ಕಾಸರಗೋಡು: ಮಾಸ್ಟರ್ ಯೋಜನೆಯ ಅಂಗವಾಗಿ ಆಯ್ದ ಪ್ರಾಥಮಿಕ ಮಟ್ಟದಿಂದ ಕಾಲೇಜು ಮಟ್ಟದ ವರೆಗಿನ ಶಿಕ್ಷಕರು(ಸರಕಾರಿ/ಅನುದಾನಿತ) "ಬ್ರೇಕ್ ದಿ ಚೈನ್" ಜನಜಾಗೃತಿ ಕಾರ್ಯಕ್ರಮಗಳಿಗೆ ಆಯಾ ಪ್ರದೇಶಗಳಲ್ಲಿ ನೇತೃತ್ವ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ಈ ಆದೇಶ ಉಲ್ಲಂಘಿಸುವವರ ಬಗ್ಗೆ 8590684023 ಎಂಬ ವಾಟ್ಸ್ ಆಪ್ ನಂಬ್ರಕ್ಕೆ ಸಂಬಂಧಪಟ್ಟ ಪಂಚಾಯತ್/ ನಗರಸಭೆ ಕಾರ್ಯದರ್ಶಿಗಳು, ಹೆಡ್ ಮಾಸ್ಟರ್/ ಪ್ರಾಂಶುಪಾಲರು ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿರುವರು.


