ಮುಳ್ಳೇರಿಯ: ಚೈನಾದ ಅತಿಕ್ರಮಣದ ವಿರುದ್ಧ ಹೋರಾಡಿ ಹುತಾತ್ಮರಾದ ಭಾರತದ ಧೀರ ಯೋಧರಿಗೆ ಹಿಂದು ಐಕ್ಯ ವೇದಿಕೆ ಮುಳಿಯಾರು ಪಂಚಾಯತ್ ಘಟಕ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಹಿಂದು ಐಕ್ಯವೇದಿಕೆ ಜಿಲ್ಲಾ ಕೋಶಾಧಿಕಾರಿ ವಾಮನ ಆಚಾರ್ಯ ಬೋವಿಕ್ಕಾನ ಅವರು ಹುತಾತ್ಮರಿಗೆ ಶ್ರದ್ಧಾಂಜಲಿ ಅರ್ಪಿಸಿ ಚೈನಾದ ಸಕಲ ಉತ್ಪನ್ನಗಳನ್ನು ಬಹಿಷ್ಕರಿಸಬೇಕೆಂದು ಕರೆಯಿತ್ತರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜನ್ ಮುಳಿಯಾರು ಮಾತನಾಡಿದರು. ಐಕ್ಯವೇದಿಕೆಯ ಪಂಚಾಯತ್ ಅಧ್ಯಕ್ಷ ದಾಮೋದರ ಅಧ್ಯಕ್ಷತೆ ವಹಿಸಿದರು. ಶ್ರೀಧರ ಗುರುಸ್ವಾಮಿ ವಂದಿಸಿದರು.

