ಕೊಚ್ಚಿ: ಭಾರೀ ಆರ್ಥಿಕ ಸಂದಿಗ್ದತೆಯಿಂದ ರಾಜ್ಯದ ಖಾಸಗಿ ಬಸ್‍ಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸಲು ತೀರ್ಮಾನಿಸಿದೆ. ಆಗಸ್ಟ್ 1 ರಿಂದ ಸೇವೆಗಳನ್ನು ನಿಲ್ಲಿಸಲಾಗುವುದೆಂದು ಬಸ್ ಮಾಲೀಕರು ಜಂಟಿ ಸಮಿತಿ ಮಾಹಿತಿ ನೀಡಿದೆ. ನಷ್ಟದೊಂದಿಗೆ ಬಸ್ ಸಂಚಾರ ಮುಂದುವರಿಸಲು ಸಾಧ್ಯವಿಲ್ಲ. ಆರ್ಥಿಕ ಸಂಕಷ್ಟವನ್ನು ಪರಿಗಣಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಜಂಟಿ ಸಮಿತಿ ತಿಳಿಸಿದೆ.
ಕೋವಿಡ್ -19 ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ ಸರ್ಕಾರದ ನಿರ್ದೇಶನದ ಪ್ರಕಾರ ದರಗಳು ಹೆಚ್ಚಾಗಿದ್ದರೂ, ಆರ್ಥಿಕ ನಷ್ಟವು ಮುಂದುವರಿಯುತ್ತಿದೆ. ಈ ಮಧ್ಯೆ ಇಂಧನ ಬೆಲೆಗಳ ನಿರಂತರ ಹೆಚ್ಚಳವು ಆರ್ಥಿಕ ಹೊರೆಯನ್ನು ಸೃಷ್ಟಿಸಿದೆ. ಇದರೊಂದಿಗೆ ಸೇವೆಯನ್ನು ಮುಂದುವರಿಸಲು ಯಾವುದೇ ಸಾಧ್ಯತೆಗಳೂ ಮುಚ್ಚಿದೆ ಎಂದು ಬಸ್ ಮಾಲೀಕರು ಮಾಹಿತಿ ನೀಡಿದರು.
ಜೊತೆಗೆ ಸಾರ್ವಜನಿಕ ಸಾರಿಗೆಯನ್ನು ಬಳಸುವ ಜನರ ಸಂಖ್ಯೆ ಕಡಿಮೆ ಇದೆ. ಖಾಸಗೀ ಬಸ್ ಸೇವಾ ವಲಯ ಈ ಹಿಂದೆಯೇ ಆರ್ಥಿಕ ತೊಂದರೆ ಅನುಭವಿಸುತ್ತಲೇ ಇತ್ತು. ಈ ಅಂಶಗಳಿಂದಾಗಿ ರಾಜ್ಯದಲ್ಲಿ ಸೇವೆಗಳನ್ನು ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬಂದಿರುವುದಾಗಿ ಬಸ್ ಮಾಲೀಕರು ತಿಳಿಸಿದ್ದಾರೆ. ಚಾಲನೆಯಲ್ಲಿಲ್ಲದ ಬಸ್‍ಗಳ ಮೇಲಿನ ತೆರಿಗೆಯನ್ನು ತಪ್ಪಿಸಲು ಮೋಟಾರು ವಾಹನ ಇಲಾಖೆಗೆ ಜಿ ಫಾರ್ಮ್ ನೀಡಲು ನಿರ್ಧರಿಸಲಾಯಿತು.
ಸರ್ಕಾರ ರಿಯಾಯಿತಿಗಳನ್ನು ಘೋಷಿಸಿದ ನಂತರ ರಾಜ್ಯದಲ್ಲಿ ಖಾಸಗಿ ಬಸ್ಸುಗಳು ಕಾರ್ಯನಿರ್ವಹಿಸುತ್ತಿದ್ದವು. ಈ ಮಧ್ಯೆ ಕೋವಿಡ್ ಬಾಧಿತರ ಸಂಖ್ಯೆ ಹೆಚ್ಚಾದಂತೆ ಬಸ್ಸುಗಳಲ್ಲಿ ಪ್ರಯಾಣಿಸುವ ಜನರ ಸಂಖ್ಯೆಯೂ ಕುಸಿಯಿತು. ಏರುತ್ತಿರುವ ಇಂಧನ ಬೆಲೆಗಳು ಬಸ್ ಸೇವೆಯ ಹಿನ್ನಡೆಗೂ ಕಾರಣವಾಗಿದೆ. ಈ ಕಾರಣಗಳಿಂದ ಅನ್ಯ ಮಾರ್ಗಗಳಿಲ್ಲದೆ ಬಸ್ ಮಾಲೀಕರು ಸೇವೆಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿರುವರು.


