ಕಾಸರಗೋಡು:ಕಾಞಂಗಾಡ್ ಚೆಮ್ಮಟ್ಟಂ ಕ್ಷೇತ್ರ ವಿಜ್ಞಾನ ಉದ್ಯಾನದಲ್ಲಿ ಕಾರ್ಯಾಚರಿಸುತ್ತಿರುವ ಜಿಲ್ಲಾ ಕರೋನಾ ನಿಯಂತ್ರಣ ಕೇಂದ್ರದ ಕಾರ್ಯವೈಖರಿಯನ್ನು ನಿರ್ಣಯಿಸಲು ಕಂದಾಯ ಮತ್ತು ವಸತಿ ಸಚಿವ ಇ ಚಂದ್ರಶೇಖರನ್ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಉಪಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್, ಕಾಞಂಗಾಡ್ ನಗರ ಸಭಾಧ್ಯಕ್ಷ ವಿ.ವಿ.ರಮೇಶನ್, ಜಿಲ್ಲಾ ವೈದ್ಯಾಧಿಕಾರಿ ಡಾ.ರಾಂ.ದಾಸ್ ಎ.ವಿ, ಜಿಲ್ಲಾ ಕಾರ್ಯಕ್ರಮ ಪ್ರಬಂಧಕ ಡಾ.ರಾಮನ್ ಸ್ವಾತಿ ವಾಮನ್ ಮೊದಲಾದವರು ಉಪಸ್ಥಿತರಿದ್ದು ಮೆಚ್ಚುಗೆ ವ್ಯಕ್ತಪಡಿಸಿ ಸಲಹೆ ಸೂಚನೆ ನೀಡಿದರು.


