HEALTH TIPS

'ನಿರ್ಣಾಯಕ ಹಂತದಲ್ಲಿ ಕೋವಿಡ್ ವ್ಯಾಪಕತೆ-ಪಿಣರಾಯಿ ವಿಜಯನ್


    ತಿರುವನಂತಪುರ: ರಾಜ್ಯದಲ್ಲಿ ಕೋವಿಡ್ ಹರಡುವಿಕೆಯು ನಿರ್ಣಾಯಕ ಹಂತದಲ್ಲಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಿನ್ನೆ ಹೇಳಿರುವರು. ದಕ್ಷಿಣದ ಇತರ ರಾಜ್ಯಗಳಲ್ಲಿ ಕೋವಿಡ್ ಹರಡುವಿಕೆಯ ವೇಗದ ಹೊರತಾಗಿಯೂ ಕೇರಳವು ತನ್ನದೇ ಆದ ಹಿಡಿತ ಸಾಧಿಸಲು ಸಾಧ್ಯವಾಯಿತು ಎಂದು ಮುಖ್ಯಮಂತ್ರಿ ಹೇಳಿದರು. ವಿಶ್ವದ ಅತ್ಯಂತ ಕಡಿಮೆ ಮರಣ ಪ್ರಮಾಣ ಎಂಬ ಖ್ಯಾತಿಯನ್ನು ಉಳಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

             ಕೇರಳದ ಈವರೆಗಿನ ನಿಯಂತ್ರಣ ಬಿಗಿಯಾಗಿತ್ತು: 

    ಭಾರತದಲ್ಲಿ ಕೋವಿಡ್ ಹರಡುವಿಕೆ ಅತಿ ವೇಗದಲ್ಲಿದ್ದಾಗಲೂ ಕೇರಳ ಯಶಸ್ವಿಯಾಗಿ ನಿಯಂತ್ರಿಸಿದೆ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು. ಕೇರಳದಲ್ಲಿ ರೋಗ ಹರಡುವುದು ಮತ್ತು ಸಾವಿನ ಪ್ರಮಾಣವನ್ನು ಒಂದು ಹಂತದ ವರೆಗೆ ನಿಯಂತ್ರಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು. ಕೇರಳದಲ್ಲಿ ಸಾವಿನ ಪ್ರಮಾಣ ಒಂದು ದಶಲಕ್ಷದಲ್ಲಿ ಎಂಟು ಮಾತ್ರ. ದಕ್ಷಿಣ ಭಾರತದ ಇತರ ರಾಜ್ಯಗಳಿಗೆ ಹೋಲಿಸಿದರೆ ಕೇರಳ ಇನ್ನೂ ನಿಯಂತ್ರಣ ವಿಧೇಯವಾಗಿದೆ.ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವುದು ಮತ್ತು ಜನರ ಭಾಗವಹಿಸುವಿಕೆಯೊಂದಿಗೆ ಬ್ರೇಕ್ ದಿ ಚೈನ್ ಅಭಿಯಾನವನ್ನು ಹೆಚ್ಚು ಪರಿಣಾಮಕಾರಿಯಾಗಿಸಿದ ಯೋಜನೆಯಿಂದ ಈ ಯಶಸ್ಸು ಸಾಧ್ಯವಾಯಿತೆಂದು ಸಿಎಂ ಹೇಳಿದರು.

              ವ್ಯವಸ್ಥೆಗಳು ಹತೋಟಿಯಲ್ಲಿ: 

     ರಾಜ್ಯದಲ್ಲಿ ಕೋವಿಡ್ ಹರಡುವಿಕೆಯಲ್ಲಿ ಪ್ರಸ್ತುತ ನಿರ್ಣಾಯಕ ಪರಿಸ್ಥಿತಿ ಇದೆ ಎಂದು ಮುಖ್ಯಮಂತ್ರಿ ಹೇಳಿದರು. ಪ್ರಸ್ತುತ ರಾಜ್ಯದಲ್ಲಿ ಕೋವಿಡ್ ಸಾಂಕ್ರಾಮಿಕತೆಯು ಅನಿರೀಕ್ಷಿತ ಪರಿಸ್ಥಿತಿ ಎದುರಿಸುತ್ತಿದೆ ಎಂದು ಹೇಳಲಾಗುವುದಿಲ್ಲ. ಆದರೆ, ಪ್ರಸ್ತುತ ಇರುವ ರೋಗಿಗಳಿಗಿಂತ ಸುಮಾರು ಎಂಟು ಪಟ್ಟು ಹೆಚ್ಚು ರೋಗಿಗಳಿದ್ದಾರೆ ಎಂದು ಸಿಎಂ ಹೇಳಿದರು. ರಾಜ್ಯದ ಸರ್ಕಾರಿ ವ್ಯವಸ್ಥೆಯಲ್ಲಿ ಕೋವಿಡ್ ಚಿಕಿತ್ಸೆ ಉಚಿತ. ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ಐಸಿಯು ಚಿಕಿತ್ಸೆಗೆ ದಿನಕ್ಕೆ ಕೇವಲ 6,500 ರೂ. ಮಾತ್ರ ಖರ್ಚಾಗುತ್ತದೆ, ಇದು ಇತರ ರಾಜ್ಯಗಳಿಗಿಂತ ಕಡಿಮೆಯಾಗಿದೆ ಎಂದು ಸಿಎಂ ಹೇಳಿದರು.

             ದೇಶದ ಪರಿಸ್ಥಿತಿ ಭೀಕರವಾಗಿದೆ

   ದೇಶದಲ್ಲಿ ಕೋವಿಡ್ ಹರಡುವಿಕೆಯಲ್ಲಿ ವಿಪರೀತ ಏರುಗತಿ ಈಗಿದೆ. ಭಾರತವು ಪ್ರಸ್ತುತ ವಿಶ್ವದಲ್ಲಿ ಪ್ರತಿದಿನ ಅತಿ ಹೆಚ್ಚು ಕೋವಿಡ್ ಪ್ರಕರಣಗಳನ್ನು ವರದಿ ಮಾಡುವ ದೇಶವಾಗಿದೆ ಮತ್ತು ದೇಶದಲ್ಲಿ ಪ್ರತಿದಿನ ಸಾವಿರಕ್ಕೂ ಹೆಚ್ಚು ಸಾವುಗಳು ಸಂಭವಿಸುತ್ತಿವೆ ಎಂದು ಮುಖ್ಯಮಂತ್ರಿ ಹೇಳಿದರು. ಪ್ರಸ್ತುತ, ದೈನಂದಿನ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಭಾರತವು ಮೊದಲ ಸ್ಥಾನದಲ್ಲಿದೆ ಮತ್ತು ವೆಲ್ಡೋಮೀಟರ್ ವರದಿಯ ಪ್ರಕಾರ ಬ್ರೆಜಿಲ್ ಎರಡನೇ ಸ್ಥಾನದಲ್ಲಿದೆ ಎಂದರು.

           ಕೋವಿಡ್ ಅಪಾಯಕಾರಿ ಅಲ್ಲ ಎಂಬ ಸುಳ್ಳು ಪ್ರಚಾರ:

     ಕೋವಿಡ್ -19 ವೈರಸ್ ಅಪಾಯಕಾರಿ ಅಲ್ಲ ಎಂದು ಸುಳ್ಳು ಪ್ರಚಾರ ಹರಡುತ್ತಿದೆ ಎಂದು ಮುಖ್ಯಮಂತ್ರಿ ಗಮನಸೆಳೆದರು. ಕೊವಿಡ್ -19 ರ ಸಾವಿನ ಪ್ರಮಾಣ ಕೇವಲ ಒಂದು ಶೇಕಡಾ ಎಂದು ಕೆಲವರು ಹೇಳುತ್ತಾರೆ. ಆದರೆ 3.5 ಕೋಟಿ ಜನಸಂಖ್ಯೆ ಹೊಂದಿರುವ ಕೇರಳದಲ್ಲಿ ಒಂದು ಶೇಕಡಾ 3.5 ಲಕ್ಷ ಮತ್ತು ಅವರಲ್ಲಿ ಅರ್ಧದಷ್ಟು ಜನರು ಸತ್ತರೂ ಅದು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿರುತ್ತದೆ ಎಂದು ಸಿಎಂ ಹೇಳಿದರು. ಸಾವುಗಳನ್ನು ಕಡಿಮೆ ಮಾಡುವ ಗುರಿ ಸರ್ಕಾರ ಹೊಂದಿದೆ. ಕೋವಿಡ್ ರಕ್ಷಣೆಯಲ್ಲಿ ಸ್ವೀಡನ್ ಮಾದರಿಯನ್ನು ಅನುಸರಿಸಲು ಸಾಧ್ಯವಿಲ್ಲ ಎಂದು ಸಿಎಂ ಹೇಳಿದರು.  


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries