ಬದಿಯಡ್ಕ: ಭತ್ತದ ಕೃಷಿಯಲ್ಲಿ ನೂತನ ಅವಿಷ್ಕಾರಗಳ ಮೂಲಕ ನವ ಶಖೆಗೆ ಜೀವತುಂಬಿದ, ನೀರ ನೆಮ್ಮದಿಯ ಹರಿಕಾರ, ಭತ್ತದ ಸಾಹುಕಾರ, ಪ್ರಗತಿಪರ ಕೃಷಿಕ ನಾಂದ್ರೋಡು ಮಹಾಲಿಂಗೇಶ್ವರ ಭಟ್(86) ಮಂಗಳವಾರ ನಿಧನರಾದರು.
ಭತ್ತದ ಕೃಷಿಯಲ್ಲಿ 30 ವರ್ಷಗಳಷ್ಟು ಹಿಂದೆಯೇ ವಿಶೇಷ ಆಸಕ್ತಿಹೊಂದಿದ್ದ ಅವರು ಮನೆಯ ಅಂಗಳದಲ್ಲಿ ಮಳೆಗಾಲದಲ್ಲಿ ಬಾಸುಮತಿ ತಳಿಯ ಭತ್ತದ ಪೈರನ್ನು ಬೆಳೆಸುತ್ತಿದ್ದರು. ಜೊತೆಗೆ ಭತ್ತದ ಹಲವು ತಳಿಗಳನ್ನೂ ಸ್ವತಃ ಅಭಿವೃದ್ದಿಪಡಿಸಿ ಗಮನ ಸೆಳೆದಿದ್ದರು. ಸ್ವತಃ ಭತ್ತದ ಮಿಲ್ಲನ್ನು ಹೊಂದಿದ್ದ ಅವರು ಭತ್ತದ ಯಂತ್ರದಲ್ಲಿ ಹೊಸ ಅವಿಷ್ಕಾರಗಳನ್ನು ಮಾಡಿ ಸರಳೀಕೃತ ವ್ಯವಸ್ಥೆ ಬಳಸುತ್ತಿದ್ದರು. ದಶಕಗಳ ಹಿಂದೆಯೇ ಭತ್ತ ಬಿತ್ತನೆಯ, ನೇಜಿ ನೆಡುವ, ಅಕ್ಕಿ ಶುಚಿಗೊಳಿಸುವ ಮೊದಲಾದ ಉಪಕರಣಗಳನ್ನು ಅವಿಷ್ಕರಿಸಿದ್ದರು. ಜೊತೆಗೆ ಹೊಳೆಗೆ ಕಟ್ಟಕಟ್ಟುವ ಹೊಸ ಪರಿಕಲ್ಪನೆಯನ್ನು ಹೊಂದಿದ್ದರು. ತಮ್ಮ ಯವ್ವನದಲ್ಲಿ ಏತಡ್ಕ ಹೊಳೆಗೆ ನಾಂದ್ರೋಡು ಎಂಬಲ್ಲಿ ತೊಟ್ಟಿಲು ನಿರ್ಮಿಸಿ ಆಚೀಚೆ ಸಂಚರಿಸುವ ವಿಧಾನವನ್ನು ರಚಿಸಿ ಜನಪ್ರಿಯತೆಗಳಿಸಿದ್ದರು.
ಬೆಳ್ಳೂರು ಸದಾಶಿವ ದೇವಸ್ಥಾನ, ಮುನಿಯೂರು ಗೋಪಾಲಕೃಷ್ಣ ದೇವಸ್ಥಾನ ಮೊದಲಾದ ಕ್ಷೇತ್ರಗಳ ಚಟುವಟಿಕೆ, ಗ್ರಾಮೀಣ ರಸ್ತೆಗಳ ಅಭಿವೃದ್ದಿಗಳಲ್ಲಿ ತೊಡಗಿಸಿಕೊಂಡಿದ್ದರು.
ಮೃತರು ಪತ್ನಿ, ಪುತ್ರ ಹಾಗೂ ಮೂವರು ಪುತ್ರಿಯರ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.