ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಮತ್ತು ಕಾಸರಗೋಡು-ಕಾಞಂಗಾಡ್ ಕೆ.ಎಸ್.ಟಿ.ಪಿ. ರಸ್ತೆ ಬದಿಯ ಹೋಟೆಲ್ ಗಳು, ಗೂಡಂಗಡಿಗಳು ಇತ್ಯಾದಿ ಬೆಳಗ್ಗೆ 8 ರಿಂದ ರಾತ್ರಿ 9 ಗಂಟೆ ವರೆಗೆ ಮಾತ್ರ ತೆರೆದು ಕಾರ್ಯಾಚರಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ಇಲ್ಲಿ ಕುಳಿತು ಸೇವಿಸಲು ಅನುಮತಿಯಿಲ್ಲ. ಪಾರ್ಸೆಲ್ ಮೂಲಕ ಮಾತ್ರ ಆಹಾರ ವಿತರಣೆ ನಡೆಸಬಹುದು. ಇತರ ಅಂಗಡಿಗಳು ಬೆಳಗ್ಗೆ 8 ರಿಂದ ಸಂಜೆ 6 ಗಂಟೆ ವರೆಗೆ ಮಾತ್ರ ಚಟುವಟಿಕೆ ನಡೆಸಲು ಅನುಮತಿಯಿದೆ. ರಸ್ತೆ ಬದಿಗಳ ಹೋಟೆಲ್, ಗೂಡಂಗಡಿ, ಬೇಕರಿ ಇತ್ಯಾದಿಗಳೂ ಈ ಆದೇಶ ಅನ್ವಯವಾಗಿದೆ.
ಬ್ಯಾಂಕ್ ಸಿಬ್ಬಂದಿಗೆ ನಿಬಂಧನೆಗಳ ಅನ್ವಯವಾಗಿ ತೆರಳು ಅನುಮತಿ:
ಕಾಸರಗೋಡಿನಿಂದ ದಿನನಿತ್ಯ ಕರ್ನಾಟಕಕ್ಕೆ ಬ್ಯಾಂಕ್ ನೌಕರಿ ಸಂಬಂಧ ತೆರಳುವವರಿಗೆ ನಿಬಂಧನೆ ಅನ್ವಯ ಅನುಮತಿ ನೀಡಲಾಗುವುದು.
ಖಾಸಗಿ ವಾಹನಗಳಲ್ಲಿ ಮಾತ್ರ ಈ ವಿಭಾಗದ ಮಂದಿ ತೆರಳಬಹುದಾಗಿದೆ. ಈ ವಾಹನಗಳಲ್ಲಿ ಸಂಚರಿಸುವವರ ಇತ್ಯಾದಿ ಮಾಹಿತಿಗಳನ್ನು ಚೆಕ್ ಪೆÇೀಸ್ಟ್ ಮತ್ತು ಜಿಲ್ಲಾಡಳಿತೆಗೆ ಸಲ್ಲಿಸಬೇಕು. ಉವರು ಸಾರ್ವಜನಿಕರೊಂದಿಗೆ ಯಾವುದೇ ಸಂಪರ್ಕ ಇರಿಸಿಕೊಳ್ಳುನ ಉದ್ಯೋಗದಲ್ಲಿ ಇಲ್ಲ ಎಂದು ಸತ್ಯವಾuಟಿಜeಜಿiಟಿeಜ್ಮಲ ಮತ್ತು ಗುರುತು ಚೀಟಿ ಕೋವಿಡ್ 19 ಜಾಗ್ರತಾ ಪೆÇೀರ್ಟಲ್ ನಲ್ಲಿ ಅಪೆÇ್ಲೀಡ್ ನಡೆಸಬೇಕು.
ಕರ್ನಾಟಕದಿಂದ ಕಾಸರಗೋಡಿಗೆ ಆಗಮಿಸಿ ನೌಕರಿ ನಡೆಸುವ ಬ್ಯಾಂಕ್ ಸಿಬ್ಬಂದಿ ಜಿಲ್ಲೆಗೆ ಆಗಮಿಸಿ 7 ದಿನ ಕ್ವಾರೆಂಟೈನ್ ನಲ್ಲಿ ದಾಖಲಾಗಬೇಕು. 5 ನೇ ದಿನ ಇವರು ಆಂಟಿಜೆನ್ ತಪಾಸಣೆಗೆ ಒಳಗಾಗಬೇಕು. ಫಲಿತಾಂಶ ನೆಗೆಟಿವ್ ಆಗಿದ್ದಲ್ಲಿ ನೌಕರಿಗೆ ತೆರಳಬೇಕು. ತಾವ ಸಾರ್ವಜನಿಕರೊಂದಿಗೆ ನೇರವಾಗಿ ಸಂಪರ್ಕ ನಡೆಸುವ ಉದ್ಯೋಗ ನಡೆಸುವುದಿಲ್ಲ ಎಂದು ಸತ್ಯವಾuಟಿಜeಜಿiಟಿeಜ್ಮಲ, ಗುರುತುಚೀಟಿ ಕೋವಿಡ್ 19 ಜಾಗ್ರತಾ ಪೆÇೀರ್ಟಲ್ ನಲ್ಲಿ ಅಪ್ ಲೋಡ್ ನಡೆಸಬೇಕು. ಕರ್ನಾಟಕದಿಂದ ಕಾಸರಗೋಡಿಗೆ ಆಗಮಿಸುವ ಡಾಕ್ಟರ್ ಗಳಿಗೂ ಈ ಆದೇಶ ಅನ್ವಯವಾಗಿದೆ.


