HEALTH TIPS

ಕೊರೋನಾ ವೈರಸ್: ಜಾಗತಿಕ ಸೋಂಕಿತರ ಸಂಖ್ಯೆ 1 ಕೋಟಿ 31 ಲಕ್ಷ, 5.73 ಲಕ್ಷ ಮಂದಿ ಸಾವು

 
           ವಾಷಿಂಗ್ಟನ್: ಜಗತ್ತಿನಾದ್ಯಂತ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ದಿನದಿಂದ ಏರಿಕೆಯಾಗುತ್ತಿದ್ದು, ಭಾನುವಾರ ಸಂಜೆ ವೇಳೆಗೆ ಜಾಗತಿಕ ಸೋಂಕಿತರ ಸಂಖ್ಯೆ 1 ಕೋಟಿ 31 ಲಕ್ಷಕ್ಕೇರಿದೆ. ಸಾವಿನ ಸಂಖ್ಯೆ 5 ಲಕ್ಷದ 73 ಸಾವಿರ ದಾಟಿದೆ.
       ವಿಶ್ವದ ಒಟ್ಟು 210 ದೇಶಗಳಲ್ಲಿ ಕೊರೊನಾ ಸೋಂಕು ವರದಿಯಾಗಿದ್ದು, ಅತಿ ಹೆಚ್ಚು ಸೋಂಕು ಮತ್ತು ಸಾವಿನ ಪ್ರಕರಣಗಳು ಅಮೆರಿಕದಲ್ಲೇ ವರದಿಯಾಗಿದೆ. ಇಲ್ಲಿ 34.38 ಲಕ್ಷ ಜನರಿಗೆ ಸೋಂಕು ತಗಲಿದ್ದರೆ ಈವರೆಗೆ 1 ಲಕ್ಷದ 37 ಸಾವಿರ ಜನರು ಮಾರಕ ಖಾಯಿಲೆಯಿಂದ ಮೃತಪಟ್ಟಿದ್ದಾರೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಮಾಹಿತಿ ತಿಳಿಸಿದೆ.  ಎರಡನೇ ಸ್ಥಾನದಲ್ಲಿರುವ ಬ್ರಿಜಿಲ್‍ನ ಒಟ್ಟು 18.66 ಲಕ್ಷ ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಮೃತರ ಸಂಖ್ಯೆ 72 ಸಾವಿದ ದಾಟಿದೆ. ಮೂರನೇ ಸ್ಥಾನದಲ್ಲಿರುವ ಭಾರತದಲ್ಲಿ ಈವರೆಗೆ 8.98 ಲಕ್ಷ ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 23 ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ರಷ್ಯಾದಲ್ಲಿ 7.33 ಲಕ್ಷ ಸೋಂಕಿತರಿದ್ದು, ಪೆರು ದೇಶದಲ್ಲಿ 3.26 ಲಕ್ಷ ಸೋಂಕಿತರಿದ್ದಾರೆ.
        ಪಾಕಿಸ್ತಾನದಲ್ಲಿ ಸೋಮವಾರ 2,769 ಹೊಸ ಪ್ರಕರಣಗಳು ವರದಿಯಾಗಿವೆ. ಈ ಮೂಲಕ ಸೋಂಕಿತರ ಒಟ್ಟು ಸಂಖ್ಯೆ 2.51 ಲಕ್ಷ ದಾಟಿದೆ. 69 ಮಂದಿ ಸೋಂಕಿನಿಂದ ಮೃತಪಟ್ಟಿದ್ದು, ಸೋಂಕಿನಿಂದ ಈವರೆಗೆ ಮೃತಪಟ್ಟವರ ಒಟ್ಟು ಸಂಖ್ಯೆ 5,226ಕ್ಕೆ ಏರಿಕೆಯಾಗಿದೆ. 1,837 ರೋಗಿಗಳು ಗಂಭೀರ ಸ್ಥಿತಿಯಲ್ಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries