ಮಂಜೇಶ್ವರ: ಭಾನುವಾರ ರಾತ್ರಿ ಬೀಸಿದ ಭಾರಿ ಗಾಳಿ ಹಾಗೂ ಮಳೆಗೆ ಮಂಜೇಶ್ವರ ಗ್ರಾ. ಪಂ. ನ ತೂಮಿನಾಡು ಎಂಬಲ್ಲಿ ಸಿನಿಮಾ ನಟರೊಬ್ಬರ ಮನೆಯ ಒಂದು ಭಾಗ ಪೂರ್ಣವಾಗಿ ಕುಸಿದು ಬಿದ್ದಿದೆ.
ತುಳು , ಕನ್ನಡ ಸಿನಿಮಾ ನಟ ಹಾಗೂ ರಂಗಭೂಮಿಯ ನಾಟಕ ಕಲಾವಿದನಾಗಿರುವ ಪ್ರಕಾಶ್ ತೂಮಿನಾಡು ಅವರ ಮನೆ ಕುಸಿದು ಬಿದ್ದಿದೆ. ಮನೆಯ ಹಿಂಬದಿಯ ಭಾಗ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಸುಮಾರು ಮೂರೂ ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ. ಅಡುಗೆ ಮನೆ ಹಾಗು ಎರಡು ಮಲಗುವ ಕೊಠಡಿಗಳ ಮೇಲೆ ಹೆಂಚುಗಳು ಬಿದ್ದು ಸಾಮಾಗ್ರಿಗಳು ಕೂಡಾ ಹಾನಿಗೀಡಾಗಿವೆ. ಈ ಸಮಯ ಮನೆಯಲ್ಲಿ ಯಾರೂ ಇಲ್ಲದ ಹಿನ್ನೆಲೆಯಲ್ಲಿ ಭಾರಿ ಜೀವಾಪಾಯದ ಅನಾಹುತ ತಪ್ಪಿ ಹೋಗಿದೆ.