HEALTH TIPS

ಕಾಸರಗೋಡು ಜಿಲ್ಲೆಯಲ್ಲಿ 38 ಮಂದಿಗೆ ಕೋವಿಡ್ ಪಾಸಿಟಿವ್

            ಕಾಸರಗೋಡು:  ಕಾಸರಗೋಡು ಜಿಲ್ಲೆಯಲ್ಲಿ ಮಂಗಳವಾರ 38 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 31 ಮಂದಿಗೆ ಸಂಪರ್ಕ ಮೂಲಕ ಸೋಂಕು ತಗುಲಿದೆ. ಇವರಲ್ಲಿ 7 ಮಂದಿಯ ಸಂಪರ್ಕ ಮೂಲ ಪತ್ತೆಯಾಗಿಲ್ಲ. ಈ ಸಾಲಿನಲ್ಲಿ ಒಬ್ಬ ಪೆÇಲೀಸ್ ಸಿಬ್ಬಂದಿ, ಒಬ್ಬಾಕೆ ಆರೋಗ್ಯ ಕಾರ್ಯಕರ್ತೆಯೂ ಸೇರಿದ್ದಾರೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
            ಸಂಪರ್ಕ ಮೂಲ ಪತ್ತೆಯಾಗದೇ ಇರುವವರು:
    ಮಧೂರು ಪಂಚಾಯತ್ ನ 52, ಚೆಮ್ನಾಡ್ ಪಂಚಾಯತ್ ನ 32, ಕುಂಬಳೆ ಪಂಚಾಯತ್ ನ 70(ಇವರು ಈಗಾಗಲೇ ಮೃತಪಟ್ಟಿದ್ದಾರೆ.), ಕುಂಬಡಾಜೆ ಪಂಚಾಯತ್ ನ 30, ಕಾಸರಗೋಡು ನಗರಸಭೆಯ 65 ವರ್ಷದ ಪುರುಷರು, ಮೀಂಜ ಪಂಚಾಯತ್ ನ 46, ಪಡನ್ನ ಪಂಚಾಯತ್ ನ 48 ವರ್ಷದ ಮಹಿಳೆಯರು ಸೋಂಕಿನ ಮೂಲ ಪತ್ತೆಯಾಗದೇ ಇರುವವರು.
            ಪ್ರಾಥಮಿಕ ಸಂಪರ್ಕ:
     ತ್ರಿಕರಿಪುರ ಪಂಚಾಯತ್ ನ 30,39,48, 58 ವರ್ಷದ ಮಹಿಳೆಯರು, 31 ವರ್ಷದ ಪುರುಷ(ಪೆÇಲೀಸ್ ಸಿಬ್ಬಂದಿ), 34 ವರ್ಷದ ಮಹಿಳೆ( ಆರೋಗ್ಯ ಕಾರ್ಯಕರ್ತೆ). ಮಂಜೇಶ್ವರ ಪಂಚಾಯತ್ ನ 52, ಚೆಮ್ನಾಡ್ ಪಂಚಾಯತ್ ನ 37, 37, 25 ವರ್ಷದ ಪುರುಷರು, ಮಂಗಲ್ಪಾಡಿ ಪಂಚಾಯತ್ ನ 10,8 ವರ್ಷದ ಮಕ್ಕಳು, 34 ವರ್ಷದ ಮಹಿಳೆ, ಪೈವಳಿಕೆ ಪಂಚಾಯತ್ ನ 17 ವರ್ಷದ ಯುವಕ, ಅಜಾನೂರು ಪಂಚಾಯತ್ ನ 1 ವರ್ಷದ ಮಗು, 30 ವರ್ಷದ ಪುರುಷ, 55, 20 ವರ್ಷದ ಮಹಿಳೆಯರು, ಪುಲ್ಲೂರು-ಪೆರಿಯ ಪಂಚಾಯತ್ ನ 40,50 ವರ್ಷದ ಮಹಿಳೆಯರು, ಬದಿಯಡ್ಕ ಪಂಚಾಯತ್ ನ 14 ವರ್ಷದ ಬಾಲಕ, ಮೀಂಜ ಪಂಚಾಯತ್ ನ 21,18,14 ವರ್ಷದ ಮಹಿಳೆಯರು, ಚೆಂಗಳ ಪಂಚಾಯತ್ ನ 65 ವರ್ಷದ ಮಹಿಳೆ, ಪಡನ್ನ ಪಂಚಾಯತ್ ನ 18, 14 ವರ್ಷದ ಮಹಿಳೆಯರು, ಕಳ್ಳಾರ್ ಪಂಚಾಯತ್ ನ 27 ವರ್ಷದ, ಚೆರುವತ್ತೂರು ಪಂಚಾಯತ್ ನ 49 ವರ್ಷದ ಮಹಿಳೆಯರು ಪ್ರಾಥಮಿಕ ಹಂತದ ಸೋಂಕು ಬಾಧಿತರು.
           36 ಮಂದಿಗೆ ಕೋವಿಡ್ ನೆಗೆಟಿವ್:
    ಕಾಸರಗೋಡು ಜಿಲ್ಲೆಯಲ್ಲಿ ಮಂಗಳವಾರ 36 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
         ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿದ್ದ 5, ಪರವನಡ್ಕ ಸಿ.ಎಫ್.ಎಲ್.ಟಿ.ಯಲ್ಲಿ ದಾಖಲಾಗಿದ್ದ 22, ವಿದ್ಯಾನಗರ ಸಿ.ಎಫ್.ಎಲ್.ಟಿ.ಯಲ್ಲಿ ದಾಖಲಾಗಿದ್ದ 7 ಮಂದಿ ಸೇರಿ 36 ಮಂದಿ ಕೋವಿಡ್ ನಿಂದ ಮುಕ್ತರಾಗಿದ್ದಾರೆ.
          4128 ಮಂದಿ ನಿಗಾದಲ್ಲಿ:
    ಕಾಸರಗೋಡು ಜಿಲ್ಲೆಯಲ್ಲಿ 4128 ಮಂದಿ ಮಂಗಳವಾರ ನಿಗಾದಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆಯ ವರದಿ ತಿಳಿಸಿದೆ. ಮನೆಗಳಲ್ಲಿ 3096 ಮಂದಿ, ಸಾಂಸ್ಥಿಕವಾಗಿ 1032 ಮಂದಿ ನಿಗಾದಲ್ಲಿರುವರು. 350 ಮಂದಿ ನೂತನವಾಗಿ ನಿಗಾ ಪ್ರವೇಶ ಮಾಡಿದ್ದಾರೆ. 551 ಮಂದಿ ಮಂಗಳವಾರ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ. 784 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 281 ಮಂದಿಯ ಫಲಿತಾಂಶ ಲಭಿಸಿಲ್ಲ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries