.ಪಿ.ನಡ್ಡಾ ಅವರ ವರ್ಚುವಲ್ ಭಾಷಣಗಳನ್ನು ಕಾರ್ಯಕರ್ತರು ವೀಕ್ಷಿಸಿದರು.


