HEALTH TIPS

ಬದಿಯಡ್ಕ ಅಲ್ಲ-ನೀರ್ಚಾಲು ಪೇಟೆ ಕಂಟೈ ನ್ಮೆಂಟ್ ಝೋನ್ : ಜಿಲ್ಲಾಧಿಕಾರಿ ಘೋಷಣೆ


                       
            ಕಾಸರಗೋಡು:  ನೀರ್ಚಾಲು ಪೇಟೆಯನ್ನು ಕಂಟೈ ನ್ಮೆಂಟ್ ಝೋನ್ ಆಗಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಘೋಷಿಸಿದರು.
            ಇಲ್ಲಿ ಅನಿವಾರ್ಯ ಸಾಮಾಗ್ರಿಗಳ ಅಂಗಡಿಗಳು ಮಾತ್ರ ದಿನಬಿಟ್ಟು ದಿನ ಬೆಳಗ್ಗೆ 11 ರಿಂದ ಸಂಜೆ 5 ಗಂಟೆ ವರೆಗೆ ತೆರೆದು ಕಾರ್ಯಾಚರಿಸಬಹುದಾಗಿದೆ. ಬಸ್ ನಿಲ್ಲಿಸಿ ಪ್ರಯಣಿಕರನ್ನು ಇಳಿಸುವ, ಏರಿಸುವ ಪ್ರಕ್ರಿಯೆ ನಡೆಸಕೂಡದು. 7 ದಿನಗಳ ವರೆಗೆ ಈ ಕಟ್ಟುನಿಟ್ಟು ಇರುವುದು ಎಂದು ಅವರು ತಿಳಿಸಿದರು.
               ಕಂಟೈನ್ಮೆಂಟ್ ಝೋನ್ ಘೋಷಣೆಯಿಂದ ಬದಿಯಡ್ಕ ಪೇಟೆ ಹೊರತು: ಜಿಲ್ಲಾಧಿಕಾರಿ:
      ಬದಿಯಡ್ಕ ಪೇಟೆಯನ್ನು ಕಂಟೈನ್ಮೆಂಟ್ ಝೋನ್ ಘೋಷಣೆಯಿಂದ ಹೊರತುಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
           ಕೋವಿಡ್ 19 ಸೋಂಕು ಖಚಿತಗೊಂಡಿರುವ ತಲೆಹೊರೆಕಾರ್ಮಿಕ ಬದಿಯಡ್ಕದಲ್ಲಿ ಸಂಪರ್ಕಕ್ಕೆ ಬಂದಿರಲಿಲ್ಲ ಎಂಬ ವಿಸ್ತೃ ತ ತನಿಖೆಯಿಂದ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
        ಬದಿಯಡ್ಕ ಬಳಿಯ ನೀರ್ಚಾಲು ಪೇಟೆಯಲ್ಲಿ ಮಾತ್ರ ಕಂಟೈ ನ್ಮೆಂಟ್ ಝೋನ್ ಘೋಷಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿರುವರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries