HEALTH TIPS

15 ದಿನಗಳಲ್ಲಿ 'ಡಾಲ್ಫಿನ್‌ ಯೋಜನೆ' ಆರಂಭ; ಜಾವಡೇಕರ್‌

         ನವದೆಹಲಿ: ಡಾಲ್ಫಿನ್ ಗಳ ಸಂರಕ್ಷಣೆಗಾಗಿ ಮುಂದಿನ 15 ದಿನಗಳೊಳಗೆ 'ಡಾಲ್ಫಿನ್ ಯೋಜನೆ' ಆರಂಭಿಸುವುದಾಗಿ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಪ್ರಕಾಶ್ ಜಾವಡೇಕರ್ ಸೋಮವಾರ ಹೇಳಿದ್ದಾರೆ.

         ಸ್ವಾತಂತ್ರ್ಯೋತ್ಸವದ ದಿನದಂದು ಪ್ರಧಾನಿ ನರೇಂದ್ರ ಡಾಲ್ಫಿನ್ ಯೋಜನೆಯ ಕುರಿತು ಪ್ರಕಟಿಸಿದ್ದರು. ಈ ಯೋಜನೆಯಡಿ ನದಿಗಳು ಮತ್ತು ಸಾಗರದಲ್ಲಿ ಜೀವಿಸುವ ಡಾಲ್ಫಿನ್ ಗಳನ್ನು ಸಂರಕ್ಷಿಸುವ ಮೂಲಕ ಸಂಖ್ಯೆಯನ್ನು ಹೆಚ್ಚಿಸಲಾಗುವುದು. ಡಾಲ್ಫಿನ್ ಗಳು ಪತ್ತೆಯಾದಲ್ಲಿ, ಮೀನುಗಾರರು ಮತ್ತು ಸ್ಥಳೀಯ ಜನ ನೆರವಿನಿಂದ ಈ ಯೋಜನೆಯನ್ನು ಜಾರಿಗೊಳಿಸಲಾಗುವುದು.

      ಈ ಸಂಬಂಧ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾರ್ಯದರ್ಶಿಗಳು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ವರ್ಚ್ಯುವಲ್ ಸಭೆ ನಡೆಸಿದ ಜಾವಡೇಕರ್ ನಮ್ಮ ನದಿಗಳಲ್ಲಿ 3 ಸಾವಿರ ಡಾಲ್ಫಿನ್ ಗಳಿವೆ. 12 ರಾಜ್ಯಗಳ ಸಾಗರಗಳಲ್ಲಿ ಕೂಡ ಡಾಲ್ಫಿನ್ ಗಳು ಕಂಡುಬಂದಿವೆ. 15 ದಿನಗಳಲ್ಲಿ ಈ ಯೋಜನೆಯ ವಿನ್ಯಾಸಗೊಳಿಸಲು ಆರಂಭಿಸಲಾಗುವುದು ಎಂದರು. 
     ಗುಜರಾತ್ ನಲ್ಲಿ ಆರಂಭಗೊಂಡಿರುವ ಸಿಂಹಗಳ ಸಂರಕ್ಷಣೆಯ 'ಸಿಂಹ ಯೋಜನೆ'ಯನ್ನು ಇಡೀ ದೇಶಕ್ಕೆ ವಿಸ್ತರಿಸಲಾಗುವುದು ಎಂದರು. ಈ ಯೋಜನೆಯನ್ನು ಕೂಡ ಮೋದಿ ಘೋಷಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries