ನವದೆಹಲಿ: ಮಾನವ ಕಂಪ್ಯೂಟರ್ ಎಂದೇ ಖ್ಯಾತರಾಗಿರುವ ಶಕುಂತಲಾ ದೇವಿ ಅವರ ಜೀವನ ಚರಿತ್ರೆಯ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ.
ವಿದ್ಯಾಬಾಲನ್ ಶಕುಂತಲಾ ದೇವಿ ಅವರ ಪಾತ್ರ ನಿರ್ವಹಿಸಿದ್ದು, ಸಿನಿಮಾದ ಟ್ರೈಲರ್ ಎಲ್ಲರನ್ನೂ ಆಕರ್ಷಿಸುತ್ತಿದೆ.ಸೀರೆ ಹಾಗೂ 80 ರ ದಶಕದ ಚಿನ್ನಾಭರಣಗಳೊಂದಿಗೆ ವಿದ್ಯಾಬಾಲನ್ ಕಾಣಿಸಿಕೊಂಡಿದ್ದು, ಕಂಪ್ಯೂಟಿಂಗ್ ವೇಗದ ಲೆಕ್ಕಾಚಾರ ಹೊಂದಿರುವ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಟ್ರೈಲರ್ ಬಿಡುಗಡೆಯಾದ ಕೇವಲ 10 ನಿಮಿಷಗಳಲ್ಲಿ 20,000 ಲೈಕ್ ಗಳು ಬಂದಿವೆ.
ವಿನೂತನ ರೀತಿಯಲ್ಲಿ ಟ್ರೈಲರ್ ಬಿಡುಗಡೆಯಾಗಿದ್ದು, ವಿದ್ಯಾಬಾಲನ್ ವೀಕ್ಷಕರಿಗೆ ಗಣಿತದ ಸಮಸ್ಯೆಯೋಂದನ್ನು ನೀಡುತ್ತಾರೆ, ಗಣಿತದ ಸಮಸ್ಯೆಯನ್ನು ಬಗೆಹರಿಸಿದರೆ ಸಪ್ರ್ರೈಸ್ ಕಾದಿದೆ ಎಂದು ವಿದ್ಯಾಬಾಲನ್ ಟ್ವೀಟ್ ಮಾಡಿದ್ದಾರೆ.
Solve for c... if you do, you will c the SURPRISE! Get a chance to see the trailer before the world. Meet #ShakuntalaDeviOnPrime July 31, on @PrimeVideoIN.
@sanyamalhotra07 @Jisshusengupta @TheAmitSadh @anumenon1805 @sonypicsprodns @vikramix @Abundantia_Ent @ShikhaaSharma03



