ಕಾಸರಗೋಡು: ಕೇರಳ ರಾಜ್ಯ ಖಾಸಗಿ ಬಸ್ ಆಫರೇಟರ್ಸ್ ಒಕ್ಕೂಟ (ಕೆಎಸ್‍ಆರ್‍ಡಿಬಿ) ಖಾಸಗಿ ಬಸ್ ಕ್ಷೇತ್ರದ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತಪ್ಪು ನೀತಿಗಳ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಿದೆ.
ಕಚ್ಚಾ ತೈಲ ಬೆಲೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ಯಾರೆಲ್‍ಗೆ 20 ರೂ.ತಲುಪಿದಾಗ ಮತ್ತು ದೇಶವು ಸಂಪೂರ್ಣ ಲಾಕ್ ಡೌನ್ ನಲ್ಲಿದ್ದಾಗ, ಡೀಸೆಲ್ ಬೆಲೆಯನ್ನು ಕಡಿಮೆ ಮಾಡುವ ಬದಲು ಕೇಂದ್ರ ಅಬಕಾರಿ ತೆರಿಗೆಯನ್ನು ಹೆಚ್ಚಿಸುವ ಮೂಲಕ ಡೀಸೆಲ್ ಬೆಲೆಯನ್ನು ಹೆಚ್ಚಿಸುವ ನೀತಿಯನ್ನು ಕೇಂದ್ರ ಸರ್ಕಾರ ಅಳವಡಿಸಿಕೊಂಡಿರುವುದನ್ನು ಸಭೆಯಲ್ಲಿ ಖಂಡಿಸಲಾಯಿತು.
ರಾಜ್ಯ ಸರ್ಕಾರವು ಒಂದೆಡೆ ಕೇಂದ್ರ ಸರ್ಕಾರದ ನೀತಿಯನ್ನು ಖಂಡಿಸಿ ಇನ್ನೊಂದೆಡೆ ರಾಜ್ಯದ ಸುಂಕವನ್ನು ಹೆಚ್ಚಿಸಿರುವುದು ಇಬ್ಬಗೆ ನೀತಿಯ ಪ್ರತೀಕವಾಗಿದೆ. ರಾಜ್ಯ ಸರ್ಕಾರ ಡೀಸೆಲ್ ಬೆಲೆ ಏರಿಕೆಯ ಮೇಲಿನ ಹೆಚ್ಚುವರಿ ತೆರಿಗೆಯನ್ನು ಹೆಚ್ಚಿಸಿದೆ.
ಖಾಸಗಿ ಬಸ್ ಉದ್ಯಮವನ್ನು ಸಂರಕ್ಷಿಸಬೇಕು, ಇತ್ತೀಚಿನ ಎನ್‍ಡಿಎಯ ಡೀಸೆಲ್ ಬೆಲೆಗಳ ಹೆಚ್ಚಳಗೊಳಿಸಿದ್ದರಿಂದ ರಾಮಚಂದ್ರನ್ ಆಯೋಗದ ವರದಿಯನ್ನು ಸ್ವೀಕರಿಸಬೇಕು ಎಂಬ ಧ್ಯೇಯದೊಂದಿಗೆ ಇಂದು(ಶುಕ್ರವಾರ) ಕಾಸರಗೋಡಿನ ಹೊಸ ಬಸ್ ನಿಲ್ದಾಣ ಆವರಣದಲ್ಲಿ ಜಿಲ್ಲಾ ಸಮಿತಿ ಪ್ರತಿಭಟನಾ ಮೆರವಣಿಗೆಯನ್ನು ಬೆಳಿಗ್ಗೆ 10 ಆಯೋಜಿಸಿದೆ. ಶಾಸಕ ಎನ್.ಎ. ನೆಲ್ಲಿಕುನ್ನು ಉದ್ಘಾಟಿಸುವರು.
ಈ ಬಗ್ಗೆ ನಡೆದ ಪೂರ್ವಭಾವೀ ಸಭೆಯಲ್ಲಿ ಜಿಲ್ಲಾಧ್ಯಕ್ಷ ಗಿರೀಶ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಸತ್ಯನ್ ಪೂಚಕ್ಕಾಡ್ ಸ್ವಾಗತಿಸಿದರು. ಕೇಂದ್ರ ಸಮಿತಿ ಸದಸ್ಯ ಸಿ.ಎ. ಮುಹಮ್ಮದ್ ಕುಂಞÂ್ಞ, ಎಂ. ಹಸಿನಾರ್, ಲಕ್ಷ್ಮಣನ್, ಪಿ.ಎ. ಮುಹಮ್ಮದ್ ಕುಂಞÂ, ಸಿ. ರವಿ, ಎನ್.ಎಂ. ಹಸಿನಾರ್ ಮತ್ತು ಸುಬ್ಬಣ್ಣ ಅಳ್ವ ಉಪಸ್ಥಿತರಿದ್ದು ಮಾತನಾಡಿದರು.


