ತಿರುವನಂತಪುರ: ಸಚಿವ ಕಡಕಂಪಲ್ಲಿ ಸುರೇಂದ್ರನ್ ಅಧಿಕೃತ ನಿವಾಸದಲ್ಲಿರುವ ಉದ್ಯೋಗಿಗಳಲ್ಲಿ ಒಬ್ಬರಿಗೆ ಕೋವಿಡ್ ದೃಢಪಟ್ಟ ಹಿನ್ನೆಲೆಯಲ್ಲಿ ಸಚಿವರು ಸ್ವ ಕ್ವಾರಂಟೈನ್ ಗೆ ಒಳಗಾಗಲು ನಿರ್ಧರಿಸಿದ್ದಾರೆ. ಮಂಗಳವಾರ ನಡೆಸಿದ ಗಂಟಲ ದ್ರವ ಪರೀಕ್ಷೆಯಲ್ಲಿ ಸಚಿವರ ಅಧಿಕೃತ ನಿವಾಸದ ಉದ್ಯೋಗಿಯಲ್ಲಿ ಕೋವಿಡ್ ದೃಢೀಕರಿಸಿರುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾದರೆಂದು ತಿಳಿದುಬಂದಿದೆ.
ಇತರ ನೌಕರರಿಗೆ ಸ್ವಯಂ ಕ್ವಾರಂಟೈನ್ ಗೆ ಹೋಗುವಂತೆ ಸೂಚನೆ ನೀಡಲಾಗಿದೆ. ಚಿಂತೆ ಮಾಡುವ ಅಗತ್ಯವಿಲ್ಲ ಆದರೆ ಎಚ್ಚರಿಕೆ ಅಗತ್ಯ ಎಂದು ಸಚಿವರು ಫೇಸ್‍ಬುಕ್ ಪೆÇೀಸ್ಟ್‍ನಲ್ಲಿ ಬರೆದಿದ್ದಾರೆ.
ಮಂಗಳವಾರ ಸಚಿವರ ಕಚೇರಿ ಮತ್ತು ಅಧಿಕೃತ ನಿವಾಸದ ಸಂಪೂರ್ಣ ಸಿಬ್ಬಂದಿಯನ್ನು ಪರಿಶೀಲಿಸಲಾಗಿದೆ. ಸಚಿವರ ಗಂಟಲ ದ್ರವ ಮಾದರಿಯನ್ನು ಸಹ ಪರೀಕ್ಷಿಸಲಾಗಿದೆ. ಆದರೆ ಫಲಿತಾಂಶವು ನಕಾರಾತ್ಮಕವಾಗಿತ್ತು. ಮುನ್ನೆಚ್ಚರಿಕೆಯಾಗಿ ಸ್ವಯಂ ಮೇಲ್ವಿಚಾರಣೆಗೆ ಹೋಗುತ್ತಿದ್ದೇನೆ ಎಂದು ಸಚಿವರು ಹೇಳಿರುವರು.
ಏತನ್ಮಧ್ಯೆ, ಸಚಿವ ಕಡಕಂಪಲ್ಲಿ ಸುರೇಂದ್ರನ್ ಅವರು ತಿರುವನಂತಪುರಂನಲ್ಲಿ ನಡೆದ ವಿವಿಧ ಅಧಿಕೃತ ಸಭೆಗಳಲ್ಲಿ ಭಾಗವಹಿಸಿದ್ದರು, ಅಲ್ಲಿ ಕೋವಿಡ್ ರಕ್ಷಣೆಯ ಭಾಗವಾಗಿ ಲಾಕ್ ಡೌನ್ ನಿಬರ್ಂಧಗಳು ಮುಂದುವರೆದಿದೆ. ಸಭೆಯಲ್ಲಿ ಜಿಲ್ಲಾಧಿಕಾರಿಗಳು ಮತ್ತು ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.


