ಕಾಸರಗೋಡು: ಕೋವಿಡ್ ಅವಧಿಯಲ್ಲಿ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಜನಜಂಗುಳಿ ನಡೆಯದಂತೆ ಮಾಡಲು ರೋಗಿಗಳಿಗೆ ಟೋಕನ್ ನೀಡುವ ಸೌಲಭ್ಯಕ್ಕಾಗಿ ವರ್ಚುವಲ್ ಕ್ಯೂ ಮೊಬೈಲ್ ಆಪ್ ಸಿದ್ಧವಾಗಿದೆ. ಪೆÇವ್ವಲ್ ಎಲ್.ಬಿ.ಎಸ್. ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ವಿಜ್ಞಾನ ವಿಭಾಗ "ಜಿ.ಎಚ್.ಕ್ಯೂ." ಎಂಬ ಹೆಸರಿನ ಈ ಆಪ್ ಜನರಲ್ ಆಸ್ಪತ್ರೆಗಾಗಿ ಸಿದ್ಧಪಡಿಸಿದೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಆಪ್ ಬಿಡುಗಡೆಗೊಳಿಸಿದರು.
ನಾಡಿದ್ದು(ಜೂ.10) ಯಿಂದ ಈ ಆಪ್ ಮೂಲಕ ಜನರಲ್ ಆಸ್ಪತ್ರೆಯ ಟೋಕನ್ ಲಭಿಸಲಿದೆ. ಟೋಕನ್ ಬುಕ್ಕಿಂಗ್ ಪ್ರತಿದಿನ ಬೆಳಗ್ಗೆ 6 ರಿಂದ 8 ಗಂಟೆವರೆಗೆ ಇರುವುದು. ಆನ್ ಲೈನ್ ಟೋಕನ್ ಲಭಿಸಿದವರು ಅಲ್ಲಿ ತಿಳಿಸಲಾದ ಸಮಯದಲ್ಲಿ ಆಸ್ಪತ್ರೆ ಕೌಂಟರ್ ಗೆ ತಲಪಿ ಒ.ಪಿ.ಟಿಕೆಟ್ ಪಡೆದು, ವೈದ್ಯರನ್ನು ಭೇಟಿಮಾಡಬೇಕು. ಆನ್ ಲೈನ್ ಮೂಲಕ ಟೋಕನ್ ಬುಕ್ಕಿಂಗ್ ನಡೆಸಲು ಸಾಧ್ಯವಾಗದೇ ಇರುವ ಮಂದಿ ಸಾಧಾರಣ ರೀತಿಯಲ್ಲಿ ಆಸ್ಪತ್ರೆಗೆ ಆಗಮಿಸಿ ಒ.ಪಿ.ಟಿಕೆಟ್ ಪಡೆದುಕೊಳ್ಳಬಹುದು ಎಂದದು ಆಸ್ಪತ್ರೆ ವರಿಷ್ಠಾಧಿಕಾರಿ ಡಾ.ರಾಜಾರಾಂ ತಿಳಿಸಿದರು.
ಗೂಗಲ್ ಪ್ಲೇ ಸ್ಟೋರ್ ನಿಂದ http://tiny.cc/ghque ಎಂಬ ಲಿಂಕ್ ಮೂಲಕ ಈ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ ಬಳಸಬಹುದು. ಆಪ್ ನಲ್ಲಿ ಕನ್ನಡ, ಇಂಗ್ಲೀಷ್, ಮಲೆಯಾಳಂ ಭಾಷೆಯಲ್ಲಿ ಮಾಹಿತಿಗಳು ಲಭಿಸಲಿವೆ.
ಎಲ್.ಬಿ.ಎಸ್. ಇಂಜಿನಿಯರಿಂಗ್ ಕಾಲೇಜಿನ ಕೊನೆಯ ವರ್ಷದ ಬಿಟೆಕ್ ಕಂಪ್ಯೂಟರ್ ಸಯನ್ಸ್ ವಿದ್ಯಾರ್ಥಿಗಳಾದ ಕೆ.ಬಿ.ಅಕ್ಷಯ್, ಬೋನಿ ಇಮ್ಯಾ ನ್ಯುವೆಲ್, ರೆನಾಲ್ಡ್ ಎಂಬವರು ಈ ಆಪ್ ಸಿದ್ಧಪಡಿಸಿದ್ದಾರೆ.
ಸಭೆಯಲ್ಲಿ ಜಿಲ್ಲಾ ಹಣಕಾಸು ಅಧಿಕಾರಿ ಕೆ.ಸತೀಶ್ಮ ಜನರಲ್ ಆಸ್ಪತ್ರೆ ವರಿಷ್ಠಾಧಿಕಾರಿ ಡಾ.ರಾಜಾರಾಂ, ಮಕ್ಕಳ ರೋಗ ತಜ್ಞೆ ಡಾ.ಕೆ.ಬಿ.ಪ್ರೀಮಾ, ಡಾ.ಸುರೇಶ್, ಎಲ್.ಬಿ.ಎಸ್.ಇಂಜಿನಿಯರಿಂಗ್ ಕಾಲೇಜಿನಪ್ರಾಂಶುಪಾಲ ಮಹಮ್ಮದ್ ಶುಕೂರ್, ಸಹಾಯಕ ಪ್ರಾಚಾರ್ಯ ಬಿ.ಸ್ವರಾಜ್ಕುಮಾರ್, ಕಾಲೇಜಿನ ರಕ್ಷಕ-ಶಿಕ್ಷಕ ಸಂಘ ಕಾರ್ಯದರ್ಶಿ ಅಜಯನ್ ಪನೆಯಾಲ್, ಕೆ.ಬಿ.ಅಕ್ಷಯ್ ಮೊದಲಾದವರು ಉಪಸ್ಥಿತರಿದ್ದರು.

