ಕಾಸರಗೋಡು: ಕೊರೋನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇದೀಗ ಆನ್ ಲೈನ್ ಮೂಲಕ ಶಿಕ್ಷಣ ನಡೆಯುತ್ತಿದೆ. ಈ ವೇಳೆ ಕನ್ನಡದಲ್ಲೂ ಈ ಸೌಲಭ್ಯ ಬೇಕು ಎಂಬ ಕೂಗು ಕೇಳಿಬಂದ ಹಿನ್ನೆಲೆಯಲ್ಲಿ ಕೇರಳ ರಾಜ್ಯ ಸರಕಾರ ಇದಕ್ಕೆ ಸ್ಪಂದಿಸಿ ಇದೀಗ ಕನ್ನಡದಲ್ಲೂ ಆನ್ ಲೈನ್ ವ್ಯವಸ್ಥೆ ಒದಗಿಸಿದೆ. ಈ ಸಂಬಂಧ ಕೇರಳ ತುಳು ಅಕಾಡೆಮಿ ಅಧ್ಯಕ್ಷ ಉಮೇಶ್ ಎಂ.ಸಾಲಿಯಾನ್ ಅವರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಮತ್ತು ಶಾಸಕ ಒ.ರಾಜಗೋಪಾಲನ್ ಅವರಿಗೆ ಮನವಿ ಸಲ್ಲಿಸಿದ್ದರು. ಕನ್ನಡಪರ ಮನವಿಗೆ ಸ್ಪಂದಿಸಿ ಸೌಲಭ್ಯ ಒದಗಿಸಿ ಕೊಟ್ಟ ರಾಜ್ಯ ಸರಕಾರಕ್ಕೆ ಮತ್ತು ಶಾಸಕರಿಗೆ ತುಳು ಅಕಾಡೆಮಿ ಅಧ್ಯಕ್ಷ ಕೃತಜ್ಞತೆ ಸಲ್ಲಿಸಿದ್ದಾರೆ.
ಕನ್ನಡ ಮಾಧ್ಯಮ ಆನ್ ಲೈನ್ ಶಿಕ್ಷಣ ಸೌಕರ್ಯ: ರಾಜ್ಯ ಸರ್ಕಾರಕ್ಕೆ ಕೃತಜ್ಞತೆ
0
ಜೂನ್ 18, 2020