HEALTH TIPS

ಈ ವರ್ಷ ಅಮರನಾಥ ಯಾತ್ರೆ ರದ್ದು: ಅಮರನಾಥ್ ದೇವಾಲಯ ಮಂಡಳಿ ಆದೇಶ


       ಜಮ್ಮು  : ಪ್ರಸಕ್ತ ಸನ್ನಿವೇಶವನ್ನು ಹಿನ್ನೆಲೆಯಾಗಿಟ್ಟುಕೊಂಡು ,  ಅಮರನಾಥಜಿ ದೇವಾಲಯ ಮಂಡಳಿಯು ಈ ವರ್ಷದ  ಅಮರನಾಥ  ಯಾತ್ರೆಯನ್ನುರದ್ದುಗೊಳಿಸಿದೆ. ಈ ಹಿನ್ನೆಲೆಯಲ್ಲಿ 2020 ರ ಅಮರನಾಥ ಯಾತ್ರೆಯನ್ನು ರದ್ದುಗೊಳಿಸಿ ಮಂಡಳಿ ಆದೇಶ ಹೊರಡಿಸಿದೆ. ಯಾತ್ರೆ  ರದ್ದತಿಯನ್ನು ಘೋಷಿಸಲು ಮಂಡಳಿ  ವಿಷಾದ ವ್ಯಕ್ತಪಡಿಸಿದೆ ಎಂದು ಜಮ್ಮು ಮತ್ತು ಕಾಶ್ಮೀರ ಸರ್ಕಾರದ ರಾಜಭವನ ಹೇಳಿದೆ.
      ಧಾರ್ಮಿಕ ಭಾವನೆಗಳ ಘಾಸಿಯಾಗದಂತೆ ಮಂಡಳಿ ಬೆಳಿಗ್ಗೆ ಮತ್ತು ಸಂಜೆ ಆರತಿಯ ನೇರ ಪ್ರಸಾರ / ವರ್ಚುವಲ್ ದರ್ಶನವನ್ನು ಮುಂದುವರಿಸಲಿದೆ ಎಂದು ಅದು ಹೇಳಿದೆ. ಈ ಹಿಂದೆ ನಡೆಸಿದ್ದಂತೆಯೇ ಸಾಂಪ್ರದಾಯಿಕ ಆಚರಣೆಗಳನ್ನು ಕೈಗೊಳ್ಳಲಾಗುತ್ತದೆ.  ಖಾದಿ ಮುಬಾರಕ್ ಅವರಿಗೆ ಸರ್ಕಾರದಿಂದ ಅನುಕೂಲವಾಗಲಿದೆ ಎಂದು ರಾಜಭವನ ಹೇಳಿದೆ.
      ಜುಲೈ 21 ರಂದು ಅಮರನಾಥ ಯಾತ್ರೆ ಆರಂಭವಾಗಲಿದೆ ಎಂದು ಕಳೆದ ತಿಂಗಳು ಹೇಳಲಾಗಿತ್ತು. ಅಲ್ಲದೆ ಈ ಬಾರಿ ಕೇವಲ ಹದಿನೈದು ದಿನ ಮಾತ್ರ ಯಾತ್ರೆ ನಡೆಯಲಿದೆ ಎನ್ನಲಾಗಿತ್ತು, ಆದರೆ ಇದೀಗ ಯಾತ್ರೆ ರದ್ದಾಗಿದ್ದು ಭಕ್ತರು ಮನದಲ್ಲೇ ಅಮರನಾಥನನ್ನು ಸ್ಮರಿಸಬೇಕಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries