HEALTH TIPS

ಕೋವಿಡ್-ರಾಜ್ಯದಲ್ಲಿ ಹೊಸ ಮಾನದಂಡಗಳೊಂದಿಗೆ ನಿಬಂಧನೆಗಳಲ್ಲಿ ಬದಲಾವಣೆ


     ತಿರುವನಂತಪುರ: ಆರೋಗ್ಯ ಇಲಾಖೆಯು ರಾಜ್ಯದಲ್ಲಿ ಕೋವಿಡ್ ನಿಬಂಧನೆಗಳಿಗೆ ಬುಧವಾರ ಬದಲಾವಣೆಗಳನ್ನು ಹೊರತಂದಿದೆ. ಹೊಸ ಬದಲಾವಣೆಗಳಂತೆ  ಆಂಟಿಜೆನ್ ಪರೀಕ್ಷೆಯ ಫಲಿತಾಂಶವು ಕೋವಿಡ್ ದೃಢೀಕರಿಸಲು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ಡಿಸ್ ಚಾರ್ಜ್ ಮಾಡಲು ಸಾಕಾಗುವುದಿಲ್ಲ ಎಂದು ತಿಳಿಸಲಾಗಿದೆ. ಇಲ್ಲಿಯವರೆಗೆ, ಆರ್‍ಟಿಪಿಸಿಆರ್ ಪರೀಕ್ಷೆಯ ಫಲಿತಾಂಶದ ನಂತರವೇ ರೋಗಿಗಳನ್ನು ಬಿಡುಗಡೆ ಮಾಡಲು ಅವಕಾಶವಿತ್ತು. ಈ ವಿಧಾನವನ್ನು ಮಾರ್ಪಡಿಸಲಾಗಿದೆ.
       ಆಶ್ಪತ್ರೆಯಿಂದ ತೆರಳುವ ಮೊದಲು ಪಿಸಿಆರ್ ಪರೀಕ್ಷೆ ನಡೆಸಲು ಈ ಹಿಂದಿನ ನಿರ್ದೇಶನವನ್ನು ರದ್ದುಪಡಿಸಿ ಆರೋಗ್ಯ ಇಲಾಖೆ ಹೊಸ ಆದೇಶ ಹೊರಡಿಸಿದೆ. ಕೋವಿಡ್ ಈ ಹಿಂದೆ ಎರಡು ಬಾರಿ ಪಿಸಿಆರ್‍ಗೆ ಧನಾತ್ಮಕ ಪರೀಕ್ಷೆ ನಡೆಸಿ ಋಣಾತ್ಮಕ ಎಂದು ದೃಢಪಡಿಸಿದ ನಂತರವೇ ರೋಗಿಗಳನ್ನು ಬಿಡುಗಡೆ ಮಾಡಲಾಗುತ್ತಿತ್ತು.
        ಆಸ್ಪತ್ರೆ ಮತ್ತು ಪ್ರಯೋಗಾಲಗಳಲ್ಲಿ ಜನದಟ್ಟಣೆ ಹೆಚ್ಚಿರುವುದರಿಂದ ಪರೀಕ್ಷಾ ಫಲಿತಾಂಶ ಪಡೆಯಲು ವಿಳಂಬವಾಗುತ್ತಿದೆ ಎಂಬ ವರದಿಗಳಿವೆ. ಇದಲ್ಲದೆ, ರೋಗಿಗಳನ್ನು ಆಸ್ಪತ್ರೆಯಿಂದ ಸಾಧ್ಯವಾದಷ್ಟು ಬೇಗ ಬಿಡುಗಡೆ ಮಾಡುವ ಉದ್ದೇಶದಿಂದ ಹೊಸ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.
        ಆರ್ಟಿಜನ್(ಪ್ರತಿಜನಕ) ಪರೀಕ್ಷೆಯನ್ನು ಮಾಡಿದರೆ ಫಲಿತಾಂಶವನ್ನು ಅರ್ಧ ಘಂಟೆಯೊಳಗೆ ತಿಳಿಯಬಹುದು. ಇದರಿಂದ  ಡಿಸ್ಚಾರ್ಜ್‍ಗಳನ್ನು ವೇಗಗೊಳಿಸಬಹುದು. ಡಿಸ್ಚಾರ್ಜ್ ನಿಯಮಾವಳಿಗಳನ್ನು ರಾಜ್ಯವು ಎರಡನೇ ಬಾರಿಗೆ ಬದಲಾಯಿಸಿದೆ. ಲಕ್ಷಣರಹಿತ ರೋಗಿಗಳಲ್ಲಿ, ಮೊದಲ ಹತ್ತು ದಿನಗಳ ನಂತರ ಆರ್ಟಿಜನ್ ಪರೀಕ್ಷೆಯನ್ನು ನಡೆಸಬಹುದು. ಅದು ನಕಾರಾತ್ಮಕವಾಗಿದ್ದರೆ ಆಸ್ಪತ್ರೆಯಿಂದ ಕಳಿಸಬಹುದಾಗಿದೆ.
        ಹೊಸ ಆದೇಶಕ್ಕೆ ಆರ್ಟಿಜನ್ ಪರೀಕ್ಷೆಯ ನಂತರ ಬಿಡುಗಡೆಯಾದ ವ್ಯಕ್ತಿಯನ್ನು ಮನೆಯಲ್ಲಿ ಏಳು ದಿನಗಳವರೆಗೆ ಕ್ವಾರಂಟೈನ್ ಮಾಡಬೇಕಾಗುತ್ತದೆ. ಸಂಪರ್ಕ ನಿಷೇಧದ ಅವಧಿಯಲ್ಲಿ ಜನರು ಕಿಕ್ಕಿರಿದ ಸ್ಥಳಗಳಿಗೆ ಹೋಗಬಾರದು ಎಂದು ಮಾರ್ಗಸೂಚಿಗಳು ಹೇಳುತ್ತವೆ. ಬಿ ವರ್ಗದ ತೀವ್ರ ರೋಗಲಕ್ಷಣಗಳನ್ನು ಹೊಂದಿರುವ ರೋಗಿಗಳು ಮತ್ತು ತೀವ್ರ ಆರೋಗ್ಯ ಸಮಸ್ಯೆಗಳಿರುವ ರೋಗಿಗಳನ್ನು 14 ದಿನಗಳ ಚಿಕಿತ್ಸೆಯ ನಂತರ ಆರ್ಟಿಜನ್ ಪರೀಕ್ಷಿಸಬಹುದು ಎಂದು ಸೂಚಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries