HEALTH TIPS

ಕೀಂ ಪರೀಕ್ಷೆಯ ವೇಳೆ ಜಮಾಯಿಸಿದ ಸುಮಾರು 600 ಪೆÇೀಷಕರ ವಿರುದ್ಧ ಪ್ರಕರಣ ದಾಖಲು

 
       ತಿರುವನಂತಪುರ: ತಿರುವನಂತಪುರ ಕೇಂದ್ರದಲ್ಲಿ ಇತ್ತೀಚೆಗೆ ನಡೆದ ಸಾಮಾನ್ಯ ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆ(ಕೀಂ) ಸಂದರ್ಭದಲ್ಲಿ ಸಾಮಾಜಿಕ ಅಂತರ ಉಲ್ಲಂಘಿಸಿ ಕೋವಿಡ್ ವ್ಯಾಪಕತೆಗೆ ಕಾರಣರಾದ ಪೆÇೀಷಕರ ಗುಂಪಿನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ತಿರುವನಂತಪುರ ನಗರದಲ್ಲಿ ಮಾತ್ರ ಸುಮಾರು 600 ಪೆÇೀಷಕರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ. ಘಟನೆ ಬೆಳಕಿಗೆ ಬಂದ ಕೂಡಲೇ ಅವರ ವಿರುದ್ಧ ಪ್ರಕರಣ ದಾಖಲಿಸುವಂತೆ ಡಿಜಿಪಿ ನಿರ್ದೇಶನ ನೀಡಿದ್ದರು.
        ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳೊಂದಿಗೆ ಪೆÇೀಷಕರ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಸಾರವಾಗಿದ್ದವು. ತಿರುವನಂತಪುರ ನಗರದಲ್ಲಿ ಟ್ರಿಪಲ್ ಲಾಕ್ ಡೌನ್ ಸಮಯದಲ್ಲಿ, ಪರೀಕ್ಷಾ ಕೇಂದ್ರ ಪರಿಸರದಲ್ಲಿ ವ್ಯಾಪಕ ಜನಸಂದಣಿ ಭಾರೀ ಟೀಕೆಗೆ ಕಾರಣವಾಗಿತ್ತು.
       ಡಿಜಿಪಿ ಸೂಚನೆಯ ಮೇರೆಗೆ ಪೆÇೀಷಕರ ವಿರುದ್ಧ ಬುಧವಾರ ಕ್ರಮ ಕೈಗೊಳ್ಳಲಾಗಿದೆ. ಮ್ಯೂಸಿಯಂ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾಟನ್ ಹಿಲ್ ಪರೀಕ್ಷಾ ಕೇಂದ್ರದಲ್ಲಿ ಜಮಾಯಿಸಿದ 300 ಕ್ಕೂ ಹೆಚ್ಚು ಜನರು ಮತ್ತು ವೈದ್ಯಕೀಯ ಕಾಲೇಜು ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಸೇಂಟ್ ಮೇರಿಸ್ ಶಾಲೆಯಲ್ಲಿ ಜಮಾಯಿಸಿದವರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ. ಎರಡು ಪ್ರದೇಶಗಳಲ್ಲೂ ಗುರುತಿಸಲ್ಪಟ್ಟ ಸುಮಾರು 600 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
       ರಾಜ್ಯದಲ್ಲಿ ಕೀಮ್ ಪರೀಕ್ಷೆಯನ್ನು ಬರೆದ ಐದು ವಿದ್ಯಾರ್ಥಿಗಳಿಗೆ ಕೋವಿಡ್ ದೃಢಪಡಿಸಲಾಗಿದೆ. ಯಾವುದೇ ಪೆÇೀಷಕರು ಈವರೆಗೆ ಸೋಂಕಿತರಾಗಿರುವುದು ದೃಢಪಟ್ಟಿಲ್ಲ. ತಿರುವನಂತಪುರದಲ್ಲಿ ಕೋವಿಡ್ ದೃಢಪಟ್ಟ ನಾಲ್ವರು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದವರಾಗಿರುವರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries