ಕಾಸರಗೋಡು: ಮತ್ಸ್ಯ ಫೆಡ್ ನೇತೃತ್ವದಲ್ಲಿ ಜಿಲ್ಲೆಯ ಮೊದಲ ಆನ್‍ಲೈನ್ ಕಲಿಕಾ ತರಗತಿ ಕೊಠಡಿಗಳನ್ನು ಮಾವಿಲಕಡಪುರಂನ ಒರಿಯಾ ವಿದ್ಯಾಲಯದಲ್ಲಿ ಶಾಸಕ ಎಂ.ರಾಜಗೋಪಾಲನ್ ಉದ್ಘಾಟಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಮತ್ಸ್ಯ ಫೆಡ್ ಆಡಳಿತ ಮಂಡಳಿ ಸದಸ್ಯ ಕಟ್ಯಾಡಿ ಕುಮಾರನ್ ವಹಿಸಿದ್ದರು. ಜಿಲ್ಲೆಯ ಮೊದಲ ಆನ್‍ಲೈನ್ ಕಲಿಕಾ ಕೇಂದ್ರವನ್ನು ಮಾವಿಲಕಡಪುರದ ಒರಿಯಾರಾ ವಿದ್ಯಾಲಯದಲ್ಲಿ ಪ್ರಾರಂಭಿಸಲಾಯಿತು. ಮತ್ಸ್ಯ ಫೆಡ್ ನೇತೃತ್ವದಲ್ಲಿ ಜಿಲ್ಲೆಯ 12 ಕರಾವಳಿ ಮೀನುಗಾರಿಕಾ ಪ್ರದೇಶಗಳಲ್ಲಿ ಮೀನುಗಾರಿಕೆ ಸಹಕಾರ ಸಂಘಗಳ ಆಶ್ರಯದಲ್ಲಿ ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಈ ಯೋಜನೆಯನ್ನು ಕೇರಳ ರಾಜ್ಯ ಹಣಕಾಸು ವಿಭಾಗ ಮತ್ತು ಮತ್ಸ್ಯ ಫೆಡ್ ಜಂಟಿಯಾಗಿ ಜಾರಿಗೆ ತಂದಿದೆ.
ಸಮಾರಂಭದಲ್ಲಿ ಮತ್ಸ್ಯ ಫೆಡ್ ಜಿಲ್ಲಾ ವ್ಯವಸ್ಥಾಪಕ ಕೆ.ಎಚ್. ದಿನೇಶ್ ಉಪಸ್ಥಿತರಿದ್ದರು. ವಿ.ವಿ.ಉತ್ತಮನ್, ಅಬ್ದುಲ್ ಸಲಾಮ್, ತ್ರಿಕ್ಕರಿಪುರ ಪಡನ್ನ ಕಡಪ್ಪುರಂ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಕುಳಂಗರ ರಾಮನ್, ಪಂಚಾಯತಿ ಸದಸ್ಯ ಸುಮಾ ಕಣ್ಣನ್, ಜಿ.ಎಲ್.ಪಿ.ಎಸ್ ಮಾವಿಲಕಡಪುರಂ ಪ್ರಾಂಶುಪಾಲ ಎಂ.ಸುಂದರನ್ ಉಪಸ್ಥಿತರಿದ್ದು ಶುಭಹಾರೈಸಿದರು. ಶರೀಫ್ ಸ್ವಾಗತಿಸಿ, ವಂದಿಸಿದರು.


