ಕಾಸರಗೋಡು: ಕೊರೊನಾ ವೈರಸ್ ಸೋಂಕಿನಿಂದ ಕಾಸರಗೋಡು ನಗರದ ಅಣಂಗೂರು ಪಚ್ಚಕ್ಕಾಡ್‍ನ ಟಿ.ಎಸ್.ಶಾಫಿ ಅವರ ಪತ್ನಿ ಖೈರುನ್ನೀಸ(48) ಅವರು ಬುಧವಾರ ಮುಂಜಾನೆ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಸಾವಿಗೀಡಾದರು. ಇದರೊಂದಿಗೆ ಕಾಸರಗೋಡು ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕಿನಿಂದ ಸತ್ತವರ ಸಂಖ್ಯೆ ಎರಡಕ್ಕೇರಿತು.
ಜ್ವರ ಹಾಗು ವಾಂತಿಯ ಹಿನ್ನೆಲೆಯಲ್ಲಿ ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಪಾಸಣೆ ನಡೆಸಿದಾಗ ಕೋವಿಡ್ ಬಾ„ಸಿರುವುದು ಖಚಿತಗೊಂಡಿತ್ತು. ಇದರಿಂದ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಜಿಲ್ಲೆಯಲ್ಲಿ 101 ಮಂದಿಗೆ ಸೋಂಕು : ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ 101 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ಇದೇ ಸಂದರ್ಭದಲ್ಲಿ 43 ಮಂದಿ ಗುಣಮುಖರಾಗಿದ್ದಾರೆ. 85 ಮಂದಿಗೆ ಸಂಪರ್ಕದ ಮೂಲಕ ರೋಗ ಬಾಧಿಸಿದೆ.
ಕೇರಳದಲ್ಲಿ 1038 ಮಂದಿಗೆ ಸೋಂಕು : ಕೇರಳ ರಾಜ್ಯದಲ್ಲಿ ಬುಧವಾರ 1038 ಮಂದಿಗೆ ಕೊರೊನಾ ವೈರಸ್ ಸೋಂಕು ಬಾಧಿಸಿದೆ. ಇದೇ ವೇಳೆ 272 ಮಂದಿ ಗುಣಮುಖರಾಗಿದ್ದಾರೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ಇದು ವರೆಗೆ ಕೇರಳದಲ್ಲಿ 15032 ಮಂದಿಗೆ ರೋಗ ಬಾ„ಸಿದೆ. ಪ್ರಸ್ತುತ 8818 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬುಧವಾರ ಇಡುಕ್ಕಿ ನಿವಾಸಿ ನಾರಾಯಣನ್(87) ಸಾವಿಗೀಡಾದರು.
ಸಂಪರ್ಕದ ಮೂಲಕ 785 ಮಂದಿಗೆ ರೋಗ ಬಾಧಿಸಿದೆ. ವಿದೇಶದಿಂದ ಬಂದ 87,ಇತರ ರಾಜ್ಯಗಳಿಂದ ಬಂದ 109 ಮಂದಿಗೆ ರೋಗ ಬಾ„ಸಿದೆ. 57 ಮಂದಿಗೆ ರೋಗ ಮೂಲ ಸ್ಪಷ್ಟಗೊಂಡಿಲ್ಲ.
ರೋಗ ಬಾಧಿತರು : ತಿರುವನಂತಪುರ-226, ಕೊಲ್ಲಂ-133, ಎರ್ನಾಕುಳಂ-92, ಮಲಪ್ಪುರಂ-61, ಕಣ್ಣೂರು-43, ಪಾಲ್ಘಾಟ್-34, ಆಲಪ್ಪುಳ-120, ಕಾಸರಗೋಡು-101, ಪತ್ತನಂತಿಟ್ಟ-49, ಕಲ್ಲಿಕೋಟೆ-25, ಕೋಟ್ಟಯಂ-51, ತೃಶ್ಶೂರು-56, ವಯನಾಡು-4, ಇಡುಕ್ಕಿ-43 ಎಂಬಂತೆ ರೋಗ ಬಾಧಿಸಿದೆ.
ಗುಣಮುಖ : ತಿರುವನಂತಪುರ-9, ಕೊಲ್ಲಂ-13, ಆಲಪ್ಪುಳ-19, ಕೋಟ್ಟಯಂ-12, ಇಡುಕ್ಕಿ-1, ಎರ್ನಾಕುಳಂ-18, ತೃಶ್ಶೂರು-33, ಪಾಲ್ಘಾಟ್-15, ಮಲಪ್ಪುರಂ-52, ಕಲ್ಲಿಕೋಟೆ-14, ವಯನಾಡು-4, ಕಾಸರಗೋಡು-43, ಪತ್ತನಂತಿಟ್ಟ-38 ಎಂಬಂತೆ ಗುಣಮುಖರಾಗಿದ್ದಾರೆ.
ಮಾಸ್ಕ್ ಧರಿಸದ 197 ಮಂದಿ ವಿರುದ್ಧ ಕೇಸು : ಮಾಸ್ಕ್ ಧರಿಸದೇ ಇದ್ದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 197 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಈ ಮೂಲಕ ಈ ಪ್ರಕರಣಗಳಿಗೆ ಸಂಬಂಧಿಸಿ ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ದಾಖಲಾದ ಕೇಸುಗಳ ಸಂಖ್ಯೆ ಒಟ್ಟು 14061 ಆಗಿದೆ.
ಲಾಕ್‍ಡೌನ್ ಉಲ್ಲಂಘನೆ: 10 ಕೇಸುಗಳು : ಲಾಕ್‍ಡೌನ್ ಆದೇಶ ಉಲ್ಲಂಘಿಸಿದ ಆರೋಪಕ್ಕೆ ಸಂಬಂಧಿಸಿ ಕಾಸರಗೋಡು ಜಿಲ್ಲೆಯಲ್ಲಿ 10 ಕೇಸುಗಳನ್ನು ದಾಖಲಿಸಲಾಗಿದೆ. 15 ಮಂದಿಯನ್ನು ಬಂಧಿಸಲಾಗಿದ್ದು, 5 ವಾಹನಗಳನ್ನು ವಶಪಡಿಸಲಾಗಿದೆ. ಮೇಲ್ಪರಂಬ ಪೆÇಲೀಸ್ ಠಾಣೆಯಲ್ಲಿ 2 ಕೇಸುಗಳು, ಬೇಕಲ 2, ಹೊಸದುರ್ಗ 1, ಚಂದೇರ 1, ವೆಳ್ಳರಿಕುಂಡ್ 2, ಚಿತ್ತಾರಿಕಲ್ 1, ರಾಜಪುರಂ 1 ಕೇಸುಗಳು ದಾಖಲಾಗಿವೆ. ಈ ಮೂಲಕ ಈ ಪ್ರಕರಣಗಳಿಗೆ ಸಂಬಂಧಿಸಿ ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ದಾಖಲಾದ ಕೇಸುಗಳ ಸಂಖ್ಯೆ ಒಟ್ಟು 3179 ಆಗಿದೆ. 4217 ಮಂದಿಯನ್ನು ಬಂಧಿಸಲಾಗಿದೆ. 1281 ವಾಹನಗಳನ್ನು ವಶಪಡಿಸಲಾಗಿದೆ.


