HEALTH TIPS

ಬೆಚ್ಚಿದ ಚೀನಾ, ಮತ್ತೆ ಹರಡುತ್ತಿದೆಯಾ ಸೋಂಕು?

          ಬೀಜಿಂಗ್:  ಕೊರೊನಾ ತವರೂರು ಚೀನಾದಲ್ಲಿ ಮತ್ತೆ ಸೋಂಕು ಹರಡುವ ಆತಂಕ ಮನೆ ಮಾಡಿದೆ. ಚೀನಾದ ಪಶ್ಚಿಮ ಪ್ರಾಂತ್ಯ ಶಿನ್ ಜಿಯಾಂಗ್ ರಾಜಧಾನಿ ಉರುಮ್ಕಿ ನಗರದಲ್ಲಿ ದಿಢೀರ್ ಅಂತಾ 10 ಕೊರೊನಾ ಕೇಸ್‌ಗಳು ಪತ್ತೆಯಾಗಿವೆ. 10 ಕೇಸ್‌ಗಳು ದೃಢಪಟ್ಟಿರುವ ಕುರಿತು ಚೀನಾ ಸರ್ಕಾರದ ಮುಖವಾಣಿ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ. 10 ಪ್ರಕರಣಗಳ ಪೈಕಿ 9 ಮಂದಿ ಹೊರ ದೇಶದಿಂದ ಚೀನಾದ ಶಿನ್ ಜಿಯಾಂಗ್‌ಗೆ ಬಂದವರು. ಇನ್ನುಳಿದ ಒಬ್ಬ ಸೋಂಕಿತೆ ಉರುಮ್ಕಿ ನಿವಾಸಿಯಾಗಿದ್ದಾರೆ. ಹೀಗೆ ಸ್ಥಳೀಯರಿಗೂ ಸೋಂಕು ಹಬ್ಬಿದ ಹಿನ್ನೆಲೆಯಲ್ಲಿ ಮತ್ತೆ ಚೀನಾದಲ್ಲಿ ಕೊರೊನಾ ಸಮೂಹಕ್ಕೆ ಹರಡುವ ಆತಂಕ ಎದುರಾಗಿದೆ.
         ಈ ಹಿನ್ನೆಲೆಯಲ್ಲಿ ತಕ್ಷಣ ಕಾರ್ಯಪ್ರವೃತ್ತವಾದ ಚೀನಾ ಸರ್ಕಾರ, ಉರುಮ್ಕಿಯಲ್ಲಿ ಸಾರಿಗೆ ವ್ಯವಸ್ಥೆಯನ್ನ ಸಂಪೂರ್ಣ ಬಂದ್ ಮಾಡಿದೆ. ಹಾಗೇ ಉರುಮ್ಕಿಗೆ ಬರುವ ಹಾಗೂ ಉರುಮ್ಕಿ ನಗರದಿಂದ ಹೊರ ಹೋಗುವ ಸುಮಾರು 600ಕ್ಕೂ ಹೆಚ್ಚು ವಿಮಾನಗಳ ಹಾರಾಟ ತಡೆಹಿಡಿಯಲಾಗಿದೆ. ಹಾಗೇ ಶಿನ್ ಜಿಯಾಂಗ್ ರಾಜಧಾನಿಯಲ್ಲಿ ಭಾಗಶಃ ಲಾಕ್‌ಡೌನ್ ಹೇರಲಾಗಿದ್ದು, ಮೆಟ್ರೋ ರೈಲು ವ್ಯವಸ್ಥೆಗೂ ಬ್ರೇಕ್ ಬಿದ್ದಿದೆ.
                         5 ತಿಂಗಳಲ್ಲಿ ಇದೇ ಮೊದಲ ಪ್ರಕರಣ..! :
         ಚೀನಾದಲ್ಲಿ ಕಳೆದ ಡಿಸೆಂಬರ್‌ನಲ್ಲಿ ಕೊರೊನಾ ವೈರಸ್ ಪತ್ತೆಯಾಗಿತ್ತು. ನಂತರ ಇಡೀ ವಿಶ್ವಕ್ಕೆ ಈ ಡೆಡ್ಲಿ ವೈರಸ್ ಹಬ್ಬಿದೆ. ಆದರೂ ಕೊರೊನಾ ಸೋಂಕು ಚೀನಾದಲ್ಲಿ ನಿಯಂತ್ರಣಕ್ಕೆ ಬಂದಿತ್ತು. ಈ ಹೊತ್ತಲ್ಲೇ ಮತ್ತೆ ವೈರಸ್ ಹರಡುತ್ತಿರೋದು ಆತಂಕ ಮೂಡಿಸಿದೆ. ಚೀನಾದ ಹುವಾನ್‌ನಲ್ಲಿ ಸೋಂಕು ಹರಡಿದ್ದರೂ ಇತರ ಪ್ರದೇಶಗಳಿಗೆ ಹಬ್ಬಿರಲಿಲ್ಲ.ಬೀಜಿಂಗ್‌ನಲ್ಲಿ ಕೆಲ ಕೇಸ್‌ಗಳೂ ವರದಿಯಾಗಿದ್ದನ್ನು ಬಿಟ್ಟರೆ ಶಿನ್ ಜಿಯಾಂಗ್ ಪ್ರಾಂತ್ಯ ಸೋಂಕಿನಿಂದ ಸಂಪೂರ್ಣ ಮುಕ್ತವಾಗಿತ್ತು. ಆದರೆ ಕಳೆದ 5 ತಿಂಗಳಲ್ಲೇ ಮೊದಲ ಬಾರಿಗೆ ಶಿನ್ ಜಿಯಾಂಗ್ ಪ್ರಾಂತ್ಯದಲ್ಲಿ ಕೊರೊನಾ ಪತ್ತೆಯಾಗಿರುವುದು ಚೀನಾ ಸರ್ಕಾರದ ಬೆವರಿಳಿಸಿದೆ.
                           ಆರ್ಥಿಕ ಸ್ಥಿತಿ ಸುಧಾರಿಸುವ ಹೊತ್ತಲ್ಲೇ ಆಘಾತ :
            ಕೊರೊನಾ ವೈರಸ್ ಹಬ್ಬಿದ ನಂತರ ಚೀನಾ ಆರ್ಥಿಕ ಸ್ಥಿತಿ ಜರ್ಜರಿತವಾಗಿತ್ತು. ಆದರೆ ಇದಾದ ಬಳಿಕ ಕೊರೊನಾ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದ ಚೀನಾ, ಮತ್ತೆ ಅಭಿವೃದ್ಧಿಯತ್ತ ಸಾಗುತ್ತಿದೆ. ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಹಳ್ಳ ಹಿಡಿದಿದ್ದ ಚೀನಾ ಜಿಡಿಪಿ, 2ನೇ ತ್ರೈಮಾಸಿಕದಲ್ಲಿ ಶೇಕಡ 3.2ರಷ್ಟು ಅಭಿವೃದ್ಧಿ ಸಾಧಿಸಿತ್ತು. ಆದರೆ ಮತ್ತೆ ಸೋಂಕು ಉಲ್ಬಣಿಸುತ್ತಿರುವುದು ಡ್ರ್ಯಾಗನ್ ನಾಡಿಗೆ ಮತ್ತೊಂದು ಕಂಟಕದ ಮುನ್ಸೂಚನೆ ನೀಡಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries