ಕಾಸರಗೋಡು: ಕೇರಳ ರಾಜ್ಯ ವಿದ್ಯುನ್ಮಂಡಳಿ ನಿಗಮದ 220 ಕೆ.ವಿ. ಅಂಬಲತ್ತರ ಸೋಲಾರ್ ಸಬ್ ಸ್ಟೇಷನ್ ಮತ್ತು ರಾಜಪುರಂ 33 ಕೆ.ವಿ. ಸಬ್ ಸ್ಟೇಷನ್ ಉದ್ಘಾಟನೆ ಸೋಮವಾರ ಜರಗಿತು.
ವೀಡಿಯೋ ಕಾನ್ ಫೆರೆನ್ಸ್ ಮೂಲಕ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟನೆ ನಡೆಸಿದರು. ಕಂದಾಯ ಸಚಿವ ಇ.ಚಂದ್ರಶೇಖರನ್ ಶಿಲಾಫಲಕವನ್ನು ಅನಾವರಣಗೊಳಿಸಿದರು.
ನಮ್ಮ ದೇಶದಲ್ಲಿ ಸೌರಶಕ್ತಿ ಬಳಕೆಗೆ ಪೆÇ್ರೀತ್ಸಾಹ ನೀಡುವ ನಿಟ್ಟಿನಲ್ಲಿ ಕೇಂದ್ರ-ರಾಜ್ಯ ಸರಕಾರಗಳು ಜಂಟಿಯಾಗಿ ನಡೆಸುವ ಜವಾಹರ್ ಲಾಲ್ ನೆಹರೂ ರಾಷ್ಟ್ರೀಯ ಸೌರಶಕ್ತಿ ಮಿಷನ್ ಅಂಗವಾಗಿ ಕಾಞಂಗಾಡಿನ ವೆಳ್ಳುಯುಡದಲ್ಲಿ ಜಾರಿಗೊಳಿಸಿರುವ 50 ಮೆಗಾವಾಟ್ ಸಾಮಥ್ರ್ಯದ ಸೌರಶಕ್ತಿ ಪ್ಲಾಂಟ್ ನಿಂದ ಉತ್ಪಾದಿಸುವ ವಿದ್ಯುತ್ತನ್ನು ಸಂಗ್ರಹಿಸುವ ನಿಟ್ಟಿನಲ್ಲಿ ಅಂಬಲತ್ತರ 220 ಕೆ.ವಿ. ಸ್ಟೇಷನ್ ಸ್ಥಾಪಿಸಲಾಗಿದೆ. ಈ ಸಬ್ ಸ್ಟೇಷನ್ ನ ಮತ್ತು ತತ್ಸಂಬಂಧಿ ಲೈನ್ ಗಳ ನಿರ್ಮಾಣಕ್ಕಾಗಿ 39 ಕೋಟಿ ರೂ. ವೆಚ್ಚ ಮಾಡಲಾಗಿದೆ. ಸೋಲಾರ್ ಪ್ಲಾಂಟ್ ನಿಂದ ಉತ್ಪಾದಿಸಲಾಗುವ 50 ಮೆಗಾವ್ಯಾಟ್ ವಿದ್ಯುತ್ತನ್ನು 33 ಕೆ.ವಿ.5 ಫೀಡರ್ ಗಳ ಮೂಲಕ ಅಂಬಲತ್ತರ ಸ್ಟೇಷನ್ ಗೆ ತಲಪಿಸಲಾಗುವುದು.

