ಕೊಚ್ಚಿ: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಮುಖ್ಯಮಂತ್ರಿ ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಶಿವಶಂಕರ್ ಅವರನ್ನು ಸೋಮವಾರ ಸುಧೀರ್ಘ ಒಂಬತ್ತು ಗಂಟೆಗಳ ಕಾಲ ಎರಡನೇ ಬಾರಿ ವಿಚಾರಗೈದೆನ್ ಐಎ ಬಳಿಕ ಬಿಡುಗಡೆ ಮಾಡಿತು. ಜೊತೆಗೆ ಕೊಚ್ಚಿಯ ಎನ್‍ಐಎ ಕಚೇರಿಯಲ್ಲಿ ವಿಚಾರಣೆಗಾಗಿ ಶಿವಶಂಕರ್ ಇಂದು ಕೂಡಾ ಹಾಜರಾಗಲಿದ್ದಾರೆ.
ಶಿವಶಂಕರ್ ಅವರು ನಿನ್ನೆ ಬೆಳಿಗ್ಗೆ 9.30 ಕ್ಕೆ ತಿರುವನಂತಪುರನಿಂದ ಕೊಚ್ಚಿಯ ಎನ್‍ಐಎ ಕಚೇರಿಗೆ ಆಗಮಿಸಿದರು. ವಿಚಾರಣೆ ಸಂಜೆ 7 ರವರೆಗೆ ನಡೆಯಿತು. ಶಿವಶಂಕರ್ ಅವರನ್ನು ಎನ್ ಐಎ ಕೊಚ್ಚಿ ಘಟಕದ ಅಧಿಕಾರಿಗಳು ಮತ್ತು ದೆಹಲಿ ಮತ್ತು ಹೈದರಾಬಾದ್ ಅಧಿಕಾರಿಗಳು ವಿಚಾರಣೆ ನಡೆಸಿದರು. ಇದಕ್ಕಾಗಿ ತನಿಖಾ ತಂಡ 56 ಪ್ರಶ್ನೆಗಳನ್ನು ಸಿದ್ಧಪಡಿಸಿತ್ತು ಎಂದು ವರದಿಯಾಗಿದೆ.
ಈ ಹಿಂದೆ ಎನ್‍ಐಎ ತಿರುವನಂತಪುರದಲ್ಲಿ ಶಿವಶಂಕರ್ ಅವರನ್ನು ಪ್ರಶ್ನಿಸಿತ್ತು. ಆ ದಿನ ಅವರನ್ನು ಐದು ಗಂಟೆಗಳ ಕಾಲ ಪ್ರಶ್ನಿಸಲಾಗಿತ್ತು. ಶಿವಶಂಕರ್ ಅವರು ಈ ಪ್ರಕರಣದ ಆರೋಪಿಗಳಾದ ಸ್ವಪ್ನಾ ಮತ್ತು ಸರಿತ್ ಅವರು ತನ್ನ ಸ್ನೇಹಿತರಾಗಿರುವರು ಎಂದು ಹೇಳಿದ್ದರು.
ಆದರೆ ವಿಚಾರಣೆಯಲ್ಲಿ ನೀಡಿದ ಹೇಳಿಕೆಗಳಲ್ಲಿನ ವಿರೋಧಾಭಾಸಗಳ ಬಗ್ಗೆ ಸ್ಪಷ್ಟೀಕರಣ ಪಡೆಯುವುದು ಎನ್‍ಐಎಯ ಮುಖ್ಯ ಪ್ರಯತ್ನವಾಗಿದೆ. ಶಿವಶಂಕರ್ ಜಾಮೀನು ಪಡೆಯದೆ ಸ್ವಂತ ವಾಹನದಲ್ಲಿ ಕೊಚ್ಚಿಗೆ ಬಂದರು. ಏತನ್ಮಧ್ಯೆ, ಸ್ವಪ್ನಾ ಸುರೇಶ್ ಸೇರಿದಂತೆ ಆರೋಪಿಗಳು ಕಾರ್ಯದರ್ಶಿಯೊಂದಿಗಿನ ನಿಕಟತೆಯ ನಿಖರತೆಗಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ವಿಶ್ಲೇಶಿಸಲೂ ಕ್ರಮ ಕೈಗೊಂಡಿದೆ.


