ತಮಿಳುನಾಡು: ದಟ್ಟವಾದ ಕಾಡು, ಆ ಕಾಡಿನಲ್ಲಿ ಕಾಡುಮೃಗಗಳು ಎಲ್ಲಿಂದ ಹೇಗೆ ಬರುತ್ತವೆ ಎಂಬುದು ತಿಳಿಯುವುದಿಲ್ಲ. ಒಂದು ವೇಳೆ ಮನುಷ್ಯ ಕಣ್ಮರೆಯಾಗಿ ಒಮ್ಮೆ ಕಾಡಿಗೆ ಹೋದರೆ ವಾಪಾಸು ಬರುತ್ತಾನೋ ಇಲ್ಲವೋ ಎಂದು ತಿಳಿಯದಂತಹ ದಟ್ಟವಾದ ಕಾಡು.
ಇಂತಹ ದಟ್ಟಡವಿಯಲ್ಲಿ ಒಬ್ಬ ಪೋಸ್ಟ್‌ಮ್ಯಾನ್ 30 ವರ್ಷಗಳಿಂದ ಕಾಡಿನ ಮೂಲಕ ಹಾದು ಹೋಗುತ್ತಿದ್ದ. ಮತ್ತು ದೂರದ ಪ್ರದೇಶಗಳಿಗೆ ಪತ್ರಗಳನ್ನು ತುಪಿಸುತ್ತಿದ್ದ. ಅತನ ಹೆಸರು ಡಿ. ಶಿವನ್. ಅವರು ತಮಿಳುನಾಡಿನಲ್ಲಿ ಪೋಸ್ಟ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು.
ದಟ್ಟ ಕಾಡುಗಳು ಮತ್ತು ಜಲಪಾತಗಳ ಮುಖಾಂತರ 15 ಮೈಲಿ ನಡೆದು ದೂರದ ಪ್ರದೇಶದ ಹಳ್ಳಿಗಳಿಗೆ ಪತ್ರಗಳನ್ನು ತಲುಪಿಸಿದ್ದಾನೆ. ಈ ಸಂದರ್ಭದಲ್ಲಿ ಆತ ಕ್ರೂರ ಮೃಗಗಳಿಂದಲೂ ಹಲ್ಲೆಗೊಳಗಾಗಿದ್ದಾನೆ. ಆತ 30 ವರ್ಷಗಳ ಕಾಲ ಅದೇ ಕಾಡಿನಲ್ಲಿ ಭಯವಿಲ್ಲದೆ ಹೋಗಿ ತನ್ನ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದಾನೆ.
ಶಿವನ್ ಪ್ರಸ್ತುತ ನಿವೃತ್ತಿ ಹೊಂದಿದ್ದಾರೆ. ಐಎಸ್‌ಐ ಅಧಿಕಾರಿ ಸುಪ್ರಿಯಾ ಸಾಹು ಬುಧವಾರ ಕರ್ತವ್ಯವನ್ನು ನಿರ್ವಹಿಸಿರುವ ಶಿವನ್ ಅವರನ್ನು ಟ್ವೀಟ್ ಮುಖಾಂತರ ಹೊಗಳಿದ್ದಾರೆ. ಈ ಟ್ವೀಟ್ ಪ್ರಸ್ತುತ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇಲ್ಲಿಯವರೆಗೆ ಈ ಟ್ವೀಟ್‌ಗೆ ನೂರಾರು ಲೈಕ್‌ಗಳು ಮತ್ತು ಕಾಮೆಂಟ್‌ಗಳು ಬಂದಿವೆ. ಬದ್ಧತೆ ಮತ್ತು ಸಮರ್ಪಣೆಯೊಂದಿಗೆ ಕೆಲಸ ಮಾಡಿದ ಶಿವನ್ ನಿವೃತ್ತಿಗೆ ಶುಭಾಶಯ ಕೋರಿದ್ದಾರೆ. 'ರಾಷ್ಟ್ರ ನಿರ್ಮಾಣದಲ್ಲಿ ಅವರ ಪಾತ್ರವು ಹೆಚ್ಚು ಮೆಚ್ಚುಗೆ ಪಡೆದಿದೆ. ಅವರ ಬದ್ಧತೆಗೆ ಅಭಿನಂದನೆಗಳು ಮತ್ತು 'ಅವರು ಪದ್ಮ ಪ್ರಶಸ್ತಿಗೆ ಅರ್ಹರು'.ಎಂದು ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
Postman D. Sivan walked 15 kms everyday through thick forests to deliver mail in inaccessible areas in Coonoor.Chased by wild elephants,bears, gaurs,crossing slippery streams&waterfalls he did his duty with utmost dedication for 30 years till he retired last week-Dinamalar,Hindu



