ಮುಳ್ಳೇರಿಯ: ಕಾಸರಗೋಡು ಜಿಲ್ಲೆಯಲ್ಲಿ ಕಾಡಾನೆ ಹಾವಳಿಯಿಂದ ಕೃಷಿಕರು ಅನುಭವಿಸುತ್ತಿರುವ ಸಂಕಷ್ಟಗಳ ಬಗ್ಗೆ ಟೆಲಿ ಫಿಲ್ಮ್ ಚಿತ್ರೀಕರಣ ಆರಂಭಗೊಂಡಿತು. ಈ ಟೆಲಿ ಫಿಲ್ಮ್‍ಗೆ ಆನ (ಆನೆ) ಎಂದು ಹೆಸರಿಡಲಾಗಿದೆ.
ವಿಶ್ವಕರ್ಮ ಕ್ರಿಯೇಶನ್ಸ್‍ನ ಬ್ಯಾನರ್‍ನಲ್ಲಿ ದೇಲಂಪಾಡಿ ಅಡೂರಿನಲ್ಲಿ ಚಿತ್ರೀಕರಿಸುವ ಟೆಲಿಫಿಲ್ಮ್ ನಿರ್ದೇಶನವನ್ನು ಅಡೂರು ಪುರುಷೋತ್ತಮ ನೀಡಿದ್ದಾರೆ. ಅರಣ್ಯ ಪ್ರದೇಶದಲ್ಲಿ ವಾಸಿಸುವ ಕೃಷಿ ಕುಟುಂಬವೊಂದು ನಿರಂತರವಾಗಿ ಕಾಡಾನೆ ಹಾವಳಿಯಿಂದ ಅನುಭವಿಸುತ್ತಿರುವ ಸಂಕಷ್ಟವನ್ನು ಸೆರೆ ಹಿಡಿಯಲಾಗಿದೆ.
ಕಾಸರಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡುಗೆ ರಾಮಣ್ಣ ರೈ ಚಿತ್ರದಲ್ಲಿ ಅಭಿನಯಿಸಿದ್ದ ಬಾಲಕೃಷ್ಣ ಮಾಸ್ತರ್ ಅಡೂರು ಅವರು ಪ್ರಧಾನ ಪಾತ್ರದಲ್ಲಿದ್ದಾರೆ. ಕಾಸರಗೋಡು ಸಿಟಿ ಚಾನೆಲ್ ಕೆಮರಾಮೆನ್ ಆಬೀದ್ ಕ್ಯಾಮೆರಾ ನಿರ್ವಹಿಸಿದ್ದಾರೆ. ಪತ್ರಕರ್ತ ಶಾಫಿ ತೆರುವತ್ ಪಿ.ಆರ್.ಒ. ಆಗಿದ್ದಾರೆ.


