HEALTH TIPS

ಹೆಂಡ್ತಿಯನ್ನು ಹೆಚ್ಚು ಪ್ರೀತಿಸಿದ್ರೂ ಕಷ್ಟ ಮಾರಾಯ್ರೆ!-ಪತಿ ಹೆಚ್ಚು ಪ್ರೀತಿಸುತ್ತಾರೆ, ಜಗಳವೇ ಆಡುವುದಿಲ್ಲ ಎಂದು ವಿಚ್ದೇದನಕ್ಕೆ ಅರ್ಜಿ ಸಲ್ಲಿಸಿದ ಪತ್ನಿ!

       ಲಖನೌ: ನನ್ನ ಪತಿ ಹೆಚ್ಚು ಪ್ರೀತಿಸುತ್ತಾರೆ, ಜಗಳವೇ ಆಡುವುದಿಲ್ಲ ಎಂದು ಆರೋಪಿಸಿ ಪತ್ನಿಯೊಬ್ಬಳು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

           ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿನ ಶರಿಯಾ ಕೋರ್ಟ್ ನಲ್ಲಿ ಇಂತಹ ವಿಚಿತ್ರ ಅರ್ಜಿ ಸಲ್ಲಿಕೆಯಾಗಿದ್ದು, ಕೇವಲ 18 ತಿಂಗಳ ಹಿಂದಷ್ಟೇ ಮದುವೆಯಾದ ನವ ವಿವಾಹಿತ ಮಹಿಳೆ ವಿಚ್ಛೇಧನಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದಾಳೆ. 

                   ಇಷ್ಟಕ್ಕೂ ಏನಿದು ಪ್ರಕರಣ?
      ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ನಿವಾಸಿಯಾಗಿರುವ ಮಹಿಳೆ ಕಳೆದ 18ತಿಂಗಳ ಹಿಂದೆ ವಿವಾಹವಾಗಿದ್ದಳು. ಮದುವೆಯಾದ ದಿನದಿಂದ ಇಲ್ಲಿಯವರೆಗೂ ಆಕೆಯ ಗಂಡ ಆಕೆಯೊಂದಿಗೆ ಜಗಳವಾಡಿಲ್ಲ. ಆತನ ಅತಿಯಾದ ಪ್ರೀತಿಯಿಂದ ನಾನು ರೋಸಿ ಹೋಗಿದ್ದೇನೆ. ನನಗೆ ವಿಚ್ಛೇದನ ಕೊಡಿ ಎಂದು ಮಹಿಳೆ  ಅಲ್ಲಿನ ಶರಿಯಾ ಕೋರ್ಟ್ ಗೆ ಅರ್ಜಿ ಸಲ್ಲಿಕೆ ಮಾಡಿದ್ದಾಳೆ. 

      ಅರ್ಜಿಯಲ್ಲಿ, 'ತನ್ನ ಗಂಡ ತನ್ನನ್ನು ಅತಿಯಾಗಿ ಪ್ರೀತಿಸುತ್ತಿದ್ದಾನೆ ಹಾಗೂ ಜಗಳವೇ ಆಡುವುದಿಲ್ಲ. ತನ್ನ ಪತಿಯ ‘ವಿಪರೀತ ಪ್ರೀತಿ’ಯನ್ನು ಅರಗಿಸಿಕೊಳ್ಳಲು ಕಷ್ಟವಾಗುತ್ತಿದೆ. ಕಳೆದ 18 ತಿಂಗಳುಗಳಲ್ಲಿ ಒಮ್ಮೆಯೂ ಆತನ ಜತೆ ಜಗಳವಾಗಿಲ್ಲ, ಇದರಿಂದ ಬೇಸತ್ತು ಹೋಗಿದೆ. ತನ್ನ ಪತಿ ಮನೆಗೆಲಸದಲ್ಲಿ ಸಹಾಯ  ಮಾಡುತ್ತಾರೆ, ಯಾವತ್ತೂ ತನ್ನ ಮೇಲೆ ರೇಗುವುದಿಲ್ಲ, ತಪ್ಪು ಮಾಡಿದರೂ ಕ್ಷಮಿಸಿ ಬಿಡುತ್ತಾರೆ, ನನಗೆ ಅವರ ಜತೆ ಜಗಳವಾಡಬೇಕಿದೆ, ಎಲ್ಲದ್ದಕ್ಕೂ ತಲೆ ಅಲ್ಲಾಡಿಸುವ ಪತಿ ನನಗೆ ಬೇಡ. ದಯಮಾಡಿ ವಿಚ್ಛೇದನ ಕೊಡಿಸಿ ಎಂದು ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದಾಳೆ.

       ಈ ವಿಚಿತ್ರ ಅರ್ಜಿಯನ್ನು ಸ್ವೀಕರಿಸಿದ ಶರಿಯಾ ಕೋರ್ಟ್ ನ ಧರ್ಮಗುರುಗಳು ಆಕೆ ವಿಚ್ಛೇದನಕ್ಕೆ ನೀಡಿರುವ ಕಾರಣ ನೋಡಿ ತಬ್ಬಿಬ್ಬಾಗಿದ್ದಾರೆ. ಈ ಕುರಿತು ವಿಚಾರಣೆ ನಡೆಸಿದ ಧರ್ಮಗುರುಗಳು ವಿಚ್ಛೇದನ ಕೋರಿರುವುದಕ್ಕೆ ಬೇರೆ ಯಾವುದೇ ಕಾರಣವಿದೆಯೇ ಎಂದು ಕೇಳಿದಾಗ ಆಕೆ ಇಲ್ಲವೆಂದಿದ್ದಾಳೆ.  ಅಂತೆಯೇ ಆಕೆಯ ಪತಿ ಮಾತ್ರ ತಾನೇನೂ ತಪ್ಪು ಮಾಡಿಲ್ಲ, ಬದಲಾಗಿ ಪರಿಪೂರ್ಣ ಪತಿಯಾಗಿರಬೇಕೆಂದು ಬಯಸಿದ್ದೆ ಎಂದು ಹೇಳಿದ್ದಾನೆ.

        ಈ ವಿಚಿತ್ರ ಪ್ರಕರಣದ ತೀರ್ಪು ನೀಡಿದ ಧರ್ಮಗುರುಗಳು ವಿಚ್ಛೇಧನಕ್ಕೆ ಆಕೆ ನೀಡಿರುವ ಕಾರಣಗಳನ್ನು ಕ್ಷುಲ್ಲಕ ಎಂದು ಪರಿಗಣಿಸಿ ಅರ್ಜಿಯನ್ನು ತಿರಸ್ಕರಿಸಿದೆ. ಅಂತೆಯೇ ಇಬ್ಬರೂ  ತಮ್ಮ ನಡುವಿನ ಸಮಸ್ಯೆಯನ್ನು ಸೌಹಾರ್ದಯುತವಾಗಿ ಪರಿಹರಿಸಿಕೊಳ್ಳಬೇಕು ಎಂದು ನ್ಯಾಯಾಲಯ ಹೇಳಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries