ಕುಂಬಳೆ: ಕಾಸರಗೋಡು ಜಿಲ್ಲೆಯಲ್ಲಿ ವಿಶೇಷ ಚೇತನರಿಗೆ ಸಹಾಯ ಉಪಕರಣಗಳ ವಿತರಣೆ ಆರಂಭಗೊಂಡಿದೆ. ಜಿಲ್ಲಾಡಳಿತೆ ಜಾರಿಗೊಳಿಸುವ ವೀ ಡಿಸರ್ವ್ ಯೋಜನೆಯ ಊರನೇ ಹಂತದ ಫಲಾನುಭವಿಗಳಿಗೆ ಉಪಕರಣಗಳ ವಿತರಣೆ ಪ್ರಾರಂಭವಾಗಿದೆ.
ಈ ಸಂಬಂಧ ಕುಂಬಳೆ ಗ್ರಾಮಪಂಚಾಯತ್ ಕಚೇರಿಯಲ್ಲಿ ನಡೆದ ಸಮರಂಭದಲ್ಲಿ ಅಧ್ಯಕ್ಷ ಕೆ.ಪುಂಡರೀಕಾಕ್ಷ ಮೊದಲ ವಿತರಣೆಯ ಉದ್ಘಾಟನೆ ನಡೆಸಿದರು. ಸದಸ್ಯರಾದ ಸುಧಾಕರ ಕಾಮತ್, ಸುಜಿತ್ ರೈ, ಕೇರಳ ಸಮಾಜ ಸುರಕ್ಷೆ ಮಿಷನ್ ಜಿಲ್ಲಾ ಸಂಚಾಲಕ ಜಿಷೋ ಜೇಮ್ಸ್, ಸಂಚಾಲಕರಾದ ಅಶ್ರಫ್, ರಾಜೇಶ್ ಮೊದಲಾದವರು ಉಪಸ್ಥಿತರಿದ್ದರು.


