ಕುಂಬಳೆ: ಚೈನಾ ಸಂಘರ್ಷದಲ್ಲಿ ಹುತಾತ್ಮರಾದ 20 ಮಂದಿ ವೀರ ಯೋಧರಿಗೆ ಕುಂಬಳೆ ಪಂಚಾಯತಿ ಬಿಜೆಪಿ ಸಮಿತಿಯ ನೇತೃತ್ವದಲ್ಲಿ ಗುರುವಾರ ಶ್ರದ್ದಾಂಜಲಿ ನಡೆಯಿತು.
ಕುಂಬಳೆ ಪೇಟೆಯಲ್ಲಿ ಸಾಗಿಬಂದ ಬಿಜೆಪಿ ಕಾರ್ಯಕರ್ತರು ಚೈನಾದ ರಾಷ್ಟ್ರ ಧ್ವಜವನ್ನು ಸುಟ್ಟು ಪ್ರತಿಭಟಿಸಿದರು. ಬಳಿಕ ಪಕ್ಷದ ಕಾರ್ಯಾಲಯದಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ಕುಂಬಳೆ ಪಂಚಾಯತಿ ಘಟಕದ ಅಧ್ಯಕ್ಷ ಸುಧಾಕರ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ಮಂಡಲ ಪ್ರಧಾನ ಕಾರ್ಯದರ್ಶಿ ಮುರಳೀಧರ ಯಾದವ್ ನಾಯ್ಕಾಪು, ಜಿಲ್ಲಾ ಸಮಿತಿ ಸದಸ್ಯ ಕೆ.ವಿನೋದನ್, ಯುವಮೋರ್ಚಾ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಆರಿಕ್ಕಾಡಿ, ಓಬಿಸಿ ಮೋರ್ಚಾ ಜಿಲ್ಲಾ ಸಮಿತಿ ಸದಸ್ಯ ಶಶಿ ಕುಂಬಳೆ, ಯುವಮೋರ್ಚಾ ಕುಂಬಳೆ ಪಂಚಾಯತಿ ಅಧ್ಯಕ್ಷ ಪ್ರದೋಷ್, ಪ್ರಧಾನ ಕಾರ್ಯದರ್ಶಿ ಸಾಗರ್ ದೇವೀನಗರ, ಓಬಿಸಿ ಮೋರ್ಚಾ ಪಂಚಾಯತಿ ಘಟಕದ ಪ್ರಧಾನ ಕಾರ್ಯದರ್ಶಿ ಜಯರಾಮ ಪೂಜಾರಿ, ಗ್ರಾ.ಪಂ. ಜನಪ್ರತಿನಿಧಿಗಳಾದ ಸುಜಿತ್ ರೈ ಕೋಟೆಕ್ಕಾರ್, ಪ್ರೇಮಲತಾ ವಸಂತಕುಮಾರ್, ಪುಷ್ಪಲತಾ ಸುರೇಶ್ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು. ಪಂಚಾಯತಿ ಉಪಾಧ್ಯಕ್ಷ ಮಹೇಶ್ ಪುಣಿಯೂರ್ ಸ್ವಾಗತಿಸಿ, ಮಧುಸೂದನ ಕಾಮತ್ ವಂದಿಸಿದರು.


