ಕಾಸರಗೋಡು: ಕೋವಿಡ್ 19 ಸೋಂಕು ಅಧಿಕಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 10 ದಿನಗಳ ಅವಧಿಯಲ್ಲಿ ಹೆಚ್ಚುವರಿ 4 ಸಾವಿರ ಮಂದಿಗೆ ದಾಖಲಾತಿ ಚಿಕಿತ್ಸೆಗೆ ಸೌಲಭ್ಯ ಒದಗಿಸಲಾಗುವುದು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿರುವರು.
ಈಗ ಜಿಲ್ಲೆಯಲ್ಲಿ 606 ಮಂದಿಗೆ ದಾಖಲಾತಿ ಚಿಕಿತ್ಸೆಗೆ ಸೌಕರ್ಯಗಳಿವೆ. 2 ದಿನಗಳ ಅವಧಿಯಲ್ಲಿ ಹೆಚ್ಚುವರಿ ಒಂದು ಸಾವಿರ ಮಂದಿಗೆ ದಾಖಲಾತಿ ಚಿಕಿತ್ಸೆ ನೀಡುವ ಚಿಕಿತ್ಸಾ ಕೇದ್ರಗಳ ಸಜ್ಜೀಕರಣವನ್ನು ಜಿಲ್ಲಾಡಳಿತೆ ಮತ್ತು ಆರೋಗ್ಯ ಇಲಾಖೆ ನಡೆಸಲಿದ್ದು, ಇದಕ್ಕಿರುವ ಕ್ರಮಗಳು ಆರಂಭಗೊಂಡಿವೆ ಎಂದವರು ನುಡಿದರು.
ವೆಂಟಿಲೇರ್ ಸಂಬಂಧ ಆತಂಕ ಬೇಡ:
ಜಿಲ್ಲೆಯಲ್ಲಿ ವೆಂಟಿಲೇರ್ ಕೊರತೆ ಬಗ್ಗೆ ಆತಂಕ ಬೇಡ. ಸರಕಾರಿ ವಲಯದಲ್ಲಿ 9 ವೆಂಟಿಲೇಟರ್, ಖಾಸಗಿ ವಲಯದಲ್ಲಿ 8 ವೆಂಟಿಲೇಟರ್ ಗಳು ಚಟುವಟಿಕೆ ನಡೆಸುತ್ತಿವೆ. ತುರ್ತು ಸಂದರ್ಭಗಳಲ್ಲಿ ಬಳಸುವ ನಿಟ್ಟಿನಲ್ಲಿ 7 ವೆಂಟಲೇಟರ್ ಗಳನ್ನು ಸರಕಾರಿ ವಲಯದಲ್ಲಿ ಕಾದಿರಿಸಲಾಗಿದೆ ಎಂದವರು ನುಡಿದರು.
ಅಗತ್ಯ ಬಿದ್ದರೆ ಜಿಲ್ಲಾ ಆಸ್ಪತ್ರೆ ಕೋವಿಡ್ ಚಿಕಿತ್ಸೆಗೆ:
ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ಐ.ಸಿ.ಯು. ಸೌಲಭ್ಯ ಸಜ್ಜುಗೊಳಿಸಲಾಗಿದೆ. ರೋಗಿಗಳ ಸಂಖ್ಯೆ ಹೆಚ್ಚಿದರೆ ಕಾಞಂಗಾಡ್ ಜಿಲ್ಲಾ ಆಸ್ಪತ್ರೆಯನ್ನು ಪೂರ್ಣ ಪ್ರಮಾಣದ ಕೋವಿಡ್ ಚಿಕಿತ್ಸಾ ಕೇಂದ್ರವಾಗಿ ಮಾರ್ಪಡಿಸಲಾಗುವುದು.
ಹತ್ತು 108 ಆಂಬುಲೆನ್ಸ್ ಗಳು ಜಿಲ್ಲೆಯಲ್ಲಿ ಕೋವಿಡ್ ಪ್ರತಿರೋಧ ಚಟುವಟಿಕೆಗಳಿಗಾಗಿ ಮಾತ್ರ ಸೇವೆಯಲ್ಲಿವೆ. ರೋಗಿಗಳ ಸಂಖ್ಯೆ ಹೆಚ್ಚಿದರೆ ಖಾಸಗಿ ವಲಯದ ಆಂಬುಲೆನ್ಸ್ ಬಳಕೆಗೆ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ನೇತೃತ್ವದಲ್ಲಿ ಕ್ರಮಕೈಗೊಳ್ಳಲಾಗಿದೆ.
ಪರವನಡ್ಕ ಎಂ.ಆರ್.ಎಸ್. ಫಸ್ಟ್ ಕೈನ್ ಟ್ರೀಟ್ ಮೆಂಟ್ ಸೆಂಟರ್:
ಪರಿಶಿಷ್ಟ ಪಂಗಡ ಇಲಾಖೆ ವ್ಯಾಪ್ತಿಯಲ್ಲಿ ಚೆಮ್ನಾಡ್ ಪಂಚಾಯತ್ ನ ಪರವನಡ್ಕ ದಲ್ಲಿರುವ ಮಾದರಿ ವಸತಿ ಶಾಲೆಯ 2 ಹಾಸ್ಟೆಲ್ ಬ್ಲೋಕ್ ಗಳನ್ನು 250 ಮಂದಿ ಕೋವಿಡ್ ರೋಗಿಗಳಿಗೆ ದಾಖಲಾತಿ ಚಿಕಿತ್ಸೆ ಕೇಂದ್ರ ವಾಗಿಸಲಾಗಿದೆ. ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜು ವ್ಯಾಪ್ತಿಯಲ್ಲಿರುವ ಟ್ರೀಟ್ ಮೆಂಟ್ ಸೆಂಟರ್ ಆಗಿ ಈ ಸಂಸ್ಥೆ ಚಟುವಟಿಕೆ ನಡೆಸಲಿದೆ. ವಿವಿಧ ಯುವಜನ ಸಂಘಟನೆಗಳ, ಆರೋಗ್ಯ ಕಾರ್ಯಕರ್ತರ ಒಗ್ಗಟ್ಟಿನ ಚಟುವಟಿಕೆಗಳಿಂದ ಎರಡು ದಿನಗಳಲ್ಲಿ ಚಿಕಿತ್ಸಾ ಕೇಂದ್ರಕ್ಕೆ ಅಗತ್ಯವಿರುವ ಭೌತಿಕ ಸೌಲಭ್ಯ ಸಿದ್ಧಪಡಿಸಲಾಗಿದೆ. ಜಾರಿಯಲ್ಲಿ ಜಿಲ್ಲೆಯಲ್ಲಿ ಅತ್ಯಧಿಕ ದಾಖಲಾತಿ ಚಿಕಿತ್ಸಾ ಕೇಂದ್ರವಾಗಿ ಈ ಸಿ.ಎಫ್.ಎಲ್.ಟಿ.ಸಿ. ಮಾರ್ಪಟ್ಟಿದೆ.
ಚಿಕಿತ್ಸಾ ಕೇಂದ್ರಕ್ಕೆ ಅಗತ್ಯವಿರುವ ವೈದ್ಯರ, ದಾದಿಯರ, ಇತರ ಪಾರಾ ಮೆಡಿಕಲ್ ಸಿಬ್ಬಂದಿಯನ್ನು ಜಿಲ್ಲೆಯ ವಿವಿಧ ಸರಕಾರಿ ಆರೋಗ್ಯ ಸಂಸ್ಥೆಗಳಿಂದ ನೌಕರಿ ಕ್ರಮೀಕರಣಗಳ ಹಿನ್ನೆಲೆಯಲ್ಲಿ ನೇಮಿಸಲಾಗಿದೆ. ಚಟ್ಟಂಚಾಲ್ ಕುಟುಂಬ ಆರೋಗ್ಯ ಕೇದ್ರದ ವೈದ್ಯಾಧಿಕಾರಿ ಡಾ.ಕಾಯಿಂuಟಿಜeಜಿiಟಿeಜ ಅವರಿಗೆ ಸಿ.ಎಫ್. ಎಲ್.ಟಿ. ಸಿ. ಯ ನೋಡೆಲ್ ಅಧಿಕಾರಿಯ ಹೊಣೆ ನೀಡಲಾಗಿದೆ. ಈ ಕೇಂದ್ರ ಸಿದ್ಧತೆಗೆ ಜಿಲ್ಲಾವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್, ರಾಷ್ಟ್ರೀಯ ಆರೋಗ್ಯ ದೌತ್ಯ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಡಾ.ರಾಮನ್ ಸ್ವಾತಿ ವಾಮನ್, ಸಿ.ಎಫ್.ಎಲ್.ಟಿ.ಸಿ.ಜಿಲ್ಲಾ ನೋಡೆಲ್ ಅಧಿಕಾರಿ ಡಾ.ರೆಜಿತ್ ಕೃಷ್ಣನ್ ನೇತೃತ್ವ ವಹಿಸಿದ್ದರು.
ಸಮಸ್ಯೆ ಇದ್ದರೂ ಸೌಲಭ್ಯಗಳಿವೆ:
ವೈದ್ಯರ ಹುದ್ದೆಗಳ ನೇಮಕ ಸಂಬಂಧ 5 ಬಾರಿ ಸಂದರ್ಶನ ನಡೆಸಿದ್ದರೂ, ವೈದ್ಯರು ಲಭಿಸದೇ ಇರುವುದು ಪ್ರಧಾನ ಸಮಸ್ಯೆಯಾಗುತ್ತಿದೆ. ಚಿಕಿತ್ಸಾ ಸೌಲಭ್ಯಗಳ ವಿಚಾರದಲ್ಲೂ ಮಿತಿಗಳಿವೆ. ಆದರೆ ಜಿಲ್ಲಾಡಳಿತೆ ಮತ್ತು ಆರೋಗ್ಯ ಇಲಾಖೆಯ ಸತತ ಯತ್ನಗಳ ಫಲವಾಗಿ ಅನಿವಾರ್ಯ ಸೌಕರ್ಯಗಳೆಲ್ಲವೂ ಸಜ್ಜುಗೊಳ್ಳುತ್ತಿವೆ ಎಂದು ಜಿಲ್ಲಾ ವೈದ್ಯಾಧಿಕಾರಿ ತಿಳಿಸಿದರು.
ಈ ಚಟುವಟಿಕೆಗಳಲ್ಲಿ ಸಾರ್ವಜನಿಕರ ತುಂಬು ಬೆಂಬಲದ ಅಗತ್ಯವಿದೆ ಎಂದವರು ವಿನಂತಿಸಿದರು.