HEALTH TIPS

ಕರ್ನಾಟಕ ಎಂಟ್ರೆನ್ಸ್ ಪರೀಕ್ಷೆ : ವಿದ್ಯಾರ್ಥಿಗಳಿಗೆ ಖಾಸಗಿ ವಾಹನಗಳಲ್ಲಿ ಹಾಗು ಪ್ರಮುಖ ಅಂತಾರಾಜ್ಯ ರಸ್ತೆಗಳಲ್ಲಿ ಪ್ರಯಾಣ ಅನುಮತಿ ನೀಡಬೇಕು : ಬಿಜೆಪಿ

   
       ಕಾಸರಗೋಡು: ಎಂಟ್ರೆನ್ಸ್ ಪರೀಕ್ಷೆಗಾಗಿ ಕರ್ನಾಟಕದ ಮಂಗಳೂರು, ಪುತ್ತೂರು, ಸುಳ್ಯ ಮೊದಲಾದ ಕೇಂದ್ರಗಳಿಗೆ ಖಾಸಗಿ ವಾಹನಗಳಲ್ಲೂ, ಪ್ರಮುಖ ಅಂತಾರಾಜ್ಯ ರಸ್ತೆಗಳಲ್ಲಿ ಸಾಗಲು ಅನುಮತಿ ನೀಡಬೇಕೆಂದು ಬಿಜೆಪಿ ಜಿಲ್ಲಾ ಸಮಿತಿ ಕೇರಳ ಸರಕಾರವನ್ನು ಆಗ್ರಹಿಸಿದೆ.
      ಪ್ರಸ್ತುತ ಅಧಿಕೃತರು ಏರ್ಪಾಡುಗೊಳಿಸಿದ ಪ್ರಯಾಣ ಸೌಕರ್ಯ ಸೂಕ್ತವಾದುದಲ್ಲವೆಂದು ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ಸಭೆಯಲ್ಲಿ ಆರೋಪಿಸಿದೆ. 
ಕೆಎಸ್‍ಆರ್‍ಟಿಸಿ ಬಸ್‍ಗಳಲ್ಲಿ ವಿದ್ಯಾರ್ಥಿಗಳನ್ನು ತಲಪ್ಪಾಡಿಗೆ ತಲುಪಿಸಿ ಕರ್ನಾಟಕದ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಕೊಂಡೊಯ್ಯಲು ಇದೀಗ ತೀರ್ಮಾನಿಸಲಾಗಿದೆ. ಸುಳ್ಯ, ಪುತ್ತೂರಿಗೆ ಪರೀಕ್ಷೆ ಬರೆಯಲು ಹೋಗುವವರೂ ತಲಪ್ಪಾಡಿಗೆ ಹೋಗಬೇಕಾಗಿರುವುದರಿಂದ ಬಹಳಷ್ಟು ಸಮಸ್ಯೆಗೆ ಕಾರಣವಾಗಲಿದೆ.
       ಸುಳ್ಯ ಮತ್ತು ಪುತ್ತೂರಿಗೆ ಹತ್ತಿರದ ಅಂತಾರಾಜ್ಯ ರಸ್ತೆಯಲ್ಲಿ ಕೆಎಸ್‍ಆರ್‍ಟಿಸಿ ಪ್ರಯಾಣ ಸೌಕರ್ಯ ಸಜ್ಜುಗೊಳಿಸಿದರೆ ತಲಪಾಡಿಯಲ್ಲಿ ಗುಂಪು ಸೇರುವುದನ್ನು ತಡೆಯಬಹುದು ಅಲ್ಲದೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಸೌಕರ್ಯ ಕಲ್ಪಿಸಲು ಸಾಧ್ಯವಾಗುವುದು ಎಂದು ಸಭೆಯಲ್ಲಿ ಅಭಿಪ್ರಾಯಪಟ್ಟಿತು. ಖಾಸಗಿ ವಾಹನಗಳಲ್ಲಿ ತೆರಳಲು ಹೇರಿರುವ ನಿಷೇಧವನ್ನು ಹಿಂತೆಗೆದುಕೊಳ್ಳಬೇಕೆಂದು ಬಿಜೆಪಿ ಜಿಲ್ಲಾ ಸಮಿತಿ ಆಗ್ರಹಿಸಿದೆ.
     ಕೋವಿಡ್ ಹಿನ್ನೆಲೆಯಲ್ಲಿ ಕರ್ನಾಟಕದಿಂದ ತರಕಾರಿ ಸಾಗಾಟ ನಿಷೇಧಿಸಿರುವುದರಿಂದ ಜಿಲ್ಲೆಯಲ್ಲಿ ತರಕಾರಿ ಕ್ಷಾಮ ತಲೆದೋರಿದೆ ಅಲ್ಲದೆ ತರಕಾರಿ ದರ ಗಗನಕ್ಕೇರುತ್ತಿದೆ. ಕಂದಾಯ ಮತ್ತು ಪೆÇಲೀಸರಿಗೆ ಲಂಚ ನೀಡಿ ಅಡ್ಡ ದಾರಿಯಲ್ಲಿ ತರಕಾರಿ ಜಿಲ್ಲೆಗೆ ಬರುತ್ತಿರುವುದರಿಂದ ಸಮಸ್ಯೆ ಬಿಗಡಾಯಿಸಲಿದೆ. ನಿಷೇಧ ಬದಲಾಗಿ ನಿಯಂತ್ರಣದ ಮೂಲಕ ತರಕಾರಿ ಕ್ಷಾಮ ತಡೆಯಬೇಕೆಂದು ಬಿಜೆಪಿ ಜಿಲ್ಲಾ ಆಡಳಿತಾ„ಕಾರಿಗಳನ್ನು ಒತ್ತಾಯಿಸಿದೆ.
      ಸಭೆಯನ್ನು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಜಾರ್ಜ್ ಕುರ್ಯನ್ ಉದ್ಘಾಟಿಸಿದರು. ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಅಧ್ಯಕ್ಷತೆ ವಹಿಸಿದರು. ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಎಂ.ಗಣೇಶ್, ರಾಜ್ಯ ಕಾರ್ಯದರ್ಶಿ ಪಿ.ರಘುನಾಥ್, ರಾಷ್ಟ್ರೀಯ ಸಮಿತಿ ಸದಸ್ಯೆ ಪ್ರಮೀಳಾ ಸಿ.ನಾೈಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ವೇಲಾಯುಧನ್ ಮೊದಲಾದ ವರು ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಧಾಮ ಗೋಸಾಡ ಸ್ವಾಗತಿಸಿದರು. ಕಾರ್ಯದರ್ಶಿ ವಿಜಯ ಕುಮಾರ್ ರೈ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries