HEALTH TIPS

ರಾಜ್ಯದ ಎಲ್ಲಾ 14 ಜಿಲ್ಲೆಗಳಲ್ಲೂ ಕೋವಿಡ್ ಸಾವುಗಳಲ್ಲಿ ಶೇ.68 ಮಂದಿಗಳೂ ವೃದ್ಧರು-ಮೂಡಿದ ಆತಂಕ


           ತಿರುವನಂತಪುರ:  ಕೋವಿಡ್ ಸಂದರ್ಭದಲ್ಲಿ ಆರಂಭದ ಕಾಲದಲ್ಲಿ  ಕೋವಿಡ್ ರಕ್ಷಣಾ ಚಟುವಟಿಕೆಗಳಲ್ಲಿ ಮುನ್ನೆಲೆಯಲ್ಲಿದ್ದ ಕೇರಳ ಈಗ ಹೆಚ್ಚು ಮಂದಿಗೆ ಕೋವಿಡ್ ಬಾಧಿಸುವ ಮೂಲಕವೂ ಮುಂದಿದೆ. ಸಂಪರ್ಕದ ಮೂಲಕ ಸೋಂಕು ಮತ್ತು ಮೂಲವನ್ನು ತಿಳಿಯಲಾದ ರೋಗಿಗಳ ಹೆಚ್ಚಳವು ಕೋವಿಡ್ ಪ್ರಕರಣಗಳ ಹೆಚ್ಚಳಕ್ಕೆ ಮುಖ್ಯ ಕಾರಣವಾಗಿದೆ. ಜೊತೆಗೆ ಸೋಂಕಿಗೊಳಗಾಗಿ ಸಾವನ್ನಪ್ಪುವವರ ಸಂಖ್ಯೆ ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ರಾಜ್ಯದಲ್ಲಿ ಕೋವಿಡ್ ಮರಣ ಪ್ರಮಾಣವು ಇತರ ರಾಜ್ಯಗಳಿಗಿಂತ ಕಡಿಮೆಯಿದ್ದರೂ, ಹಿರಿಯ ವಯೋಮಾನದವರು ಮರಣಹೊಂದಿರುವುದು ಕಳವಳಕ್ಕೆ ಕಾರಣವಾಗಿದೆ.
                      ಹೆಚ್ಚಿನ ಸಾವುಗಳು 60 ವರ್ಷಕ್ಕಿಂತ ಮೇಲ್ಪಟ್ಟವರು:
         ಕೇರಳದಲ್ಲಿ ಜುಲೈ 26 ರವರೆಗೆ ಅತಿ ಹೆಚ್ಚು ಸಾವುಗಳು 60 ವರ್ಷಕ್ಕಿಂತ ಮೇಲ್ಪಟ್ಟವರದ್ದಾಗಿದೆ. ಅಂದರೆ ರಾಜ್ಯದಲ್ಲಿ 11-19 ಮತ್ತು 90 ವರ್ಷಕ್ಕಿಂತ ಕೆಳಗಿನವರು ಕೋವಿಡ್‍ನಿಂದ ಸಾವನ್ನಪ್ಪಿಲ್ಲ. ಒಟ್ಟು ಸಾವುಗಳಲ್ಲಿ ಶೇ.35.59 ರಷ್ಟು 60-69 ವರ್ಷ ವಯಸ್ಸಿನವರು. ಸತ್ತವರಲ್ಲಿ ಶೇ. 29.5% ರಷ್ಟು 70-79 ವರ್ಷ ವಯಸ್ಸಿನವರು. 60 ವರ್ಷಕ್ಕಿಂತ ಮೇಲ್ಪಟ್ಟವರ ಸಂಖ್ಯೆ ಶೇ.68.85.
                           ಸತ್ತವರಲ್ಲಿ ಶೇಕಡಾ 37.29 ರಷ್ಟು ಜನರು ಕೇರಳದ ಹೊರಗಿನವರು:
       ಕೇರಳದಲ್ಲಿ ಇದುವರೆಗೆ ಸಂಭವಿಸಿದ ಸಾವುಗಳಲ್ಲಿ ಶೇಕಡಾ 37.29 ರಷ್ಟು ರಾಜ್ಯದ ಹೊರಗಿನಿಂದ ಬಂದವರಾಗಿದ್ದಾರೆ. ಶೇ. 22.03 ಮಂದಿಗಳು ಹೊರಗಿನ ಯಾವುದೇ ಸಂಪರ್ಕಗಳಿಲ್ಲದೆ ಸೋಂಕು ಬಾಧಿಸಿದೆಯೆಮದು ಆರೋಗ್ಯ ಇಲಾಖೆ ಬೊಟ್ಟುಮಾಡಿದೆ. ಸರ್ಕಾರದ ಪ್ರಕಾರ, ಸಂಪರ್ಕ ಕಾಯಿಲೆಯಿಂದ ಸಾವನ್ನಪ್ಪಿದವರ ಸಂಖ್ಯೆ ಶೇ.5.08. ಆದಾರೂ  ಶೇ. 35.59 ಸಾವುಗಳು ಮೂಲ ಸ್ಪಷ್ಟವಿಲ್ಲದ ಕಾರಣ ಭಾರೀ ಬೆದರಿಕೆಯಾಗಿ ಪರಿಣಮಿಸಿದೆ.
         ರಾಜ್ಯದಲ್ಲಿ ಕೋವಿಡ್‍ನಿಂದಾಗಿ ಶೇ.35.59 ರಷ್ಟು ಸಾವುಗಳು ತಿಳಿಯಲಾಗದ ಮೂಲಗಳಿಂದ ಬಂದಿವೆ ಎಂದು ಅಂದಾಜಿಸಲಾಗಿದೆ. ಸತ್ತವರಲ್ಲಿ ಏಳು, 60 ರಿಂದ 69 ವರ್ಷದೊಳಗಿನವರಾಗಿದ್ದು ಎಲ್ಲಾ ಕೇರಳಕ್ಕೆ ಇತರ ರಾಜ್ಯಗಳಿಂದ ಬಂದವರಾಗಿದ್ದಾರೆ. ಇಬ್ಬರು ಜನರ ಸಂಪರ್ಕದ ಮೂಲಕ ಕೋವಿಡ್ ಸೋಂಕಿಗೆ ಒಳಗಾಗಿದ್ದರು. 60-79 ವರ್ಷ ವಯಸ್ಸಿನವರಲ್ಲಿ ಗುರುತಿಸಲಾಗದ ಕೋವಿಡ್ ಸಾವುಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ ಒಂದು ವಾರದಲ್ಲಿ ಕೇರಳದ ಹೊರಗೆ ಒಬ್ಬ ವ್ಯಕ್ತಿ ಸೊಂಕಿಗೊಳಗಾಗಿ ಮೃತಪಟ್ಟಿದ್ದಾರೆ.ಆದರೆ ಸೋಂಕಿನ ಮೂಲ ಸ್ಪಷ್ಟವಾಗಿಲ್ಲ.
       47 ಮಂದಿ ಮೃತರಿಗೆ ಇತರ ಖಾಯಿಲೆ:
    ರಾಜ್ಯ ಅಂಕಿಅಂಶಗಳ ಪ್ರಕಾರ, ಕೋವಿಡ್ ಸೋಂಕಿನಿಂದ ಇದುವರೆಗೆ 61 ಜನರು ಸಾವನ್ನಪ್ಪಿದ್ದಾರೆ. ಈ ಪೈಕಿ 47 ಜನರಿಗೆ ಅನೇಕ ಕಾಯಿಲೆಗಳು ಇದ್ದವು. ಇದು ಚಿಂತಾಜನಕವಾಗಿದೆ. ಆರೋಗ್ಯ ಇಲಾಖೆಯ ಪ್ರಕಾರ, ರಾಜ್ಯದ ಶೆ.10 ವೃದ್ಧರಿಗೆ ಕ್ಯಾನ್ಸರ್, ಹೃದ್ರೋಗ ಮತ್ತು ಮೂತ್ರಪಿಂಡ ಕಾಯಿಲೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಶ್ವಾಸಕೋಶದ ಕಾಯಿಲೆ ಇರುವವರು. ಶೇ.59 ವೃದ್ಧರು ಯಾವುದೇ ಕಾಯಿಲೆಗೆ ನಿಯಮಿತವಾಗಿ ಔಷಧಿಗಳನ್ನು ಸೇವಿಸುತ್ತಿದ್ದವರಾಗಿದ್ದಾರೆ.
              ಎಲ್ಲಾ 14 ಜಿಲ್ಲೆಗಳಲ್ಲಿ ಕೋವಿಡ್ ಸಾವುಗಳು:
    ರಾಜ್ಯದ ಎಲ್ಲಾ 14 ಜಿಲ್ಲೆಗಳಲ್ಲೂ ಕೋವಿಡ್ ಗೆ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಕೋವಿಡ್ ಸಾಮಾಜಿಕ ವಿಸ್ತರಣೆ ಬಲಗೊಳ್ಳುತ್ತಿರುವ ಪರಿಸ್ಥಿತಿಯಲ್ಲಿ ರಕ್ಷಣಾ ಚಟುವಟಿಕೆಗಳನ್ನು ಬಲಪಡಿಸುವ ಅಗತ್ಯವಿದೆ ಮತ್ತು ಮೂಲವನ್ನು ತಿಳಿಯದೆ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಸೋಮವಾರ ನಡೆದ ವಿಶೇಷ ಕ್ಯಾಬಿನೆಟ್ ಸಭೆಯಲ್ಲಿ ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ಜಾರಿಗೆ ತರಲು ತೀರ್ಮಾನ ಕೈಗೊಂಡಿಲ್ಲ. ಸಂಪೂರ್ಣ ಲಾಕ್‍ಡೌನ್ ಅಪ್ರಾಯೋಗಿಕ ಎಂದು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿ ಅದನ್ನು ಕೈಬಿಟ್ಟಿದ್ದು ಸ್ಥಳೀಯ ಮಟ್ಟದಲ್ಲಿ ಅಗತ್ಯಗಳನ್ನು ಗಮನಿಸಿ ಜಾರಿಗೊಳಿಸಬಹುದೆಂದು ಸೂಚಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries