HEALTH TIPS

ಕರ್ನಾಟಕ ಮೆಡಿಕಲ್ ಪ್ರವೇಶಾತಿ ಪರೀಕ್ಷೆ: ಪರೀಕ್ಷೆಗೆ ಹಾಜರಾಗುವವರಿಗೆ ಪ್ರತ್ಯೇಕ ವ್ಯವಸ್ಥೆಗಳು ಜಿಲ್ಲಾಡಳಿತದಿಂದ


             ಕಾಸರಗೋಡು:  ಜು.30,31 ರಂದು ನಡೆಯಲಿರುವ ಕರ್ನಾಟಕ ಮೆಡಿಕಲ್ ಪ್ರವೇಶಾತಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಕಾಸರಗೋಡು ಜಿಲ್ಲೆಯ ವಿವಿಧೆಡೆಗಳಿಂದ ತಲಪ್ಪಾಡಿ ವರೆಗೆ ತೆರಳಲು ಪ್ರತ್ಯೇಕ ಕೆ.ಎಸ್.ಆರ್.ಟಿ.ಸಿ. ಬಸ್ ಮಂಜೂರು ಮಾಡಲಾಗುವುದು. ಅಲ್ಲಿಂದ ಕರ್ನಾಟಕ ಸರಕಾರ ಸಜ್ಜುಗೊಳಿಸುವ ವಾಹನಗಳಲ್ಲಿ ಪರೀಕ್ಷಾ ಕೇಂದ್ರಗಳಿಗೆ ತೆರಳಬಹುದಾಗಿದೆ ಎಂದು ಜಿಲ್ಲಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.
          ಇವರು ಬೇರೆ ಸಾರ್ವಜನಿಕ ಸಂಚಾರ ವ್ಯವಸ್ಥೆಗಳನ್ನು ಬಳಸಕೂಡದು. ಪರೀಕ್ಷೆ ಮುಗಿಸಿ ಮರಳಿದ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬದ ಸದಸ್ಯರು 7 ದಿನಗಳ ಕಾಲ ರೂಂ ಕ್ವಾರೆಂಟೈನ್ ನಲ್ಲಿರಬೇಕು. ಇವರು 5ನೇ ದಿನ ಆಂಟಿಜೆನ್ ತಪಾಸಣೆಗೆ ಒಳಗಾಗಬೇಕು ಎಂದವರು ತಿಳಿಸಿರುವರು.
       ಈ ಬಗ್ಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೂ ಬುಧವಾರದ ದೈನಂದಿನ ಕೋವಿಡ್ ಸಂಬಂಧಿ ಸುದ್ದಿಗೋಷ್ಠಿಯಲ್ಲೂ ವಿಷಯ ಪ್ರಸ್ತಾವನೆ ನಡೆಸಿ ಗಡಿ ಭಾಗಗಳ ಸಹಿತ ರಾಜ್ಯದಿಂದ ಕರ್ನಾಟಕಕ್ಕೆ ಪ್ರವೇಶ ಪರೀಕ್ಷೆಗೆ ತೆರಳುವಲ್ಲಿ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಸಮಗ್ರ ಮಾಹಿತಿ ನೀಡಿರುವರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries