ಕಾಸರಗೋಡು: ಕೋವಿಡ್ ಇದುವರೆಗೆ ಜಿಲ್ಲೆಯ 826 ಜನರಿಗೆ ಸಂಪರ್ಕದ ಮೂಲಕ ಸೋಂಕು ತಗುಲಿದೆ. ಮೊದಲ ಮತ್ತು ಎರಡನೇ ಹಂತಗಳಲ್ಲಿ 70 ಜನರು ಸೋಂಕಿಗೆ ಒಳಗಾಗಿದ್ದರೆ, ಮೂರನೇ ಹಂತದಲ್ಲಿ 756 ಜನರು ಸೋಂಕಿಗೆ ಒಳಗಾಗಿದ್ದಾರೆ. ಐದು ತಿಂಗಳಲ್ಲಿ 1476 ಜನರಿಗೆ ಕೋವಿಡ್ ವೈರಸ್ ಸೋಂಕು ತಗುಲಿದೆ. ಸಂಪರ್ಕದ ಮೂಲಕ ಜಿಲ್ಲೆಯಲ್ಲಿ ಈವರೆಗೆ ಸರ್ಕಾರಿ ಮತ್ತು ಖಾಸಗಿ ವಲಯದ 28 ಆರೋಗ್ಯ ಕಾರ್ಯಕರ್ತರು ಸೇರಿದಂತೆ ಸುಮಾರು 40 ಉದ್ಯೋಗಿಗಳು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ.
ಇದರಲ್ಲಿ ಏಳು ಪೆÇಲೀಸರು, ಅಬಕಾರಿ ಅಧಿಕಾರಿ ಮತ್ತು ಇಬ್ಬರು ಸಂಸದರು ಸೇರಿದ್ದಾರೆ. ಕಾಸರಗೋಡು ಜನರಲ್ ಆಸ್ಪತ್ರೆಯ ಒಬ್ಬರು ಸೇರಿದಂತೆ ನಾಲ್ವರು ಆರೋಗ್ಯ ಕಾರ್ಯಕರ್ತರು, ವೈದ್ಯರಿಗೆ ಕೋವಿಡ್ ದೃಢಪಡಿಸಲಾಗಿದೆ. ಜಿಲ್ಲಾ ಆಸ್ಪತ್ರೆಯ ಲ್ಯಾಬ್ ತಂತ್ರಜ್ಞರು ಮತ್ತು ಕುಂಬಳೆ, ಮಂಜೇಶ್ವರ ಮತ್ತು ಮಂಗಲ್ಪಾಡಿಯ ಆಶಾ ಕಾರ್ಯಕರ್ತರಿಗೂ ಸೋಂಕು ಬಾಧಿಸಿರುವುದು ಖಚಿತಗೊಂಡಿದೆ. ಪೆÇಲೀಸರಲ್ಲಿ ಒಬ್ಬ ಎಸ್‍ಐ ಮತ್ತು ಇಬ್ಬರು ಎಎಸ್‍ಐಗಳು ಸೋಂಕಿಗೊಳಗಾಗಿರುವರು.
ಈ ಪೈಕಿ 108 ಮಂದಿಗಳಲ್ಲಿ ಸೋಂಕಿನ ಮೂಲ ಇನ್ನೂ ಸ್ಪಷ್ಟವಾಗಿಲ್ಲ. ಎಲ್ಲಾ ಐದು ಸಂತ್ರಸ್ತರಲ್ಲಿ ರೋಗದ ಮೂಲವನ್ನು ಕಂಡುಹಿಡಿಯಲಾಗಲಿಲ್ಲ. 38 ಜನರಿಗೆ ಸೋಂಕು ಪತ್ತೆಯಾಗಿದೆ. ಈ ಪೈಕಿ 26 ಮಂದಿ ಸಂಪರ್ಕದಲ್ಲಿ ಕೋವಿಡ್ ಸೋಂಕಿಗೆ ಒಳಗಾಗಿರುವರು. ಸೋಮವಾರ 402 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಜೊತೆಗೆ ಕೋವಿಡ್ 53 ಜನರಿಗೆ ನೆಗೆಟಿವ್ ಆಗಿದೆ ಎಂದು ಅಧಿಕೃತರು ಅಂಕಿಅಂಶ ನೀಡಿರುವರು.


