HEALTH TIPS

ಕರ್ನಾಟಕ ಮೆಡಿಕಲ್ -ಇಂಜಿನಿಯರಿಂಗ್ ಪ್ರವೇಶಾತಿ ಪರೀಕ್ಷೆ: ಕಾಞಂಗಾಡಿನಿಂದ ತಲಪ್ಪಾಡಿಗೆ 11 ಕೆ.ಎಸ್.ಆರ್.ಟಿ.ಸಿ. ಬಸ್ ಸೌಲಭ್ಯ: ಕ್ವಾರಂಟೈನ್ ಕಡ್ಡಾಯ-ಜಿಲ್ಲಾಧಿಕಾರಿ-ಗೊಂದಲಗಳ ನಿರ್ಧಾರ ಇಲ್ಲೂ ಕೈಬಿಡದ ಜಿಲ್ಲಾಡಳಿತ!

 
       
           ಕಾಸರಗೋಡು: ಕರ್ನಾಟಕ ಮೆಡಿಕಲ್ - ಇಂಜಿನಿಯರಿಂಗ್ ಪ್ರವೇಶಾತಿ (ಸಿ.ಇ.ಟಿ.)ಪರೀಕ್ಷೆ ಗೆ ಹಾಜರಾಗುವ ಕಾಸರಗೋಡು ಜಿಲ್ಲೆಯ ವಿದ್ಯಾರ್ಥಿಗಳಿಗಾಗಿ ಜು.30,31, ಆ.1ರಂದು ಕಾಞಂಗಾಡಿನಿಂದ ತಲಪ್ಪಾಡಿಗೆ 11 ಕೆ.ಎಸ್.ಆರ್.ಟಿ.ಸಿ. ಬಸ್ ಸೌಲಭ್ಯ ಏರ್ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.
               ಬೆಳಗ್ಗೆ 5.30ರಿಂದ ಪ್ರತಿ ನಿಮಿಷಕ್ಕೊಂದು ಬಸ್ ನಂತೆ 11 ಬಸ್ ಗಳು ಈ ನಿಟ್ಟಿನಲ್ಲಿ ಸಂಚಾರ ನಡೆಸಲಿವೆ. ಇವುಗಳಲ್ಲಿ 6 ಬಸ್ ಗಳು ಕಾಞಂಗಾಡ್-ಮಾವುಂಗಾಲ್-ಚೆರ್ಕಳ ರೂಟ್ ನಲ್ಲಿ, 5 ಬಸ್ ಗಳು ಕಾಞಂಗಾಡ್-ಚಂದ್ರಗಿರಿ ರೂಟ್ ನಲ್ಲಿ ಸಂಚಾರ ನಡೆಸುವುವು. ಎಲ್ಲಿಂದ ಬೇಕಿದ್ದರೂ ವಿದ್ಯಾರ್ಥಿಗಳು ಬಸ್ ಏರಬಹುದಾಗಿದೆ. ವಿದ್ಯಾರ್ಥಿಗಳು ಎಲ್ಲಿಂದ ಕೈತೋರಿದರೂ ನಿಲುಗಡೆ ಮಾಡುವಂತೆ ಬಸ್ ಚಾಲಕರಿಗೆ ಆದೇಶ ನೀಡಲಾಗಿದೆ. ಆದರೆ ಒಮ್ಮ ಬಸ್ ಏರಿದ ವಿದ್ಯಾರ್ಥಿಗೆ ಇಳಿಕೆಗೆ ಅನುಮತಿ ತಲಪ್ಪಾಡಿಯಲ್ಲಿ ಮಾತ್ರ ಇರುವುದು ಎಂದು ಜಿಲ್ಲಾಧಿಕಾರಿ ಹೇಳಿರುವರು. 
             ಪರೀಕ್ಷೆ ಮುಗಿಸಿ ಮರಳುವ ವೇಳೆ ತಲಪ್ಪಾಡಿಯಲ್ಲಿ ಸಂಜೆ 5 ಗಂಟೆಯಿಂದ ಕಾಞಂಗಾಡ್ ವರೆಗೂ ಕೆ.ಎಸ್.ಆರ್.ಟಿ.ಸಿ. ಬಸ್ ಗಳು ಸಂಚಾರ ನಡೆಸಲಿವೆ. ಅಗತ್ಯವಿದ್ದಲ್ಲಿ ವಿದ್ಯಾರ್ಥಿಗಳ ಹೆತ್ತವರಿಗೂ ಬಸ್ ನಲ್ಲಿ ಜತೆಗೆ ಪ್ರಯಾಣ ನಡೆಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
             ತಲಪ್ಪಾಡಿಯಿಂದ ನಂತರ ಕರ್ನಾಟಕ ಸರಕಾರ ವತಿಯಿಂದ ಬೆಳಗ್ಗೆ 7.30ರಿಂದ ವಾಹನ ಸೌಲಭ್ಯ ಏರ್ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿರುವರು. 
            ಯಾವುದೇ ಸಂದೇಹಗಳಿದ್ದಲ್ಲಿ ಸಂಪರ್ಕಿಸಬಹುದು:
   ಕಾಸರಗೋಡು ಜಿಲ್ಲಾ ನಿಯಂತ್ರಣ ಕೊಠಡಿ: 04994-255001. ಬೆಂಗಳೂರು: 080-23462758.
             ಕ್ವಾರೆಂಟೈನ್ ಕಡ್ಡಾಯ:
   ಕರ್ನಾಟಕ ಸಿ.ಇ.ಟಿ. ಪರೀಕ್ಷೆ ಗೆ ಹಾಜರಾಗಿ ಮರಳುವ ವಿದ್ಯಾರ್ಥಿಗಳು ಕಡ್ಡಾಯವಾಗಿ 14 ದಿನಗಳ ರೂಂ ಕ್ವಾರೆಂಟೈನ್ ಪಾಲಿಸಬೇಕು. ಕರ್ನಾಟಕ ಸರಕಾರದ ಅನುಮತಿ ಲಭಿಸಿ ಹೆತ್ತವರೂ ಪರೀಕ್ಷೆ ಕೇಂದ್ರ ವರೆಗೆ ತೆರಳಿದ್ದರೆ ಅವರೂ ಈ ಆದೇಶ ಪಾಲಿಸಬೇಕು. ಖಾಸಗಿ ವಾಹನಗಳಲ್ಲಿ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಯ್ಯುವುದಿದ್ದರೂ ಅಭ್ಯಂತರವಿಲ್ಲ. ಆದರೆ ಪರೀಕ್ಷೆ ಮುಗಿಸಿ ಮರಳುವ ವೇಳೆ ಕೋವಿಡ್ 19 ಜಾಗ್ರತಾ ಪೆÇೀರ್ಟಲ್ ನಲ್ಲಿ ನೋಂದಣಿ ನಡೆಸಬೇಕಾದುದು ಕಡ್ಡಾಯ. ಇವರೂ 14 ದಿನಗಳ ರೂಂ ಕ್ವಾರೆಂಟೈನ್ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಆದೇಶಿಸಿರುವರು. 
            ಆದರೂ ಇದೆ ಅಸ್ಪಷ್ಟತೆ!?:
      ಮಂಗಳೂರು, ಪುತ್ತೂರು ಮತ್ತು ಸುಳ್ಯದಲ್ಲಿ ಪರೀಕ್ಷಾ ಕೇಂದ್ರಗಳನ್ನು ಹೊಂದಿರುವ ವಿದ್ಯಾರ್ಥಿಗಳು ಒಂದೇ ದಿನ ಬೆಳಿಗ್ಗೆ 7.30 ಕ್ಕೆ ತಲಪ್ಪಾಡಿ, ಸಾರಡ್ಕ, ಮತ್ತು ಪಂಜಿಕಲ್ ಗಡಿಯನ್ನು ತಲುಪಬೇಕಾಗುತ್ತದೆ. ಆದರೆ ತಲಪ್ಪಾಡಿಗೆ ಮಾತ್ರ ಬಸ್‍ಗಳನ್ನು ಏರ್ಪಡಿಸಲಾಗಿದೆ. ಆದರೆ ಪುತ್ತೂರು ಮತ್ತು ಸುಳ್ಯದ ಪರೀಕ್ಷಾ ಕೇಂದ್ರಗಳಿಗೆ ಹಾಜರಾಗಬೇಕಾದ ವಿದ್ಯಾರ್ಥಿಗಳು ಹೇಗೆ ಗಡಿಯನ್ನು ತಲುಪಬೇಕು ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿಲ್ಲ.
       ಜೊತೆಗೆ ಪರೀಕ್ಷೆ ಬರೆದ ನಂತರ ಹಿಂದಿರುಗಿದ ವಿದ್ಯಾರ್ಥಿಗಳು 14 ದಿನಗಳ ಕಾಲ ಕ್ವಾರಂಟೈನ್ ನಲ್ಲಿರಬೇಕಾಗುತ್ತದೆ ಎನ್ನಲಾಗಿದೆ. ಪರೀಕ್ಷಾ ಕೇಂದ್ರಗಳಿಗೆ ಹೋಗಲು ವಿದ್ಯಾರ್ಥಿಗಳ ಪೆÇೀಷಕರು ಸಹ 14 ದಿನಗಳ ಕ್ವಾರಂಟೈನ್ ನಲ್ಲಿ ಇರಬೇಕಾಗುತ್ತದೆ. ಖಾಸಗಿ ವಾಹನಗಳಲ್ಲಿ ಪರೀಕ್ಷಾ ಕೇಂದ್ರಗಳಿಗೆ ಹೋಗಲು ಯಾವುದೇ ಅಡೆತಡೆಗಳಿಲ್ಲ. ಆದರೆ ನೀವು ಪರೀಕ್ಷೆಯ ನಂತರ ಹಿಂತಿರುಗಿದಾಗ, ನೀವು ಕೋವಿಡ್ -19 ವಿಜಿಲೆನ್ಸ್ ಪೆÇೀರ್ಟಲ್‍ನಲ್ಲಿ ನೋಂದಾಯಿಸಿಕೊಳ್ಳಬೇಕು ಎನ್ನಲಾಗಿದೆ. ಆದರೆ ಅಡ್ಕಸ್ಥಳ ಮತ್ತು ಪಂಜಿಕಲ್ಲು ಮೂಲಕ ಗಡಿ ದಾಟುವ ಮತ್ತು ಮರಳಿ ಬರುವವರಿಗೆ ಈ ವ್ಯವಸ್ಥೆಗಳೆಲ್ಲ ಹೇಗೆ ಇರಲಿದೆ ಎನ್ನುವ ಬಗ್ಗೆ ಜಿಲ್ಲಾಡಳಿತ ಸ್ಪಷ್ಟಪಡಿಸಿಲ್ಲ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries