HEALTH TIPS

ರಾಜ್ಯದ ಎಲ್ಲಾ ಬ್ಯಾಂಕುಗಳಿಗೆ ಇನ್ನು ಶನಿವಾರ ರಜೆ; ಮುಂದಿನ ಸೂಚನೆ ಬರುವವರೆಗೂ ಪೂರ್ಣ ಪ್ರಮಾಣದ ಪಾಲನೆಗೆ ಸರ್ಕಾರ ಸೂಚನೆ

     
         ತಿರುವನಂತಪುರ: ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳ ಹಿನ್ನೆಲೆಯಲ್ಲಿ, ರಾಜ್ಯದ ಎಲ್ಲಾ ಬ್ಯಾಂಕುಗಳಿಗೆ ಇಂದಿನಿಂದಲೇ ಜಾರಿಗೊಳ್ಳುವಂತೆ ಪ್ರತಿ ಶನಿವಾರ ರಜೆ ಇರಲಿದೆ. ಪ್ರಸ್ತುತ ಎರಡನೇ ಶನಿವಾರ ಮತ್ತು ನಾಲ್ಕನೇ ಶನಿವಾರದ ರಜಾದಿನಗಳಿಗೆ ಹೆಚ್ಚುವರಿಯಾಗಿರುತ್ತದೆ ಎಂದು ರಾಜ್ಯ ಸರ್ಕಾರ ಶುಕ್ರವಾರ ಹೊರಡಿಸಿದ ತುರ್ತು ಆದೇಶದಲ್ಲಿ ತಿಳಿಸಿದೆ.
      ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹೊರಡಿಸಿದ ಆದೇಶದಲ್ಲಿ, ಕೆಲಸದ ಸಮಯದಲ್ಲಿ ಆರೋಗ್ಯ ಮತ್ತು ಸಾಮಾಜಿಕ ಅಂತರ ಮಾರ್ಗಸೂಚಿಗಳ ಅನುಸರಣೆ ಖಚಿತಪಡಿಸಿಕೊಳ್ಳಲು ಬ್ಯಾಂಕ್ ವ್ಯವಸ್ಥಾಪಕರು ಕಾಳಜಿ ವಹಿಸಬೇಕು ಎಂದು ಹೇಳಲ್ಪಟ್ಟಿದೆ.
         ಕೋವಿಡ್ ಗೆ ಎದುರಾಗಿ ರಕ್ಷಣೆಯನ್ನು ಬಲಪಡಿಸುವ ಚಾಲನೆಯ ಭಾಗವಾಗಿ ರಾಜ್ಯದ ಬ್ಯಾಂಕುಗಳು ಶನಿವಾರದಂದು ಮುಚ್ಚಲ್ಪಡಲಿವೆ. ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಹಿನ್ನೆಲೆಯಲ್ಲಿ ಬ್ಯಾಂಕ್ ಎಂಪ್ಲಾಯೀಸ್ ಫೆಡರೇಶನ್ ಆಫ್ ಇಂಡಿಯಾ (ಬಿಇಎಫ್‍ಐ) ಗುರುವಾರ ಸರ್ಕಾರದೊಂದಿಗೆ ಶನಿವಾರ ಒಂದು ದಿನದ ರಜೆಯ ಬಗ್ಗೆ ಪ್ರಸ್ತಾವಿಸಿತ್ತು.
        ವರದಿಗಳ ಪ್ರಕಾರ, ಮುಂದಿನ ಸೂಚನೆ ಬರುವವರೆಗೆ ಶನಿವಾರದಂದು ಬ್ಯಾಂಕ್ ತೆರೆದಿರುವುದಿಲ್ಲ. ಏತನ್ಮಧ್ಯೆ, ಕೋವಿದ್ ವಯನಾಡು ಜಿಲ್ಲೆಯ ಪುಲ್ಪಲ್ಲಿಯಲ್ಲಿರುವ ಸಾರ್ವಜನಿಕ ವಲಯದ ಬ್ಯಾಂಕಿನ ವ್ಯವಸ್ಥಾಪಕರೋರ್ವರಿಗೆ ಶುಕ್ರವಾರ ಸೋಂಕು ದೃಢಪಟ್ಟಿದೆ.
    ಏತನ್ಮಧ್ಯೆ, ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ. 791 ಜನರಿಗೆ ನಿನ್ನೆ ಕೋವಿಡ್ -19 ದೃಢಪಟ್ಟಿದೆ. ಸಂಪರ್ಕದ ಮೂಲಕ 532 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. 133 ಜನರು ಸೋಂಕಿನಿಂದ ಮುಕ್ತರಾದರು. ಅಲ್ಲದೆ ಶುಕ್ರವಾರ  ದೃಢಪಡಿಸಲಾದ ಸೋಂಕಿನ ಪೈಕಿ 42 ಪ್ರಕರಣಗಳ ಮೂಲ ಸ್ಪಷ್ಟವಾಗಿಲ್ಲ. ಸಂಪರ್ಕದ ಮೂಲಕ 532 ಜನರು ಕೋವಿಡ್ ಸೋಂಕಿಗೆ ಒಳಗಾಗಿದ್ದು ರಾಜ್ಯ ತಲ್ಲಣಗೊಂಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries