ಕಾಸರಗೋಡು: ಸಾಫಲ್ಯ ಯೋಜನೆಯ ಅಂಗವಾಗಿ 42 ಎಂಡೋಸಲ್ಫಾನ್ ಸಂತ್ರ್ಸತರಿಗೆ ಸ್ವಂತ ಮನೆಯ ಭಾಗ್ಯ ಒದಗಿದೆ. ಚೀಟಿ ಎತ್ತುವ ಮೂಲಕ ಈ ಫಲಾನುಭವಿಗಳ ಆಯ್ಕೆ ನಡೆದಿದೆ. ಎಣ್ಮಕಜೆ ಗ್ರಾಮಪಂಚಾಯತ್ ನಲ್ಲಿ 36 ಮನೆಗಳು, ಸತ್ಯಸಯಿ ಟ್ರಸ್ಟ್ ಮೂಲಕ ನಿರ್ಮಿಸಲಾದ ಹೊಸದುರ್ಗ ತಾಲೂಕಿನಲ್ಲಿ ಬಾಕಿಯಿರುವ 9 ಮನೆಗಳು ಚೀಟಿ ಎತ್ತುವ ಮೂಲಕ ಆಯ್ಕೆಯಾಗಿವೆ.
ಜಿಲ್ಲಾಧಿಕಾರಿ ಕಚೇರಿ ಕಿರು ಸಭಾಂಗಣದಲ್ಲಿ ಈ ಸಂಬಂಧ ನಡೆದ ವಿಶೇಷ ಸಭೆಯಲ್ಲಿ ಚೀಟಿ ಎತ್ತುವಿಕೆ ನಡೆದಿದೆ. ಮೊದಲ ಚೀಟಿ ಎತ್ತುವಿಕೆಯನ್ನು ಕಾಸರಗೋಡು ವಲಯ ಕಂದಾಯಾಧಿಕಾರಿ ಟಿ.ಎಂ.ಅಹಮ್ಮದ್ ಕಬೀರ್ ನಡೆಸಿದರು.
ಎಂಡೋಸಲ್ಫಾನ್ ಸಂತ್ರಸ್ತರಲ್ಲಿ ಮನೆ ಮತ್ತು ಜಾಗಿಲ್ಲದವರನ್ನು ಐ.ಸಿ.ಡಿ.ಎಸ್. ಸುಪರ್ ವೈಸರ್ ಗಳ ಮೂಲಕ ಮೂಲಕ ಪತ್ತೆ ಮಾಡಲಾಗಿತ್ತು. ಈ ರೀತಿ ಪತ್ತೆಮಾಡಲಾದ 951 ಮಂದಿಯಲ್ಲಿ 15 ಮಂದಿಗೆ ಗ್ರಾಮಾಧಿಕಾರಿ ಮೂಲಕ ನಡೆಸಲಾದ ಪತ್ತೆಯಲ್ಲಿ 202 ಮಂದಿಯನ್ನು ಆಯ್ಕೆ ಮಾಡಲಾಗಿತ್ತು. ಇವರಲ್ಲಿ 27 ಮಂದಿಗೆ ಮನೆ ನಿರ್ಮಿಸಿ ನೀಡಲಾಗಿದೆ. ಉಳಿದಿರುವ 3 ಮನೆಗಳಿಗೆ, ಹೊಸದುರ್ಗ ತಾಲೂಕಿನ ಪೆರಿಯದಲ್ಲಿ ನಿರ್ಮಿಸುವ 27 ಮನೆಗಳಿಗೆ, ವೆಲ್ಳರಿಕುಂಡ್ ನಲ್ಲಿ ನಿರ್ಮಿಸುವ ಮನೆಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡುವ ಸಂಬಂಧ ಅರ್ಜಿ ಮತ್ತು ಪತ್ತೆ ಮೂಲಕ ಆಯ್ಕೆ ಮಾಡಲಾಗುವುದು. ಮನೆ ಲಭಿಸುವ ಫಲಾನುಭವಿಗಳಿಗೆ ಭೂಹಕ್ಕು ಪತ್ರ ಲಭ್ಯತೆ ಸಂಬಂಧ ತಹಸೀಲ್ದಾರರಿಗೆ ಅರ್ಜಿ ಸಲ್ಲಿಸಬೇಕು. ಭೂಹಕ್ಕು ಪತ್ರ ಲಭಿಸಿ ಒಮದು ತಿಂಗಳ ಅವಧಿಯಲ್ಲಿ ವಸತಿ ಆರಂಭಿಸಬೇಕು. ಇಲ್ಲದಿದ್ದಲ್ಲಿ ಭೂಹಕ್ಕು ರದ್ದುಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು. ಮನೆ ಲಭಿಸಿದವರು ನೀರು ಮತ್ತು ವಿದ್ಯುತ್ ಸಂಪರ್ಕಕ್ಕಾಗಿ ಸಂಬಂಧಪಟ್ಟ ಕಚೇರಿಗಳಿಗೆ ಅರ್ಜಿ ಸಲ್ಲಿಸಬೇಕು. ಇದಕ್ಕಿರುವ ತಾಂತ್ರಿಕ ಸಹಾಯ ಕಂದಾಯ ಇಲಾಖೆಯಿಂದ ಲಭಿಸಲಿದೆ.
ಚೀಟಿ ಎತ್ತುವ ಸಭೆಯಲ್ಲಿ ಉಪಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್, ಎಂಡೋಸಲ್ಫಾನ್ ಸೆಲ್ ಸಹಾಯಕ ಇಲ್ಲಾಧಿಕಾರಿ ವಿ.ಜೆ.ಶಂಸುದ್ದೀನ್, ಕಾಸರಗೋಡು ತಹಸೀಲ್ದಾರ್ ಎ.ವಿ.ರಾಜನ್, ಮಂಜೇಶ್ವರ ತಹಸೀಲ್ದಾರ್ ಪಿ.ಜೆ.ಆಂಟೋ, ಹೊಸದುರ್ಗ ತಹಸೀಲ್ದಾರ್ ಎನ್.ಮಣಿರಾಜ್, ವೆಳ್ಳರಿಕುಂಡ್ ತಹಸೀಲ್ದಾರ್ ಕುಂuಟಿಜeಜಿiಟಿeಜಕಣ್ಣನ್, ಜಿಲ್ಲಾ ವಾರ್ತಾ ಕಚೇರಿಯ ಸಹಾಯಕ ಸಂಪಾದಕ ರಶೀದ್ ಬಾಬು ಮೊದಲಾದವರು ಉಪಸ್ಥಿತರಿದ್ದರು.

