ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ 174 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. 154 ಮಂದಿಗೆ ಸಂಪರ್ಕದ ಮೂಲಕ ರೋಗ ಬಾಧಿಸಿದೆ. 15 ಮಂದಿ ವಿದೇಶದಿಂದಲೂ, ಐವರು ಇತರ ರಾಜ್ಯಗಳಿಂದ ಬಂದವರು. 89 ಮಂದಿ ಗುಣಮುಖರಾಗಿದ್ದಾರೆ.
ಪಂಚಾಯತಿವಾರು ವಿವರ:
ಬೆಳ್ಳೂರು-1, ಚೆಂಗಳ-4, ಕರಿವೆಳ್ಳೂರು-1, ತೃಕ್ಕರಿಪುರ-11, ಕಾಂಞಂಗಾಡ್-19, ಅಜಾನೂರು-15, ಪುಲ್ಲೂರು-ಪೆರಿಯ-8, ಮಡಿಕೈ-4, ಪಳ್ಳಿಕೆರೆ-22, ಮಧೂರು-6, ಕುಂಬಳೆ-9, ಚೆಮ್ನಾಡ್-16, ಕಾಸರಗೋಡು-8, ಮೊಗ್ರಾಲ್‍ಪುತ್ತೂರು-1, ಮಂಜೇಶ್ವರ-6, ಮಂಗಲ್ಪಾಡಿ-1, ಕಳ್ಳಾರ್-7, ಪನತ್ತಡಿ-1, ಉದುಮ-15, ಮುಳಿಯಾರು-1, ಎಣ್ಮಕಜೆ-1, ಪುತ್ತಿಗೆ-2, ವಲಿಯಪರಂಬ-1, ಪಿಲಿಕೋಡು-3, ನೀಲೇಶ್ವರ-3, ಕಯ್ಯೂರು-ಚೀಮೇನಿ-5, ಕಳನಾಡು-1, ಕಾರಡ್ಕ-1, ತಲಶ್ಶೇರಿ-1 ಎಂಬಂತೆ ರೋಗ ಬಾಧಿಸಿದೆ.
ಮಾಸ್ಕ್ ಧರಿಸದ 380 ಮಂದಿ ವಿರುದ್ಧ ಕೇಸು : ಮಾಸ್ಕ್ ಧರಿಸದೇ ಇದ್ದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 380 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಈ ಮೂಲಕ ಈ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ಜಿಲ್ಲೆಯಲ್ಲಿ ದಾಖಲಾದ ಕೇಸುಗಳ ಸಂಖ್ಯೆ 22980 ಆಗಿದೆ.
ಲಾಕ್‍ಡೌನ್ ಉಲ್ಲಂಘನೆ :37 ಕೇಸುಗಳು : ಲಾಕ್‍ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 37 ಕೇಸುಗಳನ್ನು ದಾಖಲಿಸಲಾಗಿದೆ. 47 ಮಂದಿಯನ್ನು ಬಂ„ಸಲಾಗಿದೆ. ಒಂದು ವಾಹನವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಮಂಜೇಶ್ವರ ಪೆÇಲೀಸ್ ಠಾಣೆಯಲ್ಲಿ 4 ಕೇಸು, ಕಾಸರಗೋಡು 3, ವಿದ್ಯಾನಗರ 3, ಬದಿಯಡ್ಕ 2, ಆದೂರು 3, ಬೇಡಗಂ 3, ಮೇಲ್ಪರಂಬ 5, ಬೇಕಲ 1, ಅಂಬಲತ್ತರ 2, ಹೊಸದುರ್ಗ 6, ನೀಲೇಶ್ವರ 1, ಚಂದೇರ 1, ಚೀಮೇನಿ 1, ಚಿತ್ತಾರಿಕಲ್ 1, ರಾಜಪುರಂ 1 ಕೇಸು ದಾಖಲಾಗಿವೆ.
ಈ ಮೂಲಕ ಈ ಪ್ರಕರಣಗಳಿಗೆ ಸಂಬಂಧಿಸಿ ಕಾಸರಗೋಡು ಜಿಲ್ಲೆಯಲ್ಲಿ ದಾಖಲಾದ ಕೇಸುಗಳ ಸಂಖ್ಯೆ 3595 ಆಗಿದೆ. 4828 ಮಂದಿಯನ್ನು ಬಂ„ಸಲಾಗಿದೆ. 1324 ವಾಹನಗಳನ್ನು ವಶಪಡಿಸಲಾಗಿದೆ.
ಕ್ವಾರೆಂಟೈನ್ ಉಲ್ಲಂಘನೆ : 876 ಮಂದಿಗೆ ಕೇಸು : ಕ್ವಾರೆಂಟೈನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ 876 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ.


