HEALTH TIPS

ಭಾರತದ ಮೊದಲ ಕೊವಿಡ್ ಲಸಿಕೆ 'ಕೋವ್ಯಾಕ್ಸಿನ್': ಮಾನವನ ಮೇಲೆ ಪ್ರಯೋಗ ಆರಂಭ

       ನವದೆಹಲಿ: ಮಾನವನ ಮೇಲೆ ಭಾರತದ ಮೊದಲ ಕೊವಿಡ್ ಲಸಿಕೆ 'ಕೋವ್ಯಾಕ್ಸಿನ್' ಪ್ರಯೋಗವನ್ನು ಆರಂಭಿಸಲಾಗಿದೆ.
       ಪಾಟ್ನಾದ ಏಮ್ಸ್ ಆಸ್ಪತ್ರೆಯಲ್ಲಿ ಪ್ರಯೋಗ ಆರಂಭಿಸಲಾಗಿದೆ. ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಹಭಾಗಿತ್ವದಲ್ಲಿ ಕೋವ್ಯಾಕ್ಸಿನ್ ತಯಾರಿಸಲಾಗಿದೆ.
      ಆಸ್ಪತ್ರೆಯ ಆಡಳಿತ ಮಂಡಳಿಯು ಹತ್ತು ಮಂದಿಯನ್ನು ಮೊದಲ ಟ್ರಯಲ್‌ಗೆ ಆಯ್ಕೆ ಮಾಡಿದ್ದಾರೆ, ಅವರ ಮೇಲೆ ಪ್ರಯೋಗ ನಡೆಯಲಿದೆ. ಮೊದಲು ಹತ್ತು ಮಂದಿಗೆ ಲಸಿಕೆ ನೀಡಲಾಗುತ್ತಿದ್ದು, 14 ದಿನಗಳ ಬಳಿಕ ಎರಡನೇ ಡೋಸ್ ನೀಡಲಾಗುತ್ತದೆ.ಲಸಿಕೆ ತೆಗೆದುಕೊಂಡ ಬಳಿಕ ರೋಗಿಗಳು ತಪಾಸಣೆ ಮಾಡಿಸಬೇಕು, 22-50 ವರ್ಷದೊಳಗಿನ ಹತ್ತು ಮಂದಿಯ ಮೇಲೆ ಲಸಿಕೆ ಪ್ರಯೋಗಿಸಲಾಗುತ್ತಿದೆ. ದೇಶದಲ್ಲಿ ಕೊರೊನಾ ಸೋಂಕು ಪ್ರಕರಣಗಳು ತಗ್ಗಲು ಇನ್ನೂ ಸುಮಾರು 3,4 ತಿಂಗಳ ಸಮಯ ಬೇಕಾಗಬಹುದು ಎಂದು ಅವರ ಅಂದಾಜಿಸಿದ್ದಾರೆ. ಎಲ್ಲರಿಗೂ ವ್ಯಾಕ್ಸಿನ್ ಪೂರೈಸಿದ ನಂತರ ವೈರಸ್ ತಗ್ಗಲಿದೆ. ಆಗ ಮಾತ್ರ ಪರಿಸ್ಥಿತಿ ಸಹಜಗೊಳ್ಳಲು ಅವಕಾಶವಾಗುತ್ತದೆ ಎಂದು ಗುಲೇರಿಯಾ ತಿಳಿಸಿದ್ದಾರೆ.ಭಾರತದಲ್ಲಿ ಬಹಳಷ್ಟು ಕಂಪನಿಗಳು ವ್ಯಾಕ್ಸಿನ್ ಅಭಿವೃದ್ದಿ ಪಡಿಸಲು ನಿರಂತರವಾಗಿ ಶ್ರಮಿಸುತ್ತಿವೆ. ಈ ಪೈಕಿ ಭಾರತ್ ಬಯೋಟೆಕ್ ಜೊತೆಗೆ ಸೀರಂ ಇನಿಸ್ಟಿಟ್ಯೂಟ್, ಕ್ಯಾಡಿಲಾ ದಂತಹ ಸಂಸ್ಥೆಗಳು ಪ್ರಯತ್ನ ನಡೆಸುತ್ತಿವೆ. ಲಕ್ಷಾಂತರ ಮಂದಿ ವ್ಯಾಕ್ಸಿನ್ ಬಳಸುವ ಸಾಧ್ಯತೆಯ ಹಿನ್ನಲೆಯಲ್ಲಿ ಪ್ರತಿಕೂಲ ಪರಿಣಾಮ ಇಲ್ಲ ಎಂಬುದನ್ನು ಖಾತರಿ ಪಡಿಸಿಕೊಂಡ ನಂತರವೇ ಲಸಿಕೆ ಬಿಡುಗಡೆ ಮಾಡಬೇಕು. ಜೊತೆಗೆ ರೋಗ ನಿರೋಧ ಶಕ್ತಿ ಹೆಚ್ಚಿಸಲಿದೆಯೇ ಇಲ್ಲವೊ ಎಂಬುದನ್ನು ಖಾತರಿಪಡಿಸಕೊಳ್ಳಬೇಕು ಎಂದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries