HEALTH TIPS

ಮಾಧ್ಯಮಗಳ ತಿರುಗೇಟು-ಕೇರಳ ಪೆÇಲೀಸರು ಪಿಸಿ ಕುಟ್ಟನ್‍ಪಿಳ್ಳೈ ರದ್ದು!


            ತಿರುವನಂತಪುರಂ: ಸಾಮಾಜಿಕ ಮಾಧ್ಯಮ ಚಟುವಟಿಕೆಗಳನ್ನು ಗಮನಿಸಲು ಮತ್ತು ಮೇಲ್ವಿಚಾರಣೆಗೈದು ಜನನಾಡಿಗಳನ್ನು ಗ್ರಹಿಸಲು ಕೇರಳ ಪೆÇಲೀಸರು ಆರಂಭಿಸಿದ ಆನ್‍ಲೈನ್ ಪ್ರತಿಕ್ರಿಯೆ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ. ಹಾಸ್ಯಭರಿತವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಲ್ಪಟ್ಟ ಪಿಸಿ ಕುಟ್ಟನ್ ಪಿಳ್ಳೈ ಕಾರ್ಯಕ್ರಮ ವಿವಾದಾತ್ಮಕವಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆಯೆಂದು ಕೇರಳ ಪೆÇಲೀಸರ ಸಾಮಾಜಿಕ ಮಾಧ್ಯಮ ತಂಡ ಸ್ಪಷ್ಟಪಡಿಸಿದೆ.
          ಹೊಸದಾಗಿ ಪ್ರಾರಂಭಿಸಲಾದ ಆನ್‍ಲೈನ್ ಪ್ರತಿಕ್ರಿಯೆ ಕಾರ್ಯಕ್ರಮವನ್ನು ನಿಲ್ಲಿಸಲಾಗಿದೆ ಮತ್ತು ಹೆಚ್ಚು ಪರಿಣಾಮಕಾರಿಯಾದ ಜಾಗೃತಿ ಅಭಿಯಾನವನ್ನು ಪ್ರಾರಂಭಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಈಗಿನ ಕಾರ್ಯಯೋಜನೆ ಸಮರ್ಪಕವಾಗಿರಲಿಲ್ಲ ಎಂದೂ ಉಪನಿರ್ದೇಶಕ ವಿ.ಪಿ.ಪ್ರಮೋದ್ ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
       ಸೋಷಿಯಲ್ ಮೀಡಿಯಾ, ಟಿಕ್ ಟಾಕ್ ಸೇರಿದಂತೆ ವಿವಿಧ ಜಾಲತಾಣಗಳಲ್ಲಿ ವಿಡಿಯೋಗಳನ್ನು ಹರಿದು ಬಿಡುವ ಉದ್ದೇಶದಿಂದ ವಿಡಿಯೋವನ್ನು ಕೇರಳ ಪೆÇಲೀಸ್ ಅಧಿಕೃತ ಫೇಸ್‍ಬುಕ್ ಪುಟ ಮತ್ತು ಯುಟ್ಯೂಬ್‍ನಲ್ಲಿ ಪಿಸಿ ಕುಟ್ಟನ್ ಪಿಳ್ಳೈ ಸ್ಪೀಕಿಂಗ್ ಎಂದು ಬಿಡುಗಡೆ ಮಾಡಲಾಗಿತ್ತು. ಹಾಸ್ಯಮಯ ರೀತಿಯಲ್ಲಿ ಪ್ರತಿಕ್ರಿಯಿಸುವ ಉದ್ದೇಶದಿಂದ ಮಾಡಿದ ಮೊದಲ ವಿಡಿಯೋ ವಿವಾದಾಸ್ಪದವಾಗಿದೆ. ಇದರೊಂದಿಗೆ 'ಪಿಸಿ ಕುಟ್ಟನ್ ಪಿಳ್ಳೈ' ಕಾರ್ಯಕ್ರಮವನ್ನು ಕೊನೆಗೊಳಿಸಲು ನಿರ್ಧರಿಸಲಾಯಿತು.
     ಕಾರ್ಯಕ್ರಮಕ್ಕೆ ಮಾಧ್ಯಮಗಳಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು ಕುಟ್ಟನ್ ಪಿಳ್ಳೈಯ ಲಕ್ಷ್ಯ ಸಾಮಾನ್ಯ ನಾಗರಿಕರನ್ನು ಮುಠ್ಠಾಳರಂತೆ ಚಿತ್ರಿಸುವುದೋ, ಜನರಿಗೆ ಪೋಲೀಸರನ್ನು ವಿದೂಷಕರಂತೆ ತೋರಿಸುವುದೋ ಪೋಲೀಸ್ ಇಲಾಖೆಗೆ ಹೇಳಿ ಮಾಡಿಸಿದ್ದಲ್ಲ. ಮತ್ತು ಕಾನೂನುಬಾಹಿರ ಕೆಲಸಗಳನ್ನು ಮಾಡುವವರ ಮೇಲೆ ಕಾನೂನು ಕ್ರಮ ಜರುಗಿಸುವವರು ಪೆÇಲೀಸರು ಎಂದು ಅಭಿಪ್ರಾಯ ವ್ಯಕ್ತವಾಗಿದ್ದು ಈ ಬೆಳವಣಿಗೆಯ ಬಳಿಕ  ಕೇರಳ ಪೆÇಲೀಸರ ಪೆÇಲೀಸ್ ಮಾಧ್ಯಮ ತಂಡ ಪಿಸಿ ಕುಟ್ಟನ್ ಪಿಳ್ಳೈ ಕಾರ್ಯಕ್ರಮ ನಿಲ್ಲಿಸಲು ನಿರ್ಧರಿಸಿರುವುದಾಗಿ ತಿಳಿದುಬಂದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries