HEALTH TIPS

ರಾಜ್ಯದಲ್ಲಿ ಇಂದು 1167 ಕೋವಿಡ್ ಸೋಂಕಿತರ ಪತ್ತೆ-679 ಮಂದಿ ರೋಗಮುಕ್ತ

                     ತಿರುವನಂತಪುರ: ರಾಜ್ಯದಲ್ಲಿ ಮಂಗಳವಾರ 1167 ಜನರಿಗೆ ಕೋವಿಡ್ -19 ಖಚಿತವಾಗಿದೆ. ರೋಗ ಪತ್ತೆಯಾದ 679 ಜನರ ಪರೀಕ್ಷಾ ಫಲಿತಾಂಶಗಳು ಋಣಾತ್ಮಕವಾಗಿವೆ. ಇಂದು ರೋಗ ಪತ್ತೆಯಾದವರಲ್ಲಿ 122 ಮಂದಿ ವಿದೇಶಗಳಿಂದ ಮತ್ತು 96 ಇತರ ರಾಜ್ಯಗಳಿಂದ ಬಂದವರು. 483 ಸೋಂಕಿತರಿಗೆ ಸಂಪರ್ಕದಿಂದಾಗಿ ರೋಗ ಬಾಧಿಸಿದ್ದರೆ  55 ಸೋಂಕಿತರ ಕೋವಿಡ್ ಮೂಲ ಸ್ಪಷ್ಟವಾಗಿಲ್ಲ. ಇಂದು ಸೋಂಕು ಬಾಧಿಸಿದವರಲ್ಲಿ ಆರೋಗ್ಯ ಕಾರ್ಯಕರ್ತರು 33 ಮಂದಿ ಇರುವುದು ಖೇದಕರ. ಕೋವಿಡ್ ರೋಗ ಹರಡಿದ ಬಳಿಕ  ಕೇರಳದಲ್ಲಿ ಇಂದು ಅತಿ ಹೆಚ್ಚು ಪ್ರಕರಣಗಳು ವರದಿಯಾಗಿವೆ. ರಾಜ್ಯದಲ್ಲಿ ಇಂದು 4 ಕೋವಿಡ್ ಮರಣಗಳು ವರದಿಯಾಗಿವೆ. ಮೃತರನ್ನು ಎರ್ನಾಕುಳಂನ ಅಬೂಬಕರ್ (72), ಕಾಸರಗೋಡಿನ ಅಬ್ದು ರಹಮಾನ್ (70), ಆಲಪ್ಪುಳ ಮೂಲದ ಸೈನುದ್ದೀನ್ (67) ಮತ್ತು ತಿರುವನಂತಪುರಂನ ಸೆಲ್ವಾಮಣಿ (65) ಎಂದು ಗುರುತಿಸಲಾಗಿದೆ.
                            ಇಂದು ಸೋಂಕು ಬಾಧಿತರಾದ ಜಿಲ್ಲಾವಾರು ವಿವರ:
           ತಿರುವನಂತಪುರ 227, ಕೊಟ್ಟಾಯಂ 118, ಮಲಪ್ಪುರಂ 112, ತ್ರಿಶೂರ್ 109, ಕೊಲ್ಲಂ 95, ಪಾಲಕ್ಕಾಡ್ 86, ಆಲಪ್ಪುಳ 84, ಎರ್ನಾಕುಳಂ 70, ಕೋಝಿಕ್ಕೋಡ್ 67, ಪತ್ತನಂತಿಟ್ಟು 63, ವಯನಾಡ್ 53, ಕಣ್ಣೂರು 43, ಕಾಸರಗೋಡು 38 ಮತ್ತು ಇಡುಕ್ಕಿ 7 ಜನರಲ್ಲಿ ಸೋಂಕು ದೃಢಪಟ್ಟಿದೆ.
                ಜಿಲ್ಲಾವಾರು ಗುಣಮುಖರಾದವರ ವಿವರ:
   ಮಂಗಳವಾರ ಕೋವಿಡ್ ಚಿಕಿತ್ಸೆಗೊಳಗಾಗಿ ಗುಣಮುಖರಾದವರು ತಿರುವನಂತಪುರ 170, ಕೊಲ್ಲಂ 70, ಪತ್ತನಂತಿಟ್ಟು 28, ಆಲಪ್ಪುಳ 80, ಕೊಟ್ಟಾಯಂ 20, ಇಡುಕ್ಕಿ 27, ಎರ್ನಾಕುಳಂ 83, ತ್ರಿಶೂರ್ 45, ಪಾಲಕ್ಕಾಡ್ 40, ಮಲಪ್ಪುರಂ 34, ಕೋಝಿಕ್ಕೋಡ್ 13, ವಯನಾಡ್ 18, ಕಣ್ಣೂರು 15, ಕಾಸರಗೋಡು 36 ಮಂದಿ ಗುಣಮುಖರಾಗಿರುವರು.
                    ಪರಿಸ್ಥಿತಿ ತೀವ್ರ:
      ಸೋಂಕಿತರು ಮತ್ತು ಸಾವುಗಳ ಸಂಖ್ಯೆಯಲ್ಲಿ ಹೆಚ್ಚಳದಿಂದಾಗಿ ರಾಜ್ಯದ ಪರಿಸ್ಥಿತಿ ಹದಗೆಡುತ್ತಿದೆ. ಸಂಪರ್ಕದ ಮೂಲಕ ಕೋವಿಡ್ ಹರಡುತ್ತಿರುವುದು ತಡೆಗಟ್ಟುವ ಕ್ರಮಗಳಿಗೆ ಹಿನ್ನಡೆಯಾಗಿದೆ. ಆರೋಗ್ಯ ಕಾರ್ಯಕರ್ತರು ಮತ್ತು ಪೆÇಲೀಸ್ ಅಧಿಕಾರಿಗಳಲ್ಲಿ ಸೋಂಕು ಹರಡುತ್ತಿರುವುದು ಕಳವಳಕಾರಿಯಾಗಿದೆ. ರೋಗಿಗಳ ಸಂಖ್ಯೆ ಹೆಚ್ಚಾದಂತೆ, ಆಸ್ಪತ್ರೆಗಳಲ್ಲಿ ಮತ್ತು ಮನೆಯಲ್ಲಿ ಚಿಕಿತ್ಸೆ ಪಡೆಯುವ ಮತ್ತು ಕ್ವಾರಂಟೈನ್ ನಲ್ಲಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಇದರೊಂದಿಗೆ ರಾಜ್ಯದಲ್ಲಿ ಹಾಟ್‍ಸ್ಪಾಟ್‍ಗಳು ಮತ್ತು ಕಂಟೋನ್ಮೆಂಟ್ ವಲಯಗಳ ಸಂಖ್ಯೆ ಹೆಚ್ಚಾಗಿದೆ.
             

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries