ತಿರುವನಂತಪುರ: ಸಂಪರ್ಕ ಕಾರಣ ಕೊರೊನಾ ಹೆಚ್ಚುತ್ತಿರುವ ಅಂಶ ಬೆಳಕಿಗೆ ಬರುತ್ತಿದೆ. ಈ ಕಾರಣದಿಂದ ದೇವಾಲಯಗಳಲ್ಲಿ ಭಕ್ತರಿಗೆ ಮುಕ್ತ ಪ್ರವೇಶ ಅಪಾಯಕಾರಿ ಎಂಬ ಕಾರಣದಿಂದ ತಿರುವನಂತಪುರ ದೇವಸ್ವಂ ಬೋರ್ಡ್ ದೇವಾಲಯಗಳಿಗೆ ಭಕ್ತರ ಪ್ರವೇಶ ಮತ್ತೆ ನಿಯಂತ್ರಿಸಿದೆ. ದೇವಾಲಯಗಳು ಜೂನ್ 30 ರವರೆಗೆ ಮುಚ್ಚಲ್ಪಡಲಿದೆ.
ದೇವಾಲಯಗಳಿಗೆ ಭಕ್ತರ ಪ್ರವೇಶವನ್ನಷ್ಟೇ ನಿಷೇಧಿಸಲಾಗುತ್ತಿದೆ. ಆದರೆ ನಿತ್ಯ ನೈಮಿತ್ತಿಕ ಅನುಷ್ಠಾನಗಳು ನಡೆಯಲಿವೆ. ಮುಂಬರುವ ಕರ್ಕಟಕ ಅಮಾವಾಸ್ಯೆ ಉತ್ಸವವನ್ನು ಸಾಮಾಜಿಕ ಅಂತರ ಕಾಯ್ದು ನಿರ್ವಹಿಸುವುದು ಕಷ್ಟವಾಗಲಿದೆ ಎಂದು ಬೋರ್ಡ್ ಅಧ್ಯಕ್ಷ ಎಂ.ವಾಸು ಹೇಳಿರುವರು.
ಲಾಕ್ ಡೌನ್ ವಿನಾಯ್ತಿಯ ಭಾಗವಾಗಿ ರಾಜ್ಯದಲ್ಲಿ ದೇವಾಲಯಗಳನ್ನು ತೆರೆಯಲಾಗಿತ್ತು. ಆದರೆ ಸಂಪರ್ಕ ಕಾರಣ ವೈರಸ್ ವ್ಯಾಪಕವಾಗಿ ಹಬ್ಬುತ್ತಿರುವುದು ಮನಗಂಡು ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.


