HEALTH TIPS

ಕಾಸರಗೋಡು : 118 ಮಂದಿಗೆ ಕೋವಿಡ್ ಪಾಸಿಟಿವ್

   

      ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 118 ಮಂದಿಗೆ ಕೋವಿಡ್ ಪಾಸಿಟಿವ್ ದೃಢೀಕರಿಸಲಾಗಿದೆ. 103 ಮಂದಿಗೆ ಸಂಪರ್ಕ ಮೂಲಕ ಸೋಂಕು ತಗುಲಿದೆ. 3 ಮಂದಿ ವಿದೇಶದಿಂದ, 12 ಮಂದಿ ಇತರ ರಾಜ್ಯಗಳಿಂದ ಬಂದವರು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದ್ದಾರೆ.  

       ಕಾಸರಗೋಡು ನಗರಸಭೆ 14, ಮಧೂರು ಪಂಚಾಯತ್ 5, ಕಾರಡ್ಕ ಪಂಚಾಯತ್ 2, ಬದಿಯಡ್ಕ ಪಂಚಾಯತ್ 1, ಚೆಂಗಳ ಪಂಚಾಯತ್ 3, ದೇಲಂಪಾಡಿ ಪಂಚಾಯತ್ 4, ಮೊಗ್ರಾಲ್ ಪುತ್ತೂರು ಪಂಚಾಯತ್ 1, ಚೆಮ್ನಾಡ್ ಪಂಚಾಯತ್ 3, ಎಣ್ಮಕಜೆ ಪಂಚಾಯತ್ 1, ಕುಂಬಳೆ ಪಂಚಾಯತ್ 4, ಬೆಳ್ಳೂರು ಪಂಚಾಯತ್ 2, ಪುತ್ತಿಗೆ ಪಂಚಾಯತ್ 2, ಮಂಗಲ್ಪಾಡಿ ಪಂಚಾಯತ್ 5, ಕಾಂಞಂಗಾಡ್ ನಗರಸಭೆ 3, ಅಜಾನೂರು ಪಂಚಾಯತ್ 6, ಮಡಿಕೈ ಪಂಚಾಯತ್ 9, ಪಡನ್ನ ಪಂಚಾಯತ್ 3, ನೀಲೇಶ್ವರ ನಗರಸಭೆ 20, ಕಿನಾನೂರು-ಕರಿಂದಳಂ ಪಂಚಾಯತ್ 1, ತ್ರಿಕರಿಪುರ ಪಂಚಾಯತ್ 8, ಪಿಲಿಕೋಡ್ ಪಂಚಾಯತ್ 8, ಚೆರುವತ್ತೂರು ಪಂಚಾಯತ್ 11, ಈಸ್ಟ್ ಏಳೇರಿ ಪಂಚಾಯತ್ 1, ವಲಿಯಪರಂಬ ಪಂಚಾಯತ್ 2, ಕೋಡೋಂ-ಬೇಳೂರು ಪಂಚಾಯತ್ 1, ಕರಿವೆಳ್ಳೂರು ಪಂಚಾಯತ್ 1, ಪುಲ್ಲೂರು-ಪೆರಿಯ ಪಂಚಾಯತ್ 1 ಮಂದಿಗೆ ಸೋಂಕು ಖಚಿತವಾಗಿದೆ.  

        ವಿದೇಶ : ದುಬಾಯಿಯಿಂದ ಬಂದಿದ್ದ ಕುಂಬಳೆ ಪಂಚಾಯತ್‍ನ 39 ವರ್ಷದ ಪುರುಷ, ಚೆರುವತ್ತೂರು ಪಂಚಾಯತ್‍ನ 40 ವರ್ಷದ ಪುರುಷ, ರಾಸಲ್ ಖೈಮಾದಿಂದ ಆಗಮಿಸಿದ್ದ 61 ವರ್ಷದ ಪುರುಷ ಸೋಂಕು ಬಾಧಿತರು. 

        ಇತರ ರಾಜ್ಯಗಳು : ಜಮ್ಮು ವಿನಿಂದ ಬಂದಿದ್ದ ಈಸ್ಟ್ ಏಳೇರಿ ಪಂಚಾಯತ್‍ನ 27, ಕಿನಾನೂರು-ಕರಿಂದಳಂ ಪಂಚಾಯತ್‍ನ 27, ಪಡನ್ನ ಪಂಚಾಯತ್‍ನ 33 ವರ್ಷದ ಪುರುಷರು, ಮಂಗಳೂರಿನಿಂದ ಆಗಮಿಸಿದ್ದ ಚೆಮ್ನಾಡ್ ಪಂಚಾಯತ್‍ನ 56, ಬಿಹಾರದಿಂದ ಬಂದಿದ್ದ ನೀಲೇಶ್ವರ ನಗರಸಭೆಯ 32, ಮಹಾರಾಷ್ಟ್ರದಿಂದ ಆಗಮಿಸಿದ್ದ 35, ಬೆಂಗಳೂರಿನಿಂದ ಆಗಮಿಸಿದ್ದ 41 ವರ್ಷದ ಪುರುಷರು, ರಾಜಸ್ತಾನದಿಂದ ಬಂದಿದ್ದ ಚೆರುವತ್ತೂರು ಪಂಚಾಯತ್‍ನ 27 ವರ್ಷದ ಪುರುಷ, ಕರ್ನಾಟಕದಿಂದ ಆಗಮಿಸಿದ್ದ ಕುಂಬಳೆ ಪಂಚಾಯತ್‍ನ 25 ವರ್ಷದ ಪುರುಷ ಕೋವಿಡ್ ಖಚಿತಗೊಂಡವರು.

         ಆರೋಗ್ಯ ಕಾರ್ಯಕರ್ತರು : ಜಿಲ್ಲೆಯಲ್ಲಿ ಕೋವಿಡ್ ಸೋಂಕು ಖಚಿತಗೊಂಡ ಆರೋಗ್ಯ ಕಾರ್ಯಕರ್ತರು 4 ಮಂದಿ. ಕುಂಬಳೆ ಪಂಚಾಯತ್‍ನ 36, ಮಂಗಲ್ಪಾಡಿ ಪಂಚಾಯತ್‍ನ 26, ಕರಿವೆಳ್ಳೂರು ಪೇರಳಂ ಪಂಚಾಯತ್‍ನ 36 ವರ್ಷದ ಮಹಿಳೆಯರು, ಪಿಲಿಕೋಡ್ ಪಂಚಾಯತ್‍ನ 46 ವರ್ಷದ ಪುರುಷ ಸೋಂಕು ಬಾಧೆಗೊಳಗಾದವರು.

ಪೆÇಲೀಸ್ ಸಿಬ್ಬಂದಿ : 4 ಮಂದಿ ಪೆÇಲೀಸ್ ಸಿಬ್ಬಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ವಲಿಯಪರಂಬ ಪಂಚಾಯತ್‍ನ 38, ತ್ರಿಕರಿಪುರ ಪಂಚಾಯತ್‍ನ 40, ಪಿಲಿಕೋಡ್ ಪಂಚಾಯತ್‍ನ 43, ಕಯ್ಯೂರು-ಚೀಮೇನಿ ಪಂಚಾಯತ್‍ನ 49 ವರ್ಷದ ಪುರುಷರಿಗೆ ಸೋಂಕು ತಗುಲಿದೆ.     

      91 ಮಂದಿಗೆ ಕೋವಿಡ್ ನೆಗೆಟಿವ್ : ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 91 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. 

      ಕಾಸರಗೋಡು ನಗರಸಭೆ 9, ಬದಿಯಡ್ಕ ಪಂಚಾಯತ್ 1, ಮಧೂರು ಪಂಚಾಯತ್ 2, ಮೀಂಜ ಪಂಚಾಯತ್ 1, ಮಂಜೇಶ್ವರ ಪಂಚಾಯತ್ 5, ಪೈವಳಿಕೆ ಪಂಚಾಯತ್ 2, ಕುಂಬ್ಡಾಜೆ ಪಂಚಾಯತ್ 1, ಕಾಂಞಂಗಾಡ್ ನಗರಸಭೆ 7, ಪಳ್ಳಿಕ್ಕರೆ ಪಂಚಾಯತ್ 13, ಉದುಮ ಪಂಚಾಯತ್ 4, ಅಜಾನೂರು ಪಂಚಾಯತ್ 4, ಮಡಿಕೈ ಪಂಚಾಯತ್ 4, ನೀಲೇಶ್ವರ ನಗರಸಭೆ 3, ಚೆರುವತ್ತೂರು ಪಂಚಾಯತ್ 12, ಪಿಲಿಕೋಡ್ ಪಂಚಾಯತ್ 1, ಕಯ್ಯೂರು-ಚೀಮೇನಿ ಪಂಚಾಯತ್ 4, ಕರಿವೆಳ್ಳೂರು ಪಂಚಾಯತ್ 1, ವಲಿಯ ಪರಂಬ ಪಂಚಾಯತ್ 3, ಪುಲ್ಲೂರು-ಪೆರಿಯ ಪಂಚಾಯತ್ 1 ಮಂದಿ ಗುಣಮುಖರಾದವರು. 

       5288 ಮಂದಿ ನಿಗಾದಲ್ಲಿ  : ಕಾಸರಗೋಡು ಜಿಲ್ಲೆಯಲ್ಲಿ 5288 ಮಂದಿ ನಿಗಾದಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆಯ ವರದಿ ತಿಳಿಸಿದೆ. 4300 ಮಂದಿ ಮನೆಗಳಲ್ಲಿ, 988 ಮಂದಿ ಸಾಂಸ್ಥಿಕವಾಗಿ ನಿಗಾದಲ್ಲಿರುವರು. ನೂತನವಾಗಿ 393 ಮಂದಿ ನಿಗಾ ಪ್ರವೇಶ ಮಾಡಿದ್ದಾರೆ. 441 ಮಂದಿ ಸೋಮವಾರ ತಮ್ಮ ನಿಗಾ ಅವ„ ಪೂರ್ಣಗೊಳಿಸಿದ್ದಾರೆ. ನೂತನವಾಗಿ 16 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 311 ಮಂದಿಯ ಫಲಿತಾಂಶ ಲಭಿಸಲು ಬಾಕಿಯಿದೆ. ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 4049 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ ಎಂದು ಆರೋಗ್ಯ ಇಲಾಖೆಯ ವರದಿಗಳು ತಿಳಿಸಿವೆ. ಇವರಲ್ಲಿ 3206 ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದೆ. 513 ಮಂದಿ ವಿದೇಶಗಳಿಂದ, 375 ಮಂದಿ ಇತರ ರಾಜ್ಯಗಳಿಂದ ಬಂದವರು. 

      ಜಿಲ್ಲೆಯಲ್ಲಿ 2980 ಮಂದಿ ಈ ವರೆಗೆ ಗುಣಮುಖರಾಗಿದ್ದಾರೆ. 31 ಮಂದಿ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ.

         ಕೋವಿಡ್‍ನಿಂದ ಸಾವು : ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾಂಞಂಗಾಡು ಅರಯಿ ಪಾಲಕ್ಕಲ್‍ನ 66 ವರ್ಷದ ವ್ಯಕ್ತಿಯೊಬ್ಬರು ಆ.23 ರಂದು ರಾತ್ರಿ ಸಾವಿಗೀಡಾಗಿದ್ದಾರೆ. 

        ಮಾಸ್ಕ್ ಧರಿಸದ 389 ಮಂದಿ ವಿರುದ್ಧ ಕೇಸು : ಕಾಸರಗೋಡು ಜಿಲ್ಲೆಯಲ್ಲಿ ಮಾಸ್ಕ್ ಧರಿಸದ 389 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಇದರೊಂದಿಗೆ ಈ ವರೆಗೆ ಒಟ್ಟು 24918 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. 

      ಲಾಕ್ ಡೌನ್ ಉಲ್ಲಂಘನೆ : 72 ಕೇಸು : ಲಾಕ್‍ಡೌನ್ ಉಲ್ಲಂಘನೆ ಸಂಬಂಧಿಸಿ 72 ಕೇಸುಗಳನ್ನು ದಾಖಲಿಸಲಾಗಿದೆ. ಮಂಜೇಶ್ವರ 5, ಕುಂಬಳೆ 2, ಕಾಸರಗೋಡು 8, ವಿದ್ಯಾನಗರ 2, ಬದಿಯಡ್ಕ 5, ಆದೂರು 4, ಮೇಲ್ಪರಂಬ 5, ಬೇಕಲ-4, ಅಂಬಲತ್ತರ-3, ಹೊಸದುರ್ಗ-8, ನೀಲೇಶ್ವರ-9, ಚಂದೇರ-4, ಚೀಮೇನಿ-4, ಚಿಟ್ಟಾರಿಕ್ಕಲ್-4, ವೆಳ್ಳರಿಕುಂಡು-3, ರಾಜಪುರಂ-2 ಎಂಬಂತೆ ಕೇಸು ದಾಖಲಿಸಲಾಗಿದೆ. 132 ಮಂದಿಯನ್ನು ಬಂ„ಸಲಾಗಿದೆ. ವಾಹನವೊಂದನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಈ ವರೆಗೆ 3864 ಕೇಸುಗಳನ್ನು ದಾಖಲಿಸಿದ್ದು, 5263 ಮಂದಿಯನ್ನು ಬಂಧಿಸಲಾಗಿದೆ. 1331 ವಾಹನಗಳನ್ನು ವಶಪಡಿಸಲಾಗಿದೆ. ಇದು ವರೆಗೆ ಕ್ವಾರೆಂಟೈನ್ ನಿರ್ದೇಶವನ್ನು ಉಲ್ಲಂಘಿಸಿದ 877 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. 

               (ವಿಧಾನ ಸಭೆ ಅಧಿವೇಶನದ ಕಾರಣ ಕೋವಿಡ್ ರಾಜ್ಯ ಮಟ್ಟದ ವರದಿ ಪ್ರಕಟಗೊಳ್ಳುವುದರಲ್ಲಿ ವಿಳಂಬವಾಗಲಿದೆ..ಗಮನಿಸಿ.)

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries