HEALTH TIPS

ರಾಜ್ಯದಲ್ಲಿ ಒಟ್ಟು 19,727 ಕೋವಿಡ್ ಬಾಧಿತರು-745 ಮಂದಿ ಚೇತರಿಕೆ

 
        ತಿರುವನಂತಪುರ: ರಾಜ್ಯ ವ್ಯಾಪಕವಾಗಿ ತೀವ್ರ ಹತಾಶೆಗೆ ಕಾರಣವಾಗಿರುವ ಕೋವಿಡ್ ಸೋಂಕಿಗೆ 500 ಕ್ಕೂ ಹೆಚ್ಚು ಪ್ರಕರಣಗಳು ಇಲ್ಲಿಯವರೆಗೆ ವರದಿಯಾಗಿವೆ. ಸೋಮವಾರ ರಾಜ್ಯದಲ್ಲಿ 702 ಜನರಿಗೆ ಕೋವಿಡ್ ಬಾಧಿಸಿದ್ದರೆ 745 ರೋಗಿಗಳು ಗುಣಮುಖರಾಗಿದ್ದಾರೆ. ಕಳೆದ ಕೆಲವು ದಿನಗಳಲ್ಲಿ ವರದಿಯಾದಂತೆ ಸೋಮವಾರ ತಿರುವನಂತಪುರ ಜಿಲ್ಲೆಯಲ್ಲಿ ಅತಿ ಹೆಚ್ಚು ಸೋಂಕಿತರು ಇರುವುದು ಕಳವಳಕಾರಿಯಾಗಿದೆ. ಸೋಮವಾರ ತಿರುವನಂತಪುರವೊಂದರಲ್ಲಿ 161 ಜನರಲ್ಲಿ ದೃಢಪಟ್ಟಿದೆ.
               ಒಟ್ಟು ಚಿಕಿತ್ಸೆಯಲ್ಲಿ 19,727 ಮಂದಿ:
     ರಾಜ್ಯದಲ್ಲಿ ಇದುವರೆಗೆ ಒಟ್ಟು 19,727 ಮಂದಿಗಳಲ್ಲಿ ಸೋಂಕು ಬಾಧಿಸಿದೆ. ಈವರೆಗೆ 10,054 ಜನರನ್ನು ಗುಣಪಡಿಸಲಾಗಿದೆ. 1,55,148 ಜನರು ಕ್ವಾರಂಟೈನ್ ನಲ್ಲಿದ್ದಾರೆ. 9397 ಜನರು ಆಸ್ಪತ್ರೆಗಳಲ್ಲಿದ್ದಾರೆ. 1237 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 9611 ಜನರು ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ 24 ಗಂಟೆಗಳಲ್ಲಿ 18,417 ಮಾದರಿಗಳನ್ನು ಪರೀಕ್ಷಿಸಲಾಯಿತು. ಇದರೊಂದಿಗೆ ಒಟ್ಟು ಮಾದರಿ ಪರೀಕ್ಷೆ 354480 ಕ್ಕೆ ಏರಿತು.
            745 ಜನರು ರೋಗ ಮುಕ್ತಿ:
    ರಾಜ್ಯದಲ್ಲಿ ನಿನ್ನೆ 702 ಮಂದಿಗಳಲ್ಲಿ ಸೋಂಕು ಪತ್ತೆಯಾಗಿದ್ದರೆ ರೋಗ ಪತ್ತೆಯಾದ ಮತ್ತು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ 745 ಜನರು ರೋಗ ಮುಕ್ತರಾದರು.  ಈವರೆಗೆ ರಾಜ್ಯದಲ್ಲಿ 1954 ಸೋಂಕಿತರು ಗುಣಮುಖರಾಗಿರುವರು. ನಿನ್ನೆ ರೋಗನಿರ್ಣಯ ಮಾಡಿದವರಲ್ಲಿ 75 ಮಂದಿ ವಿದೇಶದಿಂದ ಮತ್ತು 91 ಇತರ ರಾಜ್ಯಗಳಿಂದ ಬಂದವರು. ತಿರುವನಂತಪುರ 65, ಕೊಲ್ಲಂ 57, ಪತ್ತನಂತಿಟ್ಟು 49, ಆಲಪ್ಪುಳ 150, ಕೊಟ್ಟಂ 13, ಇಡುಕ್ಕಿ 25, ಎರ್ನಾಕುಳಂ 69, ತ್ರಿಶೂರ್ 45, ಪಾಲಕ್ಕಾಡ್ 9, ಮಲಪ್ಪುರಂ 88, ಕೋಝಿಕ್ಕೋಡ್ 41, ವಯನಾಡ್ 49, ಕಣ್ಣೂರು 32 ಮತ್ತು ಕಾಸರಗೋಡು 53 ಮಂದಿ ಬಾಧಿತರು ರೋಗಮುಕ್ತರಾದರು.
                  ರಾಜಧಾನಿ ನಗರದಲ್ಲಿ 2723 ಜನರು ಚಿಕಿತ್ಸೆಯಲ್ಲಿ:
      ರಾಜಧಾನಿ ನಗರ ತಿರುವನಂತಪುರದಲ್ಲಿ ಪ್ರಸ್ತುತ 2,723 ರೋಗಿಗಳಿದ್ದಾರೆ. ಐಸಿಯುನಲ್ಲಿನ ಶೇಕಡಾ 11 ರಷ್ಟು ವೆಂಟಿಲೇಟರ್‍ಗಳಲ್ಲಿದ್ದಾರೆ. ದೊಡ್ಡ ಸಮುದಾಯ ಕ್ಲಸ್ಟರ್‍ನಲ್ಲಿ ನಡೆಸಿದ 1428 ಕೋವಿಡ್ ಪರೀಕ್ಷೆಗಳಲ್ಲಿ 35 ಪಾಸಿಟಿವ್ ಆಗಿದೆ.
              ರೋಗ ಹರಡುವಿಕೆ ಹೆಚ್ಚುತ್ತಿದೆ-ಜಾಗ್ರತೆ ಇನ್ನಷ್ಟು ಬೇಕು- ಸಿಎಂ:
     ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ತೀವ್ರಗತಿಯ ಸೋಂಕು ಹರಡುವಿಕೆ ಕೆಲವೆಡೆ ಗಂಭೀರ ಪ್ರಮಾಣದಲ್ಲಿ ಇದೆ. ಇದರಿಂದ ಕ್ಲಸ್ಟರ್ ಗಳನ್ನು ಹೆಚ್ಚಳಗೊಳಿಸಲಾಗಿದೆ  ಎಂದು ಹೇಳಿದರು. ರಾಜಕೀಯ ಪಕ್ಷಗಳು, ಆರೋಗ್ಯ ಕಾರ್ಯಕರ್ತರು ಮತ್ತು ಪತ್ರಕರ್ತರೊಂದಿಗೆ ಪ್ರತ್ಯೇಕ ಚರ್ಚೆ ನಡೆಸಿದ್ದೇನೆ ಎಂದು ಸಿಎಂ ಹೇಳಿದರು. ನಿಯಂತ್ರಣವನ್ನು ಇನ್ನಷ್ಟು ಬಿಗಿಗೊಳಿಸಲಾಗುವುದು ಎಂದರು. 'ನಿಯಂತ್ರಣಗಳ ಉಲ್ಲಂಘನೆಯ ಸಂದರ್ಭದಲ್ಲಿ ಪೆÇಲೀಸರಿಗೆ ಸಂಪೂರ್ಣ ಕ್ರಮ ಬಲಗೊಳ್ಳಲಿದೆ. ಸಮಾಜದಲ್ಲಿ ಮಾದರಿಯಾಗಬೇಕಾದವರು ಸೋಂಕು ನಿಯಂತ್ರಣದಲ್ಲಿ ಕಾನೂನಿಗೆ ವಿರುದ್ದವಾಗಿ ಕಾರ್ಯವೆಸಗುತ್ತಿರುವುದು ಸ್ವೀಕಾರಾರ್ಹವಲ್ಲ ಎಂದಿರುವರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries