ತಿರುವನಂತಪುರ: ನಾಪತ್ತೆಯಾಗಿದ್ದ ಯುಎಇ ಕಾನ್ಸುಲೇಟ್ ಜನರಲ್ ರ ಅಂಗರಕ್ಷಕ ಜೈ ಘೋಷ್ ಪತ್ತೆಯಾಗಿದ್ದಾರೆ. ಕೈ ಗಾಯಗೊಂಡ ಜೈಘೋಷ್ ಮನೆ ಪರಿಸರದಲ್ಲಿ ಶುಕ್ರವಾರ ಪತ್ತೆಯಾಗಿದ್ದಾರೆ. ಜೈ ಘೋಷ್ ಅವರನ್ನು ರಸ್ತೆಬದಿಯಲ್ಲಿ ಬೈಕ್‍ನಲ್ಲಿ ಸ್ಥಳೀಯರು ಪತ್ತೆ ಮಾಡಿದ್ದಾರೆ. ಇದರ ಬೆನ್ನಲ್ಲೇ ಜೈ ಘೋಷ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಗುರುವಾರ ಸಂಜೆಯಿಂದ ಅವರು ನಾಪತ್ತೆಯಾಗಿದ್ದರು.
ಆಸ್ಪತ್ರೆಗೆ ಕರೆದೊಯ್ಯುವಾಗ ಜೈಗೋಷ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ ತಾನು ಯಾವುದೇ ತಪ್ಪು ಮಾಡಿಲ್ಲ ಮತ್ತು ಚಿನ್ನದ ಕಳ್ಳಸಾಗಣಿಕೆಯಲ್ಲಿ ಭಾಗಿಯಾಗಿಲ್ಲ ಎಂದು ಹೇಳಿರುವರು. ಜೈ ಘೋಷ್ ಅವರ ಮನೆಯ ಸಮೀಪವಿರುವ ಕಾಡಿನಲ್ಲಿ ಪತ್ತೆಯಾದರು. ಗುರುವಾರ ಈ ಪ್ರದೇಶವನ್ನು ಹುಡುಕಲಾಗಿರಲಿಲ್ಲ.
ಜೈ ಘೋಷ್ ಎಆರ್ ಶಿಬಿರದಲ್ಲಿ ಪೆÇಲೀಸ್ ಅಧಿಕಾರಿಯಾಗಿದ್ದು ಅವರು ಕರಿಮನಾಲ್ ಮೂಲದವರು. ವತ್ತಿಯೂರ್ಕದಲ್ಲಿ ಪತ್ನಿ ಮತ್ತು ಮಕ್ಕಳೊಂದಿಗೆ ತಂಗಿದ್ದ ಜೈ ಘೋಷ್ ಗುರುವಾರ ಸಂಜೆ ಕುಟುಂಬವನ್ನು ಕರಿಮನಾಲ್‍ನಲ್ಲಿರುವ ತಮ್ಮ ಮನೆಗೆ ಸ್ಥಳಾಂತರಿಸಿದ್ದರು. ಅವರು ಪರವಾನಿಗೆ ಇರುವ ಪಿಸ್ತೂಲ್ ನ್ನು ವತ್ತಿಯೂರ್ಕಾವ್ ಪೆÇಲೀಸರಿಗೆ ಹಸ್ತಾಂತರಿಸಿದ್ದರು.
ಅಕ್ರಮ ಚಿನ್ನ ವಶಪಡಿಸಿಕೊಂಡ ದಿನವೂ ಸಹಿತ ಸ್ವಪ್ನಾ ಜೈ ಘೋಷ್ ಗೆ ಪೋನ್ ಕರೆ ಮಾಡಿದ್ದರೆಂದು ಫೆÇೀನ್ ದಾಖಲೆಗಳು ಬಹಿರಂಗಪಡಿಸಿವೆ. ಅವರ ಮೊಬೈಲ್ ಫೆÇೀನ್ ಸ್ವಿಚ್ ಆಫ್ ಆಗಿತ್ತು. ಜೈ ಘೋಷ್ ತನಗೆ ಬೆದರಿಕೆ ಇದೆ ಎಂದು ಹೇಳಿದ್ದಾನೆ. ಕೆಲವರು ತನ್ನನ್ನು ಬಲೆಗೆ ಬೀಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಸಂಬಂಧಿಕರಿಗೆ ತಿಳಿಸಿರುವುದಾಗಿ ತಿಳಿದುಬಂದಿದೆ. ಗುರುವಾರ ಸಂಜೆ ಜೈ ಘೋಷ್ ಅವರಿಗೆ ಫೆÇೀನ್ ಕರೆಯೊಂದು ಬಂದಿದ್ದು ಕರೆ ಸ್ವೀಕರಿಸಿ ಮನೆಯಿಂದ ಹೊರತೆರಳಿದ್ದ ಬಳಿಕ ನಾಪತ್ತೆಯಾಗಿದ್ದರು ಎಂದು ಸಂಬಂಧಿಕರು ತಿಳಿಸಿದ್ದಾರೆ.