ಕಾಸರಗೋಡು: ಡೈರಿ ಅಭಿವೃದ್ಧಿ ಇಲಾಖೆ ಜಾರಿಗೆ ತಂದಿರುವ ಜಿಲ್ಲಾ ಮಟ್ಟದಲ್ಲಿ ಕೋವಿಡ್ ಸಹಕಾರದ ಮೇವಿನ ಆರ್ಥಿಕ ನೆರವು ಯೋಜನೆಯನ್ನು ಕಂದಾಯ ಸಚಿವ ಇ.ಚಂದ್ರಶೇಖರನ್ ಸೋಮವಾರ ಉದ್ಘಾಟಿಸಿದರು.
ಯೋಜನೆಯ ಭಾಗವಾಗಿ, ಏಪ್ರಿಲ್‍ನಲ್ಲಿ 141 ಡೈರಿ ಕೋ-ಆಪರೇಟಿವ್ ಸೊಸೈಟಿಗಳಿಂದ ಜಿಲ್ಲೆಯ 7,327 ಡೈರಿ ರೈತರಿಗೆ ಐದು ಚೀಲ ಮೇವನ್ನು ವಿತರಿಸಲಾಗುವುದು. ಹಾಲುತ್ಪಾದಕರು ಡೈರಿಗಳಿಗೆ ವಿತರಿಸುವ ಹಾಲಿನ ಅಳತೆಗಳಿಗೆ ಅನುಗುಣವಾಗಿ ಚೀಲಕ್ಕೆ 400 ರೂ.ವಿನಂತೆ ವಿತರಿಸಲಾಗುತ್ತದೆ.
ಕಲೆಕ್ಟರೇಟ್ ಮಿನಿ ಕಾನ್ಫರೆನ್ಸ್ ಹಾಲ್‍ನಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಮತ್ತು ಎ.ಡಿ.ಎಂ. ಎನ್ ದೇವಿದಾಸ್ ಉಪಸ್ಥಿತರಿದ್ದರು.

