ತಿರುವನಂತಪುರ: ರಾಜ್ಯದಲ್ಲಿ ಕೋವಿಡ್ ಸಾವಿನ ಸಂಖ್ಯೆ ಏರುಗತಿಯಲ್ಲಿದೆ. ಸೋಮವಾರವೂ ರಾಜ್ಯದಲ್ಲಿ ಮರಣವೊಂದು ಉಂಟಾಗಿದ್ದು, ಮೃತನನ್ನು ಚಾಲಕ್ಕುಡಿಯ ಡಿನ್ನಿ ಚಾಕೊ (43) ಎಂದು ಗುರುತಿಸಲಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಕೋವಿಡ್ ಸಾವನ್ನಪ್ಪಿದವರ ಸಂಖ್ಯೆ 17 ಕ್ಕೆ ಏರಿಕೆಯಾಗಿದೆ.
ತ್ರಿಶೂರ್ ಜಿಲ್ಲೆಯಲ್ಲಿ ದಿನ್ನಿ ಚಾಕೊರ ಮರಣದೊಂದಿಗೆ ಮೃತರ ಸಂಖ್ಯೆ ಮೂರಕ್ಕೆ ಏರಿದೆ. ತ್ರಿಶೂರ್ ನಿವಾಸಿ ಕುಮಾರನ್ (87) ಭಾನುವಾರ ಮೃತಪಟ್ಟಿದ್ದರು.
ಕುಮಾರನ್ ಅವರಿಗೆ ಉಸಿರಾಟದ ತೀವ್ರ ಅಸ್ವಸ್ಥತೆಯ ಕಾರಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಸ್ವಸ್ಥೆತೆ ತೀವ್ರ ಗೊಂಡ ಹಿನ್ನೆಲೆಯಲ್ಲಿ ತ್ರಿಶೂರ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಯಿತಿ. ದಾಖಲಾದ ತಕ್ಷಣ ಮೃತಪಟ್ಟರು. ಘಟನೆಯ ಬಳಿಕ ಖಾಸಗಿ ಆಸ್ಪತ್ರೆಯ 40 ಜನರನ್ನು ಕ್ವಾರಂಟೈನ್ ಗೊಳಪಡಿಸಲಾಗಿದೆ. ವೈದ್ಯರು ಸಹಿತ ದಾದಿಯರು ಕ್ವಾರಂಟೈನ್ ಗೊಳಪಡಿಸಲಾಗಿದೆ.
ಕೋಝಿಕ್ಕೋಡ್ ನ ಪೆರುಮಣ್ಣ ನಿವಾಸಿ, ಕೋವಿಡ್ ಹಿನ್ನೆಲೆಯಲ್ಲಿ ಕ್ವಾರಂಟೈನ್ ನಲ್ಲಿದ್ದ ಬೀರಾನ್ ಕೋಯ ಎಂಬವರು ಸೋಮವಾರ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಅವರು ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದರು. ಊರಿಗೆ ಆಗಮಿಸಿ ಕ್ವಾರಂಟೈನ್ ನಲ್ಲಿದ್ದರು. ಈ ಮಧ್ಯೆ ಸೋಮವಾರ ಕ್ವಾರಂಟೈನ್ ನಿಂದ ಹೊರಡಲು ಅನುವಾಗುತ್ತಿರುವಂತೆ ಮೃತರಾದರು.


